Thief: ದೇವಸ್ಥಾನ ಕಮಿಟಿಗೆ ದೇಣಿಗೆ ನೀಡಿ ಸಿಕ್ಕಿಬಿದ್ದ ಕಳ್ಳ

Thief ಬಸ್ತುವಳ್ಳಿ ಗ್ರಾಮದಲ್ಲಿ ವಶಪಡಿಸಿಕೊಂಡ ಬಂಗಾರದ ಆಭರಣಗಳೊಂದಿಗೆ ಪಿಐ ಸಿದ್ರಾಮಯ್ಯ, ಪಿಎಸ್‌ಐ ಗಾದಿಲಿಂಗಪ್ಪ ಸೇರಿ ಸಿಬ್ಬಂದಿ ಇದ್ದರು.
Thief ಬಸ್ತುವಳ್ಳಿ ಗ್ರಾಮದಲ್ಲಿ ವಶಪಡಿಸಿಕೊಂಡ ಬಂಗಾರದ ಆಭರಣಗಳೊಂದಿಗೆ ಪಿಐ ಸಿದ್ರಾಮಯ್ಯ, ಪಿಎಸ್‌ಐ ಗಾದಿಲಿಂಗಪ್ಪ ಸೇರಿ ಸಿಬ್ಬಂದಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬೀರು ಲಾಕರ್ ಮುರಿದು ಚಿನ್ನಾಭರಣ ಕಳವು
  • 12 ಗಂಟೆಯೊಳಗೆ ಆರೋಪಿ ಬಂಧನ
  • 6.40 ಲಕ್ಷ ರೂ. ಬೆಲೆ ಬಾಳುವ ಬಂಗಾರದ ಆಭರಣ
ಜಗಳೂರು: ದೇವಸ್ಥಾನಕ್ಕೆ ದೇಣಿಗೆ ನೀಡಿದ ಕಳ್ಳತನದ ದುಡ್ಡು, ಆರೋಪಿಯನ್ನು ಭಾನುವಾರ ಪೊಲೀಸರ ಸರಳಿನ ಹಿಂದೆ ತಳ್ಳಿದೆ.Thief
ತಾಲೂಕಿನ ಬಿಸ್ತುವಳ್ಳಿ ಗ್ರಾಮದ ಶ್ರೀದೇವಿ ಮತ್ತು ಪತಿ ಶ್ರೀನಿವಾಸ್ ಎಂಬುವವರ ಮನೆಯಲ್ಲಿ ಆರೋಪಿ ತಿಪ್ಪೇಸ್ವಾಮಿ ಶನಿವಾರ 6.40 ಲಕ್ಷ ರೂ. ಬೆಲೆ ಬಾಳುವ ಬಂಗಾರದ ಆಭರಣ ಕದ್ದು ಪರಾರಿಯಾಗಿದ್ದ. ಅದರಲ್ಲಿ ದೇವಸ್ಥಾನದ ಕಮಿಟಿಗೆ ನೀಡಿದ್ದ ದೇಣಿಗೆ ಮತ್ತು ಮನೆಯಲ್ಲಿದ್ದ ಅಜ್ಜಿ ನೀಡಿದ ಮಾಹಿತಿ ಆಧಾರದ ಮೇಲೆ ಜಗಳೂರು ಪೊಲೀಸರು 12 ಗಂಟೆಯೊಳಗೆ ಆರೋಪಿಯ ಹೆಡೆಮುರಿ ಕಟ್ಟಿದ್ದಾರೆ.
ಘಟನೆ ವಿವರ: ಶ್ರೀದೇವಿ ಶನಿವಾರ ಮಧ್ಯಾಹ್ನ ಜಗಳೂರಿಗೆ ಸಂತೆಗಾಗಿ ಹೋಗಿದ್ದರು. ಶ್ರೀನಿವಾಸ್ ಸಹ ರಾಗಿ ಮಾರಾಟಕ್ಕೆ ಎಪಿಎಂಸಿಯಿಂದ ಪರ್ಮಿಟ್ ಪಡೆಯಲು ಆಧಾರ್, ಪಹಣಿ ತೆಗೆದುಕೊಂಡು ಬೀರು ಲಾಕ್ ಮಾಡಿ ಜಗಳೂರಿಗೆ ಹೋಗಿದ್ದರು.
