ಭಾವಸಾರ ವಿಜನ್ ಇಂಡಿಯಾ ವತಿಯಿಂದ ದಾವಣಗೆರೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವ್ಯಕ್ತಿತ್ವ ವಿಕಸನ ಆಧ್ಯಾತ್ಮ ಶಿಬಿರದಲ್ಲಿ ಗದಗ್‌ನ ರಾಮಕೃಷ್ಣ ಆಶ್ರಮದ ಮುಖ್ಯಸ್ಥ ಸ್ವಾಮಿ ನಿರ್ಭಯಾನಂದ ಸರಸ್ವತಿ, ಮಹೇಶ್ ಜಿ. ಶೇಂಡಗೆ, ಡಾ. ಜಯಪ್ರಕಾಶ್ ಮಾಳದಕರ್, ವಿಜಯಕುಮಾರ್ ಟಿಕಾರೆ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಕ್ಷತ್ರಿಯ ಸಮಾಜದಲ್ಲಿರಲಿ ಸಂಘಟನೆ, ಒಗ್ಗಟ್ಟು
ಸ್ವಾಮಿ ನಿರ್ಭಯಾನಂದ ಸರಸ್ವತಿ ಕಿವಿಮಾತು
ಭಾವಸಾರ ವಿಜನ್‌ನಿಂದ ವ್ಯಕ್ತಿತ್ವ ವಿಕಸನ ಆಧ್ಯಾತ್ಮ ಶಿಬಿರ
ದಾವಣಗೆರೆ:ವ್ಯಕ್ತಿತ್ವ ವಿಕಸನಕ್ಕೆ ಉಪನಿಷತ್ತು ಮೂಲಾಧಾರವಾಗಿದೆ. ಇದರ ಜತೆ ವಿವೇಕಾನಂದರ ಪುಸ್ತಕಗಳನ್ನು ಓದುವ ಮೂಲಕ ಜೀವನಶೈಲಿ ಬದಲಾಯಿಸಿಕೊಳ್ಳಿ ಎಂದು ಗದಗ್‌ನ ರಾಮಕೃಷ್ಣ ಆಶ್ರಮದ ಮುಖ್ಯಸ್ಥ ಸ್ವಾಮಿ ನಿರ್ಭಯಾನಂದ ಸರಸ್ವತಿ ಕಿವಿಮಾತು ಹೇಳಿದರು.
ಭಾವಸಾರ ವಿಜನ್ ಇಂಡಿಯಾ ದಾವಣಗೆರೆ ವತಿಯಿಂದ ನಗರದ ಕೇಶವಮೂರ್ತಿ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವ್ಯಕ್ತಿತ್ವ ವಿಕಸನ ಆಧ್ಯಾತ್ಮ ಶಿಬಿರದಲ್ಲಿ ಉಪನ್ಯಾಸ ನೀಡಿದರು.
ಉಪನಿಷತ್ತಿನಲ್ಲಿ ಇರುವಷ್ಟು ವ್ಯಕ್ತಿತ್ವ ವಿಕಸನದ ಸಾರ ಬೇರೆಯದರಲ್ಲಿ ಇಲ್ಲ. ಯುವಕರಲ್ಲಿ ಮಿಂಚಿನ ಜಾಗೃತಿ ಮೂಡಿಸುವ ವಿವೇಕಾನಂದರ ಪುಸ್ತಕಗಳು ವಿದೇಶಗಳಲ್ಲಿ ಖರ್ಚಾಗುವಷ್ಟು ನಮ್ಮ ದೇಶದಲ್ಲಿ ಆಗುತ್ತಿಲ್ಲ. ನಿಮ್ಮ ಮನೆಗಳಲ್ಲಿ ಅವರ ಕೃತಿಗಳನ್ನಿಡಿ. ಅವನ್ನು ಓದಿ ಜೀವನ ಸಾರ್ಥಕ ಪಡಿಸಿಕೊಳ್ಳಿ ಎಂದು ಹೇಳಿದರು.
