ಡಿಜಿಟಲ್ ಅವಲಂಬನೆಗೆ ಇರಲಿ ಮಿತಿ

ದಾವಣಗೆರೆಯಲ್ಲಿ ಶುಕ್ರವಾರ ನೇತ್ರತಜ್ಞರ ರಾಜ್ಯಮಟ್ಟದ ಸಮ್ಮೇಳನವನ್ನು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಉದ್ಘಾಟಿಸಿದರು.
ದಾವಣಗೆರೆಯಲ್ಲಿ ಶುಕ್ರವಾರ ನೇತ್ರತಜ್ಞರ ರಾಜ್ಯಮಟ್ಟದ ಸಮ್ಮೇಳನವನ್ನು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಉದ್ಘಾಟಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ನೇತ್ರತಜ್ಞರ ರಾಜ್ಯಮಟ್ಟದ ಸಮ್ಮೇಳನ
  • ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್
  • ಆಧುನಿಕ ತಂತ್ರಜ್ಞಾನದ ಉಪಕರಣ
ದಾವಣಗೆರೆ : ಕಣ್ಣಿನ ಆರೋಗ್ಯದ ದೃಷ್ಟಿಯಿಂದ ಡಿಜಿಟಲ್ ಉಪಕರಣಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು ಸೂಕ್ತ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ಇಲ್ಲಿನ ಜೆಜೆಎಂ ವೈದ್ಯಕೀಯ ಕಾಲೇಜಿನ ಬಾಪೂಜಿ ಸಭಾಂಗಣದಲ್ಲಿ ಶುಕ್ರವಾರ, ದಾವಣಗೆರೆ ನೇತ್ರತಜ್ಞರ ಸಂಘವು ಎಸ್.ಎಸ್. ವೈದ್ಯಕೀಯ ಕಾಲೇಜು ಸಹಯೋಗದಲ್ಲಿ ಆಯೋಜಿಸಿರುವ ನೇತ್ರತಜ್ಞರ ರಾಜ್ಯಮಟ್ಟದ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಡಿಜಿಟಲ್ ಉಪಕರಣಗಳ ಮೇಲೆ ಹೆಚ್ಚುತ್ತಿರುವ ಅವಲಂಬನೆ, ಜೀವನಶೈಲಿಯ ಕಾಯಿಲೆಗಳು ಕಣ್ಣಿನ ಮೇಲೆ ದುಷ್ಪರಿಣಾಮ ಬೀರುತ್ತಿವೆ. ಕಂಪ್ಯೂಟರ್ ವಿಷನ್ ಸಿಂಡ್ರೋಮ್, ಸಮೀಪ ದೃಷ್ಟಿದೋಷ ಮತ್ತು ರೆಟಿನಾ, ಕಾರ್ನಿಯಾ ಸಮಸ್ಯೆಗಳು ತಲೆದೋರುತ್ತಿವೆ ಎಂದು ತಿಳಿಸಿದರು.
ಡಿಜಿಟಲ್ ಪರದೆಗಳ ವೀಕ್ಷಣೆ ಎಷ್ಟರಮಟ್ಟಿಗೆ ಮಾಡಬೇಕು ಎಂಬುದರ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಮಧುಮೇಹ ತಪಾಸಣೆ ಮತ್ತು ಕಣ್ಣಿನ ನಿಯಮಿತ ಪರೀಕ್ಷೆಯಿಂದಲೂ ಅಂಧತ್ವ ತಡೆಗಟ್