ತಂದೆ-ಮಗನ ಮೇಲೆ ಮಾರಣಾಂತಿಕ ಹಲ್ಲೆ onslaught

ಗಾಯಾಳುಗಳು ಜಗಳೂರು ಸರ್ಕಾರಿ ಆಸ್ಪತ್ರೆಗೆ ದಾಖಲು
onslaught
ಜಗಳೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಲ್ಲೆಗೊಳಗಾದ ಶಿವಮೂರ್ತಿ, ರವಿಚಂದ್ರ.onslaught
Published on: 

ಜಗಳೂರು: ಹಳೆ ವೈಷಮ್ಯದಿಂದ ಮನೆಗೆ ನುಗ್ಗಿದ ಗುಂಪೊಂದು ತಂದೆ ಮತ್ತು ಮಗನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಲಿಂಗಣ್ಣನಹಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ.

ಗ್ರಾಮದ ಶಿವಮೂರ್ತಿ ಹಾಗೂ ಅವರ ಮಗ ರವಿಚಂದ್ರ ಹಲ್ಲೆಗೊಳಗಾದವರು. ಶುಕ್ರವಾರ ರಾತ್ರಿ ಶಿವಮೂರ್ತಿ ಅವರು ಮನೆಯ ಬಳಿ ಇದ್ದಾಗ ಏಕಾಏಕಿ ನುಗ್ಗಿದ ಹತ್ತಾರು ಜನರ ಗುಂಪು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದೆ.

ದಾಳಿಯಿಂದಾಗಿ ತೀವ್ರ ರಕ್ತಸ್ರಾವದಿಂದ ನರಳುತ್ತಿದ್ದ ಶಿವಮೂರ್ತಿ ಅವರನ್ನು ತಕ್ಷಣವೇ ಜಗಳೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ವಿಷಯ ತಿಳಿದು ಮನೆಗೆ ಬಂದ ಮಗ ರವಿಚಂದ್ರನ ಮೇಲೆಯೂ ಹಲ್ಲೆ ನಡೆಸಿದ್ದು, ಆತನ ತಲೆಗೆ ಬಲವಾದ ಪೆಟ್ಟು ಬಿದ್ದಿದೆ. ಘಟನೆಗೆ ಸಂಬಂಧಿಸಿದಂತೆ ಜಗಳೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net