ಲೋಕಾಯುಕ್ತರ ಸಮ್ಮತಿ ಇರುವವರ ನೇಮಕ ಅಗತ್ಯ

lok-1.jpg
Published on

ದಾವಣಗೆರೆ : ಸರ್ಕಾರ ತನಗೆ ಇಷ್ಟವಾದ ಅಧಿಕಾರಿಗಳನ್ನು ಲೋಕಾಯುಕ್ತಕ್ಕೆ ಕಳಿಸದೆ, ಲೋಕಾಯುಕ್ತರ ಸಮ್ಮತಿ ಇರುವವರನ್ನೇ ನೇಮಕ ಮಾಡಬೇಕು ಎಂದು ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಎಸಿಬಿ ಅಧಿಕಾರಿಗಳನ್ನೆ ಲೋಕಾಯುಕ್ತಕ್ಕೆ ನೇಮಕ ಮಾಡುವುದು ಸೂಕ್ತವಲ್ಲ, ಈ ಕುರಿತು ತಾವು ಸಲಹೆ ನೀಡಿರುವುದಾಗಿ ತಿಳಿಸಿದರು.
ಲೋಕಾಯುಕ್ತಕ್ಕೆ ಹೆಚ್ಚಿನ ಅಧಿಕಾರ ನೀಡಿರುವುದಕ್ಕಾಗಿ ಸರ್ಕಾರಕ್ಕೆ ಸಲಾಂ ಹೇಳಬೇಕು. ಲೋಕಾಯುಕ್ತಕ್ಕೆ ಹೆಚ್ಚಿನ ಅಧಿಕಾರ ಬರಬೇಕು, ಕಾಯ್ದೆ ತಿದ್ದುಪಡಿ ಆಗಬೇಕು. ಸರ್ಕಾರಿ ಅಧಿಕಾರಿಗಳ ಮೇಲೆ ನೇರವಾಗಿ ಕೇಸ್ ಹಾಕುವಂತಾಗಬೇಕು ಎಂದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧದ ಪ್ರಕರಣವನ್ನು ಲೋಕಾಯುಕ್ತಕ್ಕೆ ವರ್ಗಾಯಿಸಿರುವ ಬಗ್ಗೆ ಪ್ರತಿಕ್ರಿಯಿಸಿ, ತನಿಖೆ ನಡೆಸಿ ಸತ್ಯಾಂಶ ಹೊರಬರಬೇಕು. ತಪ್ಪು ಮಾಡಿದ್ದರೆ ಶಿಕ್ಷೆ ಆಗಲಿ, ಇಲ್ಲದಿದ್ದರೆ ಖುಲಾಸೆಯಾಗಲಿ ಎಂದು ತಿಳಿಸಿದರು.
ರಾಜಕಾರಣಿಗಳು ಪರ್ಸೆಂಟೇಜ್ ಪಡೆದ ಬಗ್ಗೆ ಆರೋಪ, ಪ್ರತ್ಯಾರೋಪಗಳಿವೆ. ಒಬ್ಬರು ಶೇ. 40 ಎಂದರೆ ಮತ್ತೊಬ್ಬರದು ಶೇ. 10 ಎನ್ನುತ್ತಾರೆ. ಆನೆ ಕದ್ದರೂ ಕಳ್ಳ, ಅಡಕೆ ಕದ್ದರೂ ಕಳ್ಳನೇ. ಇವರೆಲ್ಲ ಒಂದೇ ಶಾಲೆಯಿಂದ ಬಂದವರು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net