ಸಿದ್ಧಪಡಿಸಿದ್ದ ಅಗ್ನಿಕುಂಡಕ್ಕೆ ಪೂಜೆ ಸಲ್ಲಿಸಿ ನೈವೇದ್ಯ ಅರ್ಪಿಸಲಾಯಿತು. ಬಳಿಕ ಸ್ವಾಮೀಜಿ, ಮಠದ ಮನೆಯ ಜಂಗಮ ವಟು, ಗಂಜೀನಹಳ್ಳಿ, ನ್ಯಾಮತಿ, ದೊಡ್ಡೆತ್ತಿನಹಳ್ಳಿ ಗ್ರಾಮಗಳಭಕ್ತರು ವೀರಭದ್ರ ಸ್ವಾಮಿ ಪಲ್ಲಕ್ಕಿ, ಆಂಜನೇಯ ಸ್ವಾಮಿ ಉತ್ಸವ ಮೂರ್ತಿ ಹೊತ್ತು ಕೆಂಡ ಹಾಯ್ದರು.ಕೆಂಡಾರ್ಚನೆ ಪ್ರಯುಕ್ತ ಶುಕ್ರವಾರ ಅಂಕುರಾರ್ಪಣೆ, ಕಂಕಣ ಧಾರಣೆ ಮಾಡಲಾಗಿತ್ತು. ಸೋಮವಾರ ವೀರಭದ್ರೇಶ್ವರ ಸ್ವಾಮಿ ಹಾಗೂ ಪರಿವಾರ ದೇವರುಗಳಿಗೆ ರಾಂಪುರ ಶ್ರೀಹಾಲಸ್ವಾಮೀಜಿ ಮಠದ ಶಿವಕುವಾರ ಸ್ವಾಮೀಜಿ ಸಮ್ಮಖದಲ್ಲಿ ಗಂಗಾಪೂಜೆ, ಗಣಪತಿ ಪೂಜೆ, ಪುಣ್ಯಾಹ, ಪಂಚಕಲಸ ಪೂಜೆ, ರುದ್ರಾಭಿಷೇಕ, ಬಿಲ್ವಾರ್ಚನೆ ಮಂಗಳಾರತಿ ನಡೆಯಿತು. ಬುಧವಾರ ಸ್ವಾಮಿಯ ರಥೋತ್ಸವ ಜರುಗಲಿದೆ.