ಮಕ್ಕಳಲ್ಲಿ ಸಾಹಿತ್ಯದ ಜ್ಞಾನ ತುಂಬಿ

ಜಗಳೂರು ತಾಲೂಕಿನ ಕಲ್ಲೇದೇವರಪುರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಡಾ.ಡಿ. ಫ್ರಾನ್ಸಿಸ್ ಕ್ಸೇವಿಯರ್ ಉದ್ಘಾಟಿಸಿದರು. ಪಿ. ಜಯರಾಮನ್, ಕೆ. ಸುಜಾತಮ್ಮ ರಾಜು, ವಸಂತಕುಮಾರಿ ತಿಪ್ಪೇಸ್ವಾಮಿ ಇದ್ದರು.
ಜಗಳೂರು ತಾಲೂಕಿನ ಕಲ್ಲೇದೇವರಪುರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಡಾ.ಡಿ. ಫ್ರಾನ್ಸಿಸ್ ಕ್ಸೇವಿಯರ್ ಉದ್ಘಾಟಿಸಿದರು. ಪಿ. ಜಯರಾಮನ್, ಕೆ. ಸುಜಾತಮ್ಮ ರಾಜು, ವಸಂತಕುಮಾರಿ ತಿಪ್ಪೇಸ್ವಾಮಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಾ.ಡಿ.ಫ್ರಾನ್ಸಿಸ್ ಕ್ಸೇವಿಯರ್ ಹೇಳಿಕೆ
  • ದತ್ತಿ ಉಪನ್ಯಾಸ
ಜಗಳೂರು: ಸುಸಂಸ್ಕೃತ ಸಮಾಜ ನಿರ್ಮಾಣವಾದರೆ ಸಾಹಿತ್ಯ ಚಟುವಟಿಕೆಗೆ ಅರ್ಥ ಬರುತ್ತದೆ. ಹಾಗಾಗಿ ಮಕ್ಕಳಲ್ಲಿ ಸಾಹಿತ್ಯದ ಜ್ಞಾನ ತುಂಬಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ಡಿ. ಫ್ರಾನ್ಸಿಸ್ ಕ್ಸೇವಿಯರ್ ಹೇಳಿದರು.
ತಾಲೂಕಿನ ಕಲ್ಲೇದೇವರಪುರ ಗ್ರಾಮದ ಡಾ.ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಭಾನುವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಇವರ ಸಂಯುಕ್ತಾಶ್ರಯದಲ್ಲಿ 70ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂತರು, ಶರಣರು, ರಾಜ- ಮಹಾರಾಜರು ಈ ನಾಡು ಕಟ್ಟಲು ಶ್ರಮಿಸಿದ್ದಾರೆ. ಅವರು ಕಟ್ಟಿದ ನಾಡು ಇಂದು ಮೌಲ್ಯಗಳನ್ನು ಕಳೆದುಕೊಂಡು ಸುಸಂಸ್ಕೃತ ಸಮಾಜ ಅವನತಿಯತ್ತ ಸಾಗುತ್ತಿದೆ. ಈ ಕುರಿತು ಆಲೋಚನೆ, ಅರಿವು ಅಗತ್ಯವಾಗಿದ್ದು, ಉತ್ತಮ ಸಮಾಜ ನಿರ್ಮಾಣಕ್ಕೆ ಬುನಾದಿ ಹಾಕಬೇಕು ಎಂದು ಸಲಹೆ ನೀಡಿದರು.
ದಾವಣಗೆರೆ ಎಸ್‌ಬಿಐ ವಿಶ್ರಾಂತ ವ್ಯವಸ್ಥಾಪಕ, ಕವಿ ಪಿ. ಜಯರಾಮನ್ ಮಾತನಾಡಿ, ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಸಾಧನೆ ಗಣನೀಯ. ವಿಜ್ಞಾನ, ರಕ್ಷಣೆ, ರಾಜಕೀಯ, ಶಿಕ್ಷಣ, ನ್ಯಾಯಾಂಗದಂತಹ ಪ್ರಮುಖ ಕ್ಷೇತ್ರಗಳಲ್ಲಿ ಪುರುಷರಿಗೆ ಸಮಾನವಾಗಿ ಸ್ಥಾನ ಪಡೆದಿದ್ದಾರೆ. ಮಹಿಳೆಯರು ಎಲ್ಲ ಸಾಧಿಸಬಲ್ಲರು ಎಂಬುವುದಕ್ಕೆ ಗಗನಯಾತ್ರಿ ಕಲ್ಪನಾ ಚಾವ್ಲಾ ಸಾಕ್ಷಿಯಾಗಿದ್ದಾರೆ ಎಂದರು.
ಕಸಾಪ ತಾಲೂಕು ಅಧ್ಯಕ್ಷೆ ಕೆ. ಸುಜಾತಮ್ಮ ರಾಜು, ಕಾ.ನಿ.ಪ ಸಂಘದ ಪ್ರಧಾನ ಕಾರ್ಯದರ್ಶಿ ಲೋಕೇಶ್.ಎಂ. ಐಹೊಳೆ, ಬಿ.ಟಿ. ಗೀತಾರಾಜು ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ವಸಂತಕುಮಾರಿ ತಿಪ್ಪೇಸ್ವಾಮಿ, ಮೇಘನಾಥ್, ರುಬಿಯಾಬಾನು, ಕೆ. ಕೃಷ್ಣಮೂರ್ತಿ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net