ಮ್ಯಾಮ್‌ಕೋಸ್ ಸಂಸ್ಥೆ ಅಡಕೆ ಬೆಳೆಗಾರರಿಗೆ ಆಧಾರ

ಚನ್ನಗಿರಿ ತುಮ್‌ಕೋಸ್ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಅಭ್ಯಾಸ ವರ್ಗವನ್ನು ತುಮ್‌ಕೋಸ್ ಅಧ್ಯಕ್ಷ ಎಚ್.ಎಸ್. ಶಿವಕುಮಾರ್ ಉದ್ಘಾಟಿಸಿದರು. ಎಚ್. ಹಾಲಪ್ಪ, ಆರ್.ಎಂ. ರವಿ, ಕೆ.ಜಿ. ಸಂತೋಷ್, ಎಚ್.ಎಸ್. ಮಹೇಶ್, ಎಚ್. ಇಂದ್ರಪ್ಪ, ಕೆ. ಪರಶುರಾಮ್, ಪಿ. ರವಿ ಇದ್ದರು.
ಚನ್ನಗಿರಿ ತುಮ್‌ಕೋಸ್ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಅಭ್ಯಾಸ ವರ್ಗವನ್ನು ತುಮ್‌ಕೋಸ್ ಅಧ್ಯಕ್ಷ ಎಚ್.ಎಸ್. ಶಿವಕುಮಾರ್ ಉದ್ಘಾಟಿಸಿದರು. ಎಚ್. ಹಾಲಪ್ಪ, ಆರ್.ಎಂ. ರವಿ, ಕೆ.ಜಿ. ಸಂತೋಷ್, ಎಚ್.ಎಸ್. ಮಹೇಶ್, ಎಚ್. ಇಂದ್ರಪ್ಪ, ಕೆ. ಪರಶುರಾಮ್, ಪಿ. ರವಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಹಕಾರ ಭಾರತಿ ಮಾರ್ಗದರ್ಶನಲ್ಲಿ ಕಾರ್ಯನಿರ್ವಹಿಸಿದರೆ ಸಂಸ್ಥೆ ಉನ್ನತಿ
  • ತುಮ್‌ಕೋಸ್ ಅಧ್ಯಕ್ಷ ಎಚ್.ಎಸ್. ಶಿವಕುಮಾರ್ ಹೇಳಿಕೆ
  • ಅಭ್ಯಾಸ ವರ್ಗ ಕಾರ್ಯಕ್ರಮ
ಚನ್ನಗಿರಿ: ಸಹಕಾರ ಭಾರತಿ ರಾಷ್ಟ್ರೀಯ ಸಂಘಟನೆಯ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುವ ಸಹಕಾರಿ ಸಂಸ್ಥೆಗಳು ಉನ್ನತ ಮಟ್ಟದ ಬೆಳವಣಿಗೆ ಸಾಧಿಸುತ್ತಿವೆ. ಮ್ಯಾಮ್‌ಕೋಸ್ ಸಂಸ್ಥೆ ಇರದಿದ್ದರೆ ಅಡಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕುತ್ತಿದ್ದರು ಎಂದು ತುಮ್‌ಕೋಸ್ ಅಧ್ಯಕ್ಷ ಎಚ್.ಎಸ್. ಶಿವಕುಮಾರ್ ತಿಳಿಸಿದರು.
ಇಲ್ಲಿನ ತುಮ್‌ಕೋಸ್ ಸಭಾಂಗಣದಲ್ಲಿ ಗುರುವಾರ ತಾಲೂಕು ಸಹಕಾರ ಭಾರತಿ ಸಂಘಟನೆಯಿಂದ ಆಯೋಜಿಸಿದ್ದ ಅಭ್ಯಾಸ ವರ್ಗವನ್ನು ಉದ್ಘಾಟಿಸಿ ಮಾತನಾಡಿದರು.  ತುಮ್‌ಕೋಸ್ ಸಂಸ್ಥೆ ಸಹಕಾರ ಭಾರತಿ ಮಾರ್ಗದರ್ಶನದಲ್ಲಿ ಇರುವುದರಿಂದ ಯಶಸ್ವಿ ಯಾಗಿ ನಡೆದುಕೊಂಡು ಹೋಗುವ ಜತೆಗೆ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಎಲ್ಲ ಸಹಕಾರಿ ಸಂಘ ಸಂಸ್ಥೆಗಳು ಸಹಕಾರ ಭಾರತಿ ಮಾರ್ಗದರ್ಶ ನವನ್ನು ಪಡೆಯುವುದು ಅತ್ಯವಶ್ಯಕವಾಗಿದೆ ಎಂದರು.