ಶ್ರೀನಿವಾಸ್ ಅವರ ತಾಯಿ ದೇವಮ್ಮ ಮನೆ ಹೊರಗಡೆ ಕುಳಿತಿದ್ದನ್ನು ಗಮನಿಸಿದ ತಿಪ್ಪೇಸ್ವಾಮಿ, ‘ಅಜ್ಜಿ ಕಣದಲ್ಲಿ ಇರುವ ರಾಗಿಯನ್ನು ಯಾರೋ ಹೊತ್ತುಕೊಂಡು ಹೋಗುತ್ತಿದ್ದಾರೆ’ ಎಂದು ಹೇಳಿದ. ನಂಬಿದ ದೇವಮ್ಮ ಮನೆಯ ಬೀಗ ಹಾಕಿ ಬಾತ್‌ರೂಂ ಬಾಗಿಲಿನ ಮೇಲೆ ಬೀಗದ ಕೈ ಇಟ್ಟು ಹೋಗಿದ್ದರು.
ತಕ್ಷಣ ಆರೋಪಿ ಮನೆಯ ಬೀಗ ತೆಗೆದು, ಬೀರುವನ್ನು ಮುರಿದು, ಅದರಲ್ಲಿದ್ದ 2.2 ಗ್ರಾಂ ತೂಕದ ಬಂಗಾರದ ನೆಕ್ಲೆಸ್, 4 ತೊಲ ಬಂಗಾರದ ಮಾಂಗಲ್ಯ ಸರ, 1 ತೊಲ ಬಂಗಾರದ ಕಿವಿ ಓಲೆ ಮತ್ತು 2 ಗ್ರಾಂ ಬಂಗಾರದ ಉಂಗುರ ಕದ್ದು, ಮನೆಯ ಬಾಗಿಲಿಗೆ ಬೀಗ ಹಾಕಿ ಪರಾರಿಯಾಗಿದ್ದ.
ಇತ್ತ ಜಗಳೂರಿನಿಂದ ಮರಳಿದ ಶ್ರೀನಿವಾಸ್ ದಂಪತಿ ಬಾಗಿಲು ತೆಗೆದು, ರಾಗಿ ಪರ್ಮಿಟ್‌ನ ದಾಖಲೆಗಳನ್ನು ಇಡಲು ಹೊದಾಗ ಬೀರು ಮುರಿದು ನಜ್ಜುಗುಜ್ಜಾಗಿತ್ತು.
ದೂರು ಪಡೆದ ಇನ್ಸ್‌ಪೆಕ್ಟರ್ ಸಿದ್ರಾಮಯ್ಯ ಮತ್ತು ಪಿಎಸ್‌ಐ ಗಾದಿಲಿಂಗಪ್ಪ ಭಾನುವಾರ ಎಫ್‌ಐಆರ್ ದಾಖಲಿಸಿ ಸ್ಥಳ ಮಹಜರ್ ನಡೆಸಿದರು. ಅಷ್ಟರಲ್ಲಾಗಲೇ ಆರೋಪಿ ಊರು ಬಿಟ್ಟಿದ್ದ. ಅದಕ್ಕೂ ಮುನ್ನ ದೇವಸ್ಥಾನಕ್ಕೆ ನೀಡಿದ್ದ ವಾಗ್ದಾನದಂತೆ 50 ಸಾವಿರ ರೂ.ಗಳನ್ನು ಕೊಟ್ಟು ಹೋಗಿದ್ದ. ಬೃಹತ್ ಮೊತ್ತದ ಜಾಡು, ದೇವಮ್ಮ ನೀಡಿದ ಮಾಹಿತಿ ಹಾಗೂ ಆರೋಪಿ ಚಲನವಲನ ಆಧರಿಸಿ ಪೊಲೀಸರು ಪ್ರಕರಣ ಬೇಧಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net