ಪುನೀತ್ ಪುಣ್ಯಸ್ಮರಣೆಗೆ ಸೇವಾ ನಮನ

IMG-20221029-WA0091.jpg
Published on

ದಾವಣಗೆರೆ : ಪುನೀತ್ ರಾಜಕುಮಾರ್ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಅವರ ಅಭಿಮಾನಿಗಳು ಶನಿವಾರ, ಜಿಲ್ಲೆಯಾದ್ಯಂತ ಹಲವು ಸೇವಾ ಕಾರ್ಯಗಳಲ್ಲಿ ಭಾಗಿಯಾದರು.
ಅಪ್ಪು ಸ್ಮರಣೆಯಲ್ಲಿ ವಿವಿಧೆಡೆ ಅನ್ನಸಂತರ್ಪಣೆ ಮಾಡಲಾಯಿತು. ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗಿತ್ತು. ಪುನೀತ್ ಪ್ರತಿಮೆ, ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ನೆಚ್ಚಿನ ನಟನಿಗೆ ಗೌರವ ಸಲ್ಲಿಸಲಾಯಿತು.
ನಗರದ ಎಂಸಿಸಿ ‘ಬಿ’ ಬ್ಲಾಕ್‌ನ ಈಜುಕೊಳದ ಬಳಿಯ ಉದ್ಯಾನವನದಲ್ಲಿನ ‘ಪುನೀತ್ ಆನಂದಗೂಡು’ನಲ್ಲಿ ಅಪ್ಪು ಪ್ರತಿಮೆಗೆ ಪೂಜೆ ಸಲ್ಲಿಸಲಾಯಿತು. ಇದೇ ವೇಳೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ಮಹಾನಗರ ಪಾಲಿಕೆಯ ವಿಪಕ್ಷ ನಾಯಕ ಗಡಿಗುಡಾಳ್ ಮಂಜುನಾಥ್, ಕೆಪಿಸಿಸಿ ವಕ್ತಾರ ಡಿ. ಬಸವರಾಜ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ಮುಖಂಡ ಕೆ.ಜಿ. ಶಿವಕುಮಾರ್ ಮಾತನಾಡಿದರು.
ಪಾಲಿಕೆ ಸದಸ್ಯರಾದ ಕೆ. ಚಮನ್ ಸಾಬ್, ಸವಿತಾ ಹುಲ್ಲುಮನೆ ಗಣೇಶ್, ಆಶಾ ಉಮೇಶ್, ಸವಿತಾ, ಮುಖಂಡರಾದ ಮಲ್ಲಿಕಾರ್ಜುನ್, ಜಾನ್ ಅಲೆಕ್ಸಾಂಡರ್, ಯುವರಾಜ್, ಉಮೇಶ್, ಮಂಜುನಾಥ್, ನಿಖಿಲ್, ಭರತ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net