ಸಿದ್ದನಗೌಡ ಪಾಟೀಲ್ ದೇಶದ ಮೊದಲ ಸಹಕಾರಿ ಸಂಘವನ್ನು ಸ್ಥಾಪಿಸಿದರು. ಅವರ ಪ್ರೇರಣೆಯಿಂದ ಇಂದಿನ ಲಕ್ಷಾಂತರ ಸಂಘ ಸಂಸ್ಥೆಗಳು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಕೆಲವು ಆಡಳಿತ ಮಂಡಳಿಯ ದುರ್ಬಲತೆಯಿಂದ ಅನೇಕ ಸಂಘ ಸಂಸ್ಥೆಗಳು ಪ್ರಾರಂಭದ ಹಂತದಲ್ಲಿಯೇ ಮುಚ್ಚಿ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.  ದಾವಣಗೆರೆ ಸಹಕಾರ ಭಾರತಿ ಹಾಗೂ ಹಾಲು ಒಕ್ಕೂಟದ ಸದಸ್ಯ ಎಚ್.ಕೆ. ಫಾಲಾಕ್ಷಪ್ಪ ಮಾತನಾಡಿ, 1978ರಲ್ಲಿ ಲಕ್ಷ್ಮಣ್‌ರಾವ್ ಇನಾಂದರ್ ಅವರು ಸಹಕಾರ ಭಾರತಿ ಸ್ಥಾಪಿಸಿ ಕೇವಲ 6 ವರ್ಷಗಳಲ್ಲಿ ರಾಷ್ಟ್ರವ್ಯಾಪಿ ಬೆಳೆಸಿದರು. ಸಹಕಾರ ಭಾರತಿ ಮುಂದಿನ ದಿನಗಳಲ್ಲಿ ಸಂಘಟನಾತ್ಮಕ, ರಚನಾತ್ಮಕ, ಆಂದೋಲನಾ ತ್ಮಕ ಹಾಗೂ ಪ್ರಾತಿನಿಧ್ಯಾತ್ಮಕ ಕಾರ್ಯಗಳ ಮೂಲಕ ತನ್ನ ಚಟುವಟಿಕೆಗಳನ್ನು ನಾಲ್ಕು ಪ್ರಮುಖ ವಿಭಾಗಗಳಲ್ಲಿ ಹಮ್ಮಿಕೊಂಡಿದೆ ಎಂದರು.  ಡಾ.ಎಚ್.ಎಸ್. ಮಂಜುನಾಥ್ ಉಪನ್ಯಾಸ ನೀಡಿದರು. ಸಹಕಾರ ಭಾರತಿ ತಾಲೂಕಾಧ್ಯಕ್ಷ ಡಿ.ಎಸ್. ಪ್ರಸನ್ನಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕಾಗ್ಮ ಅಧ್ಯಕ್ಷ ಎಚ್. ಹಾಲಪ್ಪ, ತುಮ್‌ಕೋಸ್ ಮಾಜಿ ಅಧ್ಯಕ್ಷ ಆರ್.ಎಂ. ರವಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಜಿ. ಸಂತೋಷ್, ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಎಚ್.ಎಸ್. ಮಹೇಶ್, ಜಿಲ್ಲಾ ಸಹಕಾರ ಭಾರತಿ ಅಧ್ಯಕ್ಷ ಎಚ್. ಇಂದ್ರಪ್ಪ, ಕೆ.ಪರಶುರಾಮ್, ಪಿ.ರವಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net