ಕುರಿ ಮಂದೆಯಲ್ಲಿ ಬೆಳೆದ ಸಿಂಹದ ಮರಿ ಇತರರಿಗೆ ಅಂಜುತ್ತಲೇ ಇರುತ್ತದೆ. ಅದಕ್ಕೆ ತನ್ನ ನಿಜವಾದ ಅಸ್ತಿತ್ವ ತಿಳಿದರೆ ಸಾರ್ಥಕ ಜೀವನ ನಡೆಸಬಲ್ಲದು. ಹಿಂದೂಗಳು ಕೂಡ ತಮ್ಮ ನೈಜ ಅಸ್ತಿತ್ವ ಅರಿತರೆ ಅವರ ಬೆಳವಣಿಗೆ ವೇಗ ಹೆಚ್ಚಲಿದೆ ಎಂದರು.
ಕ್ಷತ್ರಿಯ ಸಮಾಜದ ಮುಕ್ಕಾಲು ಭಾಗದಷ್ಟು ಜನರು ಸದೇಶ ಕಟ್ಟಿದ್ದಾರೆ. ಇದರ ಅರಿವು ಅನೇಕರಿಗೆ ಇಲ್ಲ. ಮೊದಲು ಸಂಘಟಿತರಾಗಿ, ಒಗ್ಗಟ್ಟಾಗಿ. ದೇಶ ನಿರ್ಮಾಣದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ ಎಂದು ಹೇಳಿದರು.
ಸ್ವಿಟ್ಜರ್‌ಲ್ಯಾಂಡ್‌ನ ಮಹಿಳೆಯರೊಬ್ಬರು ಭಾರತದಿಂದ ಪ್ರಭಾವಿತರಾಗಿ ಈಶ್ವರಿ ಎಂದು ಹೆಸರು ಬದಲಿಸಿಕೊಳ್ಳುತ್ತಾರೆ. ಮುಂದಿನ ಜನ್ಮ ಭಾರತದಲ್ಲಿ ಆಗುವಂತೆ ಆಶೀರ್ವದಿಸಿ ಎಂದು ಸ್ವಾಮೀಜಿಯೊಬ್ಬರಿಗೆ ಕೇಳಿಕೊಳ್ಳುತ್ತಾರೆ. ಅಷ್ಟರ ಮಟ್ಟಿಗೆ ವಿದೇಶಿಗರಿಗೆ ಭಾರತದ ಪ್ರಾಮುಖ್ಯ ಅರಿವಾಗಿದೆ. ಭಾರತೀಯರಲ್ಲೂ ಸ್ವಯಂ ಜಾಗೃತಿಯಿಂದ ಬೆಳೆದರೆ ಉತ್ತಮ ಜೀವನಕ್ಕೆ ನಾಂದಿಯಾಗಲಿದೆ ಎಂದರು.
ಭಾವಸಾರ ವಿಜನ್ ಇಂಡಿಯಾ ದಾವಣಗೆರೆ ಶಾಖೆ ಅಧ್ಯಕ್ಷ ಮಹೇಶ್ ಜಿ. ಶೇಂಡಗೆ ಮಾತನಾಡಿ ಒಂದು ಸಮಾಜದ ಬೆಳವಣಿಗೆಯನ್ನು ಅದರ ದೇವಸ್ಥಾನ ನೋಡಿದರೆ ಅರಿವಾಗಲಿದೆ. ಅದೇ ರೀತಿ ಭಾವಸಾರ ಕ್ಷತ್ರಿಯ ಸಮಾಜ ಸುಸಂಸ್ಕೃತವಾಗಿದೆ. ಇಲ್ಲಿನ ಯುವಕರಿಗೆ ಗುರಿ ಇದೆ. ಆದರೆ ಗುರುವಿನ ಮಾರ್ಗದರ್ಶನ ಬೇಕಿದೆ. ಹೀಗಾಗಿ ಆಧ್ಯಾತ್ಮ ಶಿಬಿರ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ರಮೇಶ್‌ಬಾಬು ಗುಜ್ಜರ್, ದೈವಮಂಡಳಿ ಗೌರವಾಧ್ಯಕ್ಷ ಡಾ. ಜಯಪ್ರಕಾಶ್ ಮಾಳದಕರ್, ಭಾವಸಾರ ವಿಜನ್ ಇಂಡಿಯಾ ಗವರ್ನರ್ ವಿಜಯಕುಮಾರ್ ಟಿಕಾರೆ ಇದ್ದರು.