ಬಿಜೆಪಿ ಸಮಾವೇಶ ಸ್ಥಳದಲ್ಲಿ ಭೂಮಿಪೂಜೆ

dvg-bhoomi-puje-16-1.jpg
Published on

ದಾವಣಗೆರೆ: ಮಾ. 25 ರಂದು ನಡೆಯಲಿರುವ ಜನಸಂಕಲ್ಪ ಯಾತ್ರೆಗಳ ಸಮಾರೋಪ ‘ಮಹಾ ಸಂಗಮ’ದ ಪೆಂಡಾಲ್ ನಿರ್ಮಾಣಕ್ಕೆ ರಾಜ್ಯ ಬಿಜೆಪಿ ಅಧ್ಯಕ್ಷ ನಗರದ ಜಿ.ಎಂ.ಐ.ಟಿ. ಕಾಲೇಜು ಪಕ್ಕದಲ್ಲಿ ಗುರುವಾರ ಭೂಮಿಪೂಜೆ ನೆರವೇರಿಸಿದರು.
 ಸಂಸದರಾದ ಜಿ.ಎಂ. ಸಿದ್ದೇಶ್ವರ, ದೇವೇಂದ್ರಪ್ಪ, ಶಾಸಕರಾದ ಎಸ್.ಎ. ರವೀಂದ್ರನಾಥ್, ಎಸ್.ವಿ. ರಾಮಚಂದ್ರ, ಪ್ರೊ.ಎನ್. ಲಿಂಗಣ್ಣ, ಜಿ.ಎಚ್. ತಿಪ್ಪಾರೆಡ್ಡಿ, ಅರುಣ್ ಕುಮಾರ್ ಪೂಜಾರ್, ಸೋಮಶೇಖರ್ ರೆಡ್ಡಿ, ಸೋಮಲಿಂಗಪ್ಪ, ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್. ನವೀನ್, ಹೇಮಲತ, ಆರ್. ಶಂಕರ್, ಕೇಶವಪ್ರಸಾದ್ ಇದ್ದರು.
 ಮಾಜಿ ಶಾಸಕ ಬಿ.ಪಿ. ಹರೀಶ್, ಬಸವರಾಜ ನಾಯ್ಕ, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ, ಪಕ್ಷದ ಜಿಲ್ಲಾಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ, ದೂಡಾ ಅಧ್ಯಕ್ಷ ಎ.ವೈ. ಪ್ರಕಾಶ್, ಮುಖಂಡರಾದ ಸುಧಾ ಜಯರುದ್ರೇಶ್, ಶಿವಲಿಂಗಪ್ಪ, ಬಿ.ಎಸ್. ಜಗದೀಶ್ ಪಾಲ್ಗೊಂಡಿದ್ದರು.
 ‘ಮಹಾಸಂಗಮ’ ಸಮಾವೇಶ ನಡೆಯಲಿರುವ ಮೈದಾನದಲ್ಲಿ ಗುರುವಾರ ಭೂಮಿಪೂಜೆಗೆ ಮೊದಲು ನಾಗರಹಾವು ಪ್ರತ್ಯಕ್ಷವಾಯಿತು!
 ಸಮಾವೇಶಕ್ಕಾಗಿ 450 ಎಕರೆ ಪ್ರದೇಶವನ್ನು ಸಮತಟ್ಟುಗೊಳಿಸಲಾಗಿದ್ದು ಪೆಂಡಾಲ್ ಹಾಗೂ ವೇದಿಕೆ ನಿರ್ಮಾಣಕ್ಕೆ ಭೂಮಿಪೂಜೆ ಮಾಡಲು ಬಿಜೆಪಿ ರಾಜ್ಯಾಧ್ಯಕ್ಷ ಬರುವ ಕೆಲವೇ ನಿಮಿಷಗಳ ಮೊದಲು ನಾಗರ ಹಾವು ಕಾಣಿಸಿಕೊಂಡಿತು.
 ಗಾಯಗೊಂಡಿದ್ದ ಆ ಹಾವು ಸ್ವಲ್ಪ ಹೊತ್ತಿನ ಬಳಿಕ ನಿಧಾನವಾಗಿ ಅಲ್ಲಿಂದ ಹೋಯಿತು.
 ...
 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net