

ಪ್ರಮುಖ ಮುಖ್ಯಾಂಶಗಳು
ಪ್ರತಿವರ್ಷ ತಾಲೂಕಿನಲ್ಲಿ ಶೇ.15ರಷ್ಟು ಕೊಳವೆಬಾವಿಗಳನ್ನು ಕೊರೆಸುತ್ತಿರುವುದರಿಂದ ನೀರಿನ ಅಂತರ್ಜಲ ಮಟ್ಟ ಕುಸಿದಿದೆ. ಜತೆಗೆ ಕೆರೆಗಳಲ್ಲಿ ನೀರು ಬತ್ತುತ್ತಿರುವುದು ಪರಿಸ್ಥಿತಿಯನ್ನು ಗಂಭೀರಗೊಳಿಸಿದೆ.
ಇರುವ ಜಮೀನಿನಲ್ಲಿ ಅಡಕೆ ತೋಟವನ್ನೇ ನಂಬಿಕೊಂಡಿದ್ದೇವೆ. ಈಗ ಮರಗಳನ್ನು ಉಳಿಸಿಕೊಂಡರೆ ಸಾಕು ಎನ್ನುವ ಸ್ಥಿತಿ ಇದೆ. ಪ್ರತಿದಿನ 3-4 ಟ್ರ್ಯಾಕ್ಟರ್ ನೀರು ಖರೀದಿಸುತ್ತಿದ್ದೇವೆ. ಸಾಲ ಮಾಡಿ ತೋಟಕ್ಕೆ ನೀರುಣಿಸುತ್ತಿದ್ದೇವೆ.
ರೈತರು ತೋಟ ಉಳಿಸಿಕೊಳ್ಳಲು ಟ್ಯಾಂಕರ್ ಮೊರೆ ಹೋಗಿದ್ದಾರೆ. ಮಳೆ ಬಾರದೆ ಇದ್ದರೆ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಸಮಸ್ಯೆ ಇನ್ನಷ್ಟು ಉಲ್ಬಣಿಸಲಿದೆ.