ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆಯಿಂದ ಕ್ಷೇಮ camp

ಜಗಳೂರು ಪಟ್ಟಣದ ಬಯಲು ರಂಗಮಂದಿರದಲ್ಲಿ ಶನಿವಾರ  ಜೈ ಭಾರತ್ ಟ್ರಸ್ಟ್ ಹಾಗೂ ಬೆಂಗಳೂರು ಸಪ್ತಗಿರಿ ಆಸ್ವತ್ರೆಯ ಸಹಯೋಗದಲ್ಲಿ   ಉಚಿತ ಆರೋಗ್ಯ ತಪಾಸಣೆ ಶಿಬಿರ  ನಡೆಸಲಾಯಿತು. ಡಾ. ನಂದಕುಮಾರ್,ಡಾ.ನವೀನ್ ಸೂರಜ್ , ಡಾ. ಭಗತ್ ಸಿಂಗ್, ಡಾ. ವಿಕಾಸ್ , ರಂಗಸ್ವಾಮಿ ಇತರರಿದ್ದರು. camp
ಜಗಳೂರು ಪಟ್ಟಣದ ಬಯಲು ರಂಗಮಂದಿರದಲ್ಲಿ ಶನಿವಾರ ಜೈ ಭಾರತ್ ಟ್ರಸ್ಟ್ ಹಾಗೂ ಬೆಂಗಳೂರು ಸಪ್ತಗಿರಿ ಆಸ್ವತ್ರೆಯ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಸಲಾಯಿತು. ಡಾ. ನಂದಕುಮಾರ್,ಡಾ.ನವೀನ್ ಸೂರಜ್ , ಡಾ. ಭಗತ್ ಸಿಂಗ್, ಡಾ. ವಿಕಾಸ್ , ರಂಗಸ್ವಾಮಿ ಇತರರಿದ್ದರು. camp
Published on

ಪ್ರಮುಖ ಮುಖ್ಯಾಂಶಗಳು

  • ಹೃದ್ರೋಗ ತಜ್ಞ ಡಾ. ನಂದಕುಮಾರ್ ಸಲಹೆ
  • ಜಗಳೂರಿನಲ್ಲಿ ಆರೋಗ್ಯ ಶಿಬಿರ
ಜಗಳೂರು: ಇತ್ತೀಚಿನ ದಿನಮಾನಗಳಲ್ಲಿನ ಆಹಾರ ಪದ್ಧತಿ, ಜೀವನ ಶೈಲಿ ಹಲವಾರು ರೋಗಗಳಿಗೆ ಆಹ್ವಾನ ನೀಡುತ್ತವೆ. ಆದ್ದರಿಂದ ತಿಂಗಳಿಗೊಮ್ಮೆ ಆರೋಗ್ಯ ಪರೀಕ್ಷೆ ಮಾಡಿಸಿ ಕೊಳ್ಳುವುದು ಉತ್ತಮ ಎಂದು ಸಪ್ತಗಿರಿ ಆಸ್ವತ್ರೆಯ ಹೃದ್ರೋಗ ತಜ್ಞ ಡಾ. ನಂದಕುಮಾರ್ ಹೇಳಿದರು. camp
ಪಟ್ಟಣದ ಬಯಲು ರಂಗಮಂದಿರದಲ್ಲಿ ಶನಿವಾರ ಜೈ ಭಾರತ್ ಟ್ರಸ್ಟ್ ಹಾಗೂ ಬೆಂಗಳೂರು ಸಪ್ತಗಿರಿ ಆಸ್ವತ್ರೆ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ನಗರ ಮತ್ತು ಗ್ರಾಮೀಣ ಪ್ರದೇಶದ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಸಪ್ತಗಿರಿ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿದೆ. ಶಿಬಿರದಲ್ಲಿ ಹೃದಯ, ಕಿಡ್ನಿ, ಕೀಲು, ಮಧುಮೇಹ , ಬಿಪಿ ಸೇರಿದಂತೆ ಅನೇಕ ರೋಗಗಳಿಗೆ ಉಚಿತ ತಪಾಸಣೆ ಮಾಡಲಾಗುವುದು. ಹೆಚ್ಚಿನ ಚಿಕಿತ್ಸೆ ಅವಶ್ಯವಿದ್ದಲ್ಲಿ ಬೆಂಗಳೂರಿಗೆ ಕರೆದೊಯ್ದು ಚಿಕಿತ್ಸೆ ನೀಡಲಾಗುವುದು ಎಂದರು. ರೇಣುಕಾಂಬ ಅಕಾಡೆಮಿ ವಿಕಲಚೇತನ ಸಂಸ್ಥೆ ಸಂಸ್ಥಾಪಕ ರಂಗಸ್ವಾಮಿ ಮಾತನಾಡಿ, ಸಂಘ ಸಂಸ್ಥೆಗಳು ಸಾರ್ವಜನಿಕ ಸೇವೆಗೆ ಮುಂದೆ ಬಂದಿರುವುದು ಶ್ಲಾಘನೀಯ. ನಾಗರಿಕರು ಇದರ ಸದುಪಯೋಗ ಪಡೆದುಕೊಳ್ಳಿ ಎಂದರು. ಧನ್ಯ ಕುಮಾರ್ ಮಾತನಾಡಿ, ಜೈ ಭಾರತ್ ಟ್ರಸ್ಟ್‌ನಿಂದ ಸಮಾಜಮುಖಿ ಕಾರ್ಯಗಳನ್ನು ಮಾಡಲಾಗುತ್ತಿದೆ. ಉಚಿತ ಆಂಬುಲೆನ್ಸ್, ಮುಕ್ತಿವಾಹನ, ಆಸ್ಪತ್ರೆಯಲ್ಲಿ ಗಂಜಿ ಸೇವೆ, ಆರೋಗ್ಯ ಶಿಬಿರ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ, ಕ್ರೀಡೆ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಅನೇಕ ಸೇವೆ ಮಾಡಿಕೊಂಡು ಬರಲಾಗುತ್ತಿದೆ ಎಂದರು.
ಶಿಬಿರದಲ್ಲಿ ಹೃದಯ ಸಂಬಂಧಿತ ಇಸಿಜಿ, ಎಕೋ, ಮಧುಮೇಹ , ಬಿಪಿ, ಕೀಲು ಸಮಸ್ಯೆ, ಮಂಡಿ ಚಿಪ್ಪು, ಮೂತ್ರಕೋಶ ಸೇರಿದಂತೆ ಅನೇಕ ಕಾಯಿಲಿಗಳ ತಪಾಸಣೆ ಮಾಡಲಾಯಿತು. ಸಪ್ತಗಿರಿ ಆಸ್ವತ್ರೆಯ ಡಾ. ನವೀನ್ ಸೂರಜ್, ಡಾ. ಭಗತ್ ಸಿಂಗ್, ಡಾ. ವಿಕಾಸ್, ಸಾರ್ವಜನಿಕ ಆಸ್ವತ್ರೆ ಆರೋಗ್ಯಾಧಿಕಾರಿ ಕೃಷ್ಣಪ್ಪ, ಕಿರಿಯ ಆರೋಗ್ಯಾಧಿಕಾರಿ ವೆಂಕಟೇಶ್ ನಾಯ್ಕ, ಟ್ರಸ್ಟ್‌ನ ಎಚ್. ಮೆಹಬೂಬ್ ಅಲಿ, ಕಾಂಗ್ರೆಸ್ ಮುಖಂಡ ಕೆಳಗೋಟೆ ಅಹಮದ್ ಅಲಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net