ಹರಿಯಾಣ, ಕೇರಳ, ತೆಲಂಗಾಣ, ಮಹಾರಾಷ್ಟ್ರ, ತಮಿಳುನಾಡು, ಕರ್ನಾಟಕ ಮತ್ತು ಇತರ ರಾಜ್ಯಗಳಿಂದ ಬೀಜ ಸಂರಕ್ಷಕರ ಗುಂಪುಗಳು ಭಾಗವಹಿಸಲಿವೆ. ಬೀಜ ವಿನಿಮಯ ಕಾರ್ಯಕ್ರಮವಿರುತ್ತದೆ. ಆಸಕ್ತರು ಬೀಜ ಮತ್ತು ಗಿಡಗಳನ್ನು ವಿನಿಮಯಕ್ಕೆ ತರಬಹುದು. ವಿಷಮುಕ್ತ ಕೃಷಿ ಉತ್ಪನ್ನಗಳು, ನೀರಾ, ಸಾವಯವ ಎಳನೀರು ಸೇರಿ ಆರೋಗ್ಯಕರ ಪೇಯ, ತೆಂಗಿನ ನೀರಾ ಬೆಲ್ಲ, ಸಾವಯವ ಊಟ ಮತ್ತು ತಿನಿಸುಗಳು ಇರಲಿವೆ ಎಂದು ಮಾಹಿತಿ ನೀಡಿದರು.