mobile phone:ಮೊಬೈಲ್ ಬಳಕೆಯಿಂದ ಸಮಯ ವ್ಯರ್ಥ

mobile phoneಹರಿಹರದ ಗಿರಿಯಮ್ಮ ಕಾಂತಪ್ಪ ಶ್ರೇಷ್ಠಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ವಿಜೇತ ವಿದ್ಯಾರ್ಥಿನಿಯರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
mobile phoneಹರಿಹರದ ಗಿರಿಯಮ್ಮ ಕಾಂತಪ್ಪ ಶ್ರೇಷ್ಠಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ವಿಜೇತ ವಿದ್ಯಾರ್ಥಿನಿಯರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಎಸ್.ಎಂ.ಗೌರಮ್ಮ ಅಭಿಪ್ರಾಯ
  • ಮೊಬೈಲ್ ಬಿಡಿ, ಪುಸ್ತಕ ಹಿಡಿ ವಿಷಯದ ಕುರಿತ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ
  • ಹಿತ, ಮಿತವಾಗಿ ಮೊಬೈಲ್ ಬಳಸಿದರೆ ಶೈಕ್ಷಣಿಕವಾಗಿ ಸಾಧನೆ ಮಾಡಬಹುದು

ಹರಿಹರ: ಅನಿಯಮಿತಮೊಬೈಲ್ ಬಳಕೆಯಿಂದ ಸಮಯ ವ್ಯರ್ಥ, ಮಾನಸಿಕಕ್ಷೋಭೆ ಹಾಗೂ ಆರೋಗ್ಯ ಸಮಸ್ಯೆಉಂಟು ಮಾಡುವ ಅಪಾಯವಿದೆ ಎಂದುನಗರದ ಸರ್ಕಾರಿ ಪ್ರಥಮ ದರ್ಜೆಕಾಲೇಜಿನ ಕನ್ನಡ ಭಾಷಾ ಸಹಾಯಕಪ್ರಾಧ್ಯಾಪಕಿ ಎಸ್.ಎಂ.ಗೌರಮ್ಮ ಹೇಳಿದರು.

ನಗರದ ಗಿರಿಯಮ್ಮಕಾಂತಪ್ಪ ಶ್ರೇಷ್ಠಿ ಪ್ರಥಮ ದರ್ಜೆಮಹಿಳಾ ಕಾಲೇಜಿನಲ್ಲಿ ರಾಷ್ಟ್ರೀಯಗ್ರಂಥಾಲಯ ಸಪ್ತಾಹದ ಅಂಗವಾಗಿಶನಿವಾರ ಹಮ್ಮಿಕೊಂಡಿದ್ದ ಮೊಬೈಲ್ಬಿಡಿ,ಪುಸ್ತಕಹಿಡಿ ವಿಷಯದ ಕುರಿತ ಕಾರ್ಯಕ್ರಮದಲ್ಲಿವಿಶೇಷ ಉಪನ್ಯಾಸ ನೀಡಿ ಮಾತನಾಡಿದರು,

ಮಾಹಿತಿಗಳಕಣಜ,ಬದುಕನ್ನುಸುಲಭಗೊಳಿಸುವ ಶಕ್ತಿ ಮೊಬೈಲ್‌ಗಳಿಗಿದೆ.ಹಿತ,ಮಿತವಾಗಿಬಳಸಿದರೆ ಶೈಕ್ಷಣಿಕವಾಗಿ ಸಾಧನೆಮಾಡಬಹುದು ಎಂದರು.

ಉಪಯೋಗ ಪಡೆಯುವ ಜಾಣ್ಮೆ

ಸಂಸ್ಥೆಗಳಲ್ಲಿತರಬೇತಿ ಪಡೆಯುವ,ಮಹಾನಗರಗಳಲ್ಲಿನೆಲೆಸುವ ಆರ್ಥಿಕ ಚೈತನ್ಯ ಇಲ್ಲದವರುಮೊಬೈಲ್ ಸಹಾಯದಿಂದ ಸ್ಪರ್ಧಾತ್ಮಕಪರೀಕ್ಷೆಗಳಲ್ಲಿ ಉತ್ತೀರ್ಣರಾದಉದಾಹರಣೆಗಳು ಬಹಳಷ್ಟಿವೆ.ಶೈಕ್ಷಣಿಕವಾಗಿಮಾತ್ರ ಉಪಯೋಗ ಪಡೆಯುವ ಜಾಣ್ಮೆಇಟ್ಟುಕೊಂಡು ಮೊಬೈಲ್ ಬಳಕೆಮಾಡಬೇಕು ಎಂದು ತಿಳಿಸಿದರು.

ಸದಾ ಹಸಿರು(ಎವರ್ಗ್ರೀನ್)ಎನ್ನುವಂತೆಪುಸ್ತಕಗಳು ಜ್ಞಾನಾಭಿವೃದ್ಧಿಯಲ್ಲಿಉತ್ತಮ ಸ್ನೇಹಿತನಿದ್ದಂತೆ,ಶೋಧನೆಮಾಡುವ ವಿದ್ಯಾರ್ಥಿಗೆ ದೃಷ್ಟಿಸ್ನೇಹಿಯಾಗಿ,ಪರಿಸರಪೂರಕವಾಗಿವೆ.ಪುಸ್ತಕಓದಲು ವಿದ್ಯುತ್ ಅವಶ್ಯಕತೆಕನಿಷ್ಟವಾಗಿರುತ್ತದೆ.ಮೊಬೈಲ್ನಮ್ಮನ್ನು ನಿಯಂತ್ರಿಸುವ ಬದಲುನಾವು ಅದನ್ನು ನಿಯಂತ್ರಿಸುವಂತಾಗಬೇಕುಎಂದರು.

ಪ್ರಮಾಣಪತ್ರ

ಪ್ರಾಚಾರ್ಯಶ್ರೀನಿವಾಸ್ ಅಜೂರ್ ಅಧ್ಯಕ್ಷತೆವಹಿಸಿದ್ದರು.ಸಪ್ತಾಹದಅಂಗವಾಗಿ ಆಯೋಜಿಸಿದ್ದ ವಿವಿಧಸ್ಪರ್ಧೆಗಳಲ್ಲಿ ವಿಜೇತವಿದ್ಯಾರ್ಥಿನಿಯರಿಗೆ ರಾಜ್ಯಶಾಸ್ತ್ರವಿಭಾಗದ ಮುಖ್ಯಸ್ಥೆ ಎಸ್.ಟಿ.ಪವಿತ್ರಪ್ರಮಾಣಪತ್ರ ವಿತರಿಸಿದರು.ಗ್ರಂಥಪಾಲಕಿಎಚ್.ಎಂ.ವೀಣಾ,ಸಹಾಯಕಗ್ರಂಥಪಾಲಕ ಪಿ.ಆರ್.ಕುಮಾರ್ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net