ಜೀವ ಬಿಟ್ಟರೂ ಸರ್ಕಾರಿ ಶಾಲೆ ಮುಚ್ಚಲು ಬಿಡೆವು Conference
ನಲ್ಕುಂದ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ಹೋಬಳಿ ಮಟ್ಟದ ಪಾಲಕರು ಹಾಗೂ ಹೋರಾಟಗಾರರ ಸಮಾವೇಶದಲ್ಲಿ ಮ್ಯಾಗ್ನೆಟ್ ಶಾಲಾ ಯೋಜನೆ ರದ್ದುಪಡಿಸುವಂತೆ ಒತ್ತಾಯಿಸಿ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಎಐಡಿಎಸ್‌ಒದಿಂದ ಮನವಿ ಸಲ್ಲಿಸಲಾಯಿತು. ಸಿ.ಎಂ. ಅಪೂ ರ್ವಾ, ಪೂಜಾ ನಂದಿಹಳ್ಳಿ, ಮಹಾರುದ್ರಪ್ಪ, ಮಧು ತೊಗಲೇರಿ ಇತರರಿದ್ದರು.Conference
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಎಐಡಿಎಸ್‌ಒ ರಾಜ್ಯ ಉಪಾಧ್ಯಕ್ಷೆ ಅಪೂರ್ವಾ ಹೇಳಿಕೆ
ಪಾಲಕರು ಹಾಗೂ ಹೋರಾಟಗಾರರ ಸಮಾವೇಶ
ಮಾಯಕೊಂಡ:ಸರ್ಕಾರವು ಕೆಪಿಎಸ್ ಮ್ಯಾಗ್ನೆಟ್ ಯೋಜನೆಯಡಿ ಹಳ್ಳಿಗಳಲ್ಲಿರುವ ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಿರುವುದು ಅವೈಜ್ಞಾನಿಕ ಬಡ ಮಕ್ಕಳ ಅಕ್ಷರ ದೇಗುಲಗಳನ್ನು ಉಳಿಸಿಕೊಳ್ಳಲು ಪ್ರಾಣ ಕೊಡಲೂ ಸಿದ್ಧ. ಆದರೆ ಶಾಲೆ ಮುಚ್ಚಲು ಬಿಡುವುದಿಲ್ಲ ಎಂದು ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಒಕ್ಕೂಟದ ರಾಜ್ಯ ಉಪಾಧ್ಯಕ್ಷೆ ಸಿ.ಎಂ. ಅಪೂರ್ವಾ ಗುಡುಗಿದ್ದಾರೆ.
ಹೋಬಳಿಯ ನಲ್ಕುಂದ ಗ್ರಾಮದಲ್ಲಿ ಶುಕ್ರವಾರ ಎಐಡಿಎಸ್‌ಒ ನೇತೃತ್ವದಲ್ಲಿ ಆಯೋಜಿಸಿದ್ದ ಹೋಬಳಿ ಮಟ್ಟದ ಪಾಲಕರು ಹಾಗೂ ಹೋರಾಟಗಾರರ ಬೃಹತ್ ಸಮಾವೇಶದಲ್ಲಿ ಮಾತನಾಡಿದರು.
ರಾಜ್ಯದ 40 ಸಾವಿರ ಸರ್ಕಾರಿ ಶಾಲೆಗಳು ಮ್ಯಾಗ್ನೆಟ್ ಯೋಜನೆಗೆ ಬಲಿಯಾಗುತ್ತಿವೆ. ಪ್ರತಿ ಪಂಚಾಯಿತಿಗೆ ಒಂದು ಶಾಲೆ ಉಳಿಸಿ ಉಳಿದವುಗಳನ್ನು ವಿಲೀನಗೊಳಿಸುವುದರಿಂದ ಹೆಣ್ಣು ಮಕ್ಕಳ ಶಿಕ್ಷಣ ಕುಂಠಿತಗೊಳ್ಳಲಿದೆ. 5 ಕಿ.ಮೀ. ದೂರದ ಶಾಲೆಗೆ
ಮಕ್ಕಳು ಅಲೆದಾಡುವ ದುಸ್ಥಿತಿ ನಿರ್ಮಾಣವಾಗಲಿದೆ. ಸರ್ಕಾರವು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರವನ್ನು ಖಾಸಗೀಕರಣಗೊಳಿಸಲು ಇಂತಹ ವ್ಯವಸ್ಥಿತ ಸಂಚು ರೂಪಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಐಡಿಎಸ್‌ಒ ಜಿಲ್ಲಾಧ್ಯಕ್ಷೆ ಪೂಜಾ ನಂದಿಹಳ್ಳಿ ಮಾತನಾಡಿ, ರಾಜ್ಯದಲ್ಲಿ 23 ಸಾವಿರ ಶಾಲೆಗಳಿಗೆ ಸ್ವಂತ ಕಟ್ಟಡವಿಲ್ಲ, 13 ಸಾವಿರ ಶಾಲೆಗಳಲ್ಲಿ ಶೌಚಗೃಹವಿಲ್ಲ. ಶಿಕ್ಷಕರ ನೇಮಕಾತಿ ಮಾಡುವ ಬದಲು ಇರುವ ಶಾಲೆಗಳನ್ನೇ ಮುಚ್ಚುವುದು ಬಡವರಿಗೆ ವಿಷ ಕೊಟ್ಟಂತೆ ಎಂದರು.
