ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮಾತನಾಡಿ, ಕಾಂಗ್ರೆಸ್ ಪಕ್ಷವೇ ಒಂದು ಸಮಾಜ. ಇದರಲ್ಲಿ ಆ ಜಾತಿ, ಈ ಜಾತಿ ಎಂಬುದಿಲ್ಲ. ಒಟ್ಟಿನಲ್ಲಿ ಗೆಲ್ಲುವ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು. ಪಕ್ಷಕ್ಕಾಗಿ ಯಾರು ದುಡಿದಿದ್ದಾರೆ, ನಿಷ್ಠಾವಂತರು ಯಾರು ಎಂಬುದನ್ನು ಸಮಿತಿ ಪರಿಗಣಿಸಲಿ. ಎಲ್ಲರೂ ಚರ್ಚಿಸಿ, ಒಗ್ಗಟ್ಟಿನಿಂದ ನಗು ನಗುತ್ತ ಈ ಚುನಾವಣೆ ಮಾಡೋಣ ಎಂದರು.