ಆನ್‌ಲೈನ್ ವ್ಯವಹಾರಗಳ ನಿರ್ವಹಣೆಗೆ ತರಬೇತಿ ಅಗತ್ಯ Training

ಚನ್ನಗಿರಿ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಾಹಕರ ತರಬೇತಿ ಶಿಬಿರವನ್ನು ಡಾ.ಜಿ.ಆರ್. ಷಣ್ಮುಖಪ್ಪ ಉದ್ಘಾಟಿಸಿದರು. ಜಿ.ಎಸ್. ದೀಪಕ್, ವಿ.ವಿಜಯ, ಕೆ.ಜಿ. ಸುರೇಶ್, ಬೇತೂರು ಟಿ. ರಾಜಣ್ಣ, ಶೈಲಜಾ ಆರ್. ಚವಾಣ್ ಇತರರಿದ್ದರು. Training
ಚನ್ನಗಿರಿ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಾಹಕರ ತರಬೇತಿ ಶಿಬಿರವನ್ನು ಡಾ.ಜಿ.ಆರ್. ಷಣ್ಮುಖಪ್ಪ ಉದ್ಘಾಟಿಸಿದರು. ಜಿ.ಎಸ್. ದೀಪಕ್, ವಿ.ವಿಜಯ, ಕೆ.ಜಿ. ಸುರೇಶ್, ಬೇತೂರು ಟಿ. ರಾಜಣ್ಣ, ಶೈಲಜಾ ಆರ್. ಚವಾಣ್ ಇತರರಿದ್ದರು. Training
Published on

ಪ್ರಮುಖ ಮುಖ್ಯಾಂಶಗಳು

  • ಡಾ.ಜಿ.ಆರ್. ಷಣ್ಮುಖಪ್ಪ ಹೇಳಿಕೆ
  • ಚನ್ನಗಿರಿಯಲ್ಲಿ ವಿಶೇಷ ಕಾರ್ಯಾಗಾರ
ಚನ್ನಗಿರಿ: ಗ್ರಾಮೀಣ ಭಾಗದ ಕೃಷಿಕರಿಗೆ ಸಾಲ ಸೌಲಭ್ಯ ಕಲ್ಪಿಸುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಾಹಕರಿಗೆ ಸರ್ಕಾರ ವಿವಿಧ ಸಹಕಾರಿ ಸಂಘಗಳ ಮೂಲಕ ಆಡಳಿತ ನಿರ್ವಹಣೆ, ಕೌಶಲ ಅಭಿವೃದ್ಧಿ ಮತ್ತು ಬ್ಯಾಂಕಿಂಗ್ ತರಬೇತಿ ನೀಡುವ ಕೆಲಸ ಮಾಡುತ್ತಿದೆ ಎಂದು ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿರ್ದೇಶಕ ಡಾ.ಜಿ.ಆರ್. ಷಣ್ಮುಖಪ್ಪ ಹೇಳಿದರು. Training
ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಾಹಕರಿಗೆ ಮಂಗಳವಾರ ಆಯೋಜಿಸಿದ್ದ ಒಂದು ದಿನದ ವಿಶೇಷ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಶಿಬಿರದಲ್ಲಿ ನಿಖರವಾದ ಲೆಕ್ಕಪತ್ರ ನಿರ್ವಹಣೆ ಮತ್ತು ಸಾಲ ವಿತರಣೆ ಕುರಿತು ತರಬೇತಿ ನೀಡಲಾಗುತ್ತದೆ. ಪ್ರತಿಯೊಂದು ವ್ಯವಹಾರ ವನ್ನು ಗಣಕೀಕೃತಗೊಳಿಸ ಲಾಗುತ್ತಿದೆ, ಆನ್‌ಲೈನ್ ವ್ಯವಹಾರಗಳ ನಿರ್ವಹಣೆಗಾಗಿ ತರಬೇತಿ ಅವಶ್ಯವಾಗಿದೆ. ಸಂಘದ ನಿಯಮಾವಳಿಗಳು, ನಿರ್ಣಯ ಕೈಗೊಳ್ಳುವ ವಿಧಾನ ಮತ್ತು ಸಹಕಾರಿ ಕಾಯ್ದೆಗಳ ಕುರಿತು ಮಾಹಿತಿ ನೀಡಲಾಗುವುದು. ರೈತರಿಗೆ ಅವಶ್ಯವಿರುವ ಬೀಜ, ರಸಗೊಬ್ಬರ ವಿತರಣೆ ಮತ್ತು ಸಮಗ್ರ ಕೃಷಿ ಪದ್ಧತಿ ಕುರಿತು ನೌಕರರಿಗೆ ತರಬೇತಿ ನೀಡಲಾಗುವುದು ಎಂದರು.
ಶೂನ್ಯ ಬಡ್ಡಿದರದಲ್ಲಿ ಸಾಲಸೌಲಭ್ಯ ಕಲ್ಪಿಸಲು ಸಹಕಾರ ಸಂಘ ಪ್ರಾರಂಭಗೊಂಡವು. ಕಾಲಕ್ಕೆ ತಕ್ಕಂತೆ ಸಂಘಗಳ ಕಾಯ್ದೆಗಳು ಬದಲಾಗುತ್ತಿದ್ದು ಅದಕ್ಕೆ ಅಪ್ಡೇಟ್ ಆಗಬೇಕು ಎಂದು ತಿಳಿಸಿದರು.
ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕ ಜಿ.ಎಸ್. ದೀಪಕ್, ಸಹಕಾರಿ ಅಭಿವೃದ್ಧಿ ಅಧಿಕಾರಿ ವಿ. ವಿಜಯ, ಕೆ.ಜಿ. ಸುರೇಶ್, ಬೇತೂರು ಟಿ. ರಾಜಣ್ಣ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶೈಲಜಾ ಆರ್. ಚವಾಣ್, ಜಿಲ್ಲಾ ಸಹಕಾರ ಶಿಕ್ಷಕ ಕೆ.ಎಚ್. ಸಂತೋಷ್‌ಕುಮಾರ್, ವ್ಯವಸ್ಥಾಪಕ ಕೆ.ಎಂ. ಜಗದೀಶ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net