ಎಐಕೆಕೆಎಂಎಸ್ ಜಿಲ್ಲಾಧ್ಯಕ್ಷೆ ಮಧು ತೊಗಲೇರಿ ಮಾತನಾಡಿ, ಅಧಿಕಾರಿಗಳ ಮಕ್ಕಳು ಖಾಸಗಿ ಶಾಲೆಯಲ್ಲಿ ಕಲಿಯುತ್ತಾರೆ, ಆದರೆ ಬಡವರ ಮಕ್ಕಳ ಶಾಲೆಯನ್ನು ಮುಚ್ಚುವ ನೀತಿ ಸರಿಯಲ್ಲ ಎಂದು ಕಿಡಿಕಾರಿದರು.
ಬಾಡ ಗ್ರಾಪಂ ಮಾಜಿ ಅಧ್ಯಕ್ಷ ವಿಠಲಾಪುರ ಮಹಾರುದ್ರಪ್ಪ ಮಾತನಾಡಿ, ನಮ್ಮ ಗ್ರಾಮಗಳಲ್ಲಿರುವ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ಉತ್ತಮ ಬೋಧನೆ ಮಾಡುತ್ತಿದ್ದು, ಮಕ್ಕಳು ಶೈಕ್ಷಣಿಕವಾಗಿ ಅಭಿವೃದ್ಧಿಯಾಗುತ್ತಿ ದ್ದಾರೆ. ಕೆಪಿಎಸ್ ಮ್ಯಾಗ್ನೆಟ್ ಶಾಲೆಯ ಅವಶ್ಯಕತೆ ನಮಗಿಲ್ಲ ಇಂತಹ ನೀತಿ ಕೈಬಿಡುವಂತೆ ಒತ್ತಾಯಿಸಿದರು. ಗ್ರಾಪಂ ಸದಸ್ಯ ರಂಗಸ್ವಾಮಿ ಮತ್ತು ಗ್ರಾಮಸ್ಥರಾದ ಮಹೇಶ್, ರವಿಕುಮಾರ್ ಮಾತನಾಡಿದರು.
ಸಮಾವೇಶ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿದ್ದ ಶಿಕ್ಷಣಾಧಿಕಾರಿಗಳಾದ ರವಿಕುಮಾರ್ ಮತ್ತು ಗೋವಿಂದರಾಜ್ ಅವರಿಗೆ ಪಾಲಕರು ಹಾಗೂ ಹೋರಾಟಗಾರರು ಮ್ಯಾಗ್ನೆಟ್ ಯೋಜನೆ ಕೈಬಿಡುವಂತೆ ಮನವಿ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಫೆಬ್ರವರಿ 7ರಂದು ಬೆಂಗಳೂರಿನಲ್ಲಿ ನಡೆಯಲಿರುವ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಎಐಡಿಎಸ್‌ಒ ಸಂಘಟನೆಯ ಹೋರಾಟಗಾರರು ಕರೆ ನೀಡಿದರು.
ಸಮಾವೇಶದಲ್ಲಿ ನಲ್ಕುಂದ, ಒಂಟಿಹಾಳು, ವಿಠಲಾಪುರ, ಶಂಕರನಹಳ್ಳಿ, ಅಣಬೇರು ಗ್ರಾಮಗಳ ನೂರಾರು ಪಾಲಕರು, ವಿದ್ಯಾರ್ಥಿಗಳು ಮತ್ತು ಹೋರಾಟಗಾರರು ಪಾಲ್ಗೊಂಡಿದ್ದರು.