

ದಾವಣಗೆರೆ : ಕನ್ನಡದ ನಂ. 1 ದಿನಪತ್ರಿಕೆ ವಿಜಯವಾಣಿ ವತಿಯಿಂದ, ದಾವಣಗೆರೆ ವಿಶ್ವವಿದ್ಯಾಲಯ ಹಾಗೂ ಎ.ಕೆ. ಫೌಂಡೇಶನ್ ಸಹಯೋಗದಲ್ಲಿ ಸ್ವಾತಂತ್ರೊೃೀತ್ಸವದ ಪ್ರಯುಕ್ತ ಆ. 14ರಂದು ಕಾಲೇಜು ವಿದ್ಯಾರ್ಥಿಗಳಿಗೆ ಕನ್ನಡ ಪದಬಂಧ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.
ನಗರದ ಎಂ.ಎಸ್.ಬಿ. ಕಾಲೇಜಿನಲ್ಲಿ ಅಂದು (ಸೋಮವಾರ) ಬೆಳಗ್ಗೆ 11 ರಿಂದ ಅರ್ಧ ಗಂಟೆ ಕಾಲ ಸ್ಪರ್ಧೆ ನಡೆಯಲಿದೆ. ಪಿಯುಸಿ ಹಾಗೂ ಯಾವುದೇ ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದು.
ಒಂದೂ ತಪ್ಪಿಲ್ಲದೆ ಭರ್ತಿ ಮಾಡಿದವರು ಮಾತ್ರ ವಿಜೇತರಾಗುತ್ತಾರೆ. 10 ಜನ ವಿಜೇತರನ್ನು ಆಯ್ಕೆ ಮಾಡಿ ತಲಾ 1 ಸಾವಿರ ರೂ. ಬಹುಮಾನ ಹಾಗೂ ಪ್ರಮಾಣಪತ್ರ ನೀಡಲಾಗುವುದು. ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಸರಿಯಾಗಿ ಪದಬಂಧ ಭರ್ತಿ ಮಾಡಿದ್ದರೆ ಲಕ್ಕಿ ಡಿಪ್ ಮೂಲಕ ವಿಜೇತರನ್ನು ನಿರ್ಧರಿಸಲಾಗುತ್ತದೆ.
ಸ್ಪರ್ಧೆಯ ನಂತರ ನಡೆಯುವ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಡಿ. ಕುಂಬಾರ, ಎ.ಕೆ. ಫೌಂಡೇಷನ್‌ನ ಸಂಸ್ಥಾಪಕ ಕೆ.ಬಿ. ಕೊಟ್ರೇಶ್, ಎಂ.ಎಸ್.ಬಿ. ಕಾಲೇಜಿನ ಪ್ರಾಚಾರ್ಯೆ ಪ್ರೊ.ಜಿ.ಸಿ. ನೀಲಾಂಬಿಕಾ ಪಾಲ್ಗೊಳ್ಳುವರು.
ವಿದ್ಯಾರ್ಥಿಗಳು ‘ಪದಬಂಧ ಸ್ಪರ್ಧೆ’ ಎಂದು ನಮೂದಿಸಿ ತಮ್ಮ ಹೆಸರನ್ನು ವಾಟ್ಸಾಪ್ ಸಂಖ್ಯೆ 9164460560 ಅಥವಾ 9738226802 ಕ್ಕೆ ಕಳುಹಿಸಿ ನೋಂದಾಯಿಸಬಹುದು. ಸ್ಥಳದಲ್ಲೇ ಹೆಸರು ನೋಂದಾಯಿಸಲೂ ಅವಕಾಶವಿದೆ. ಆ. 15 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.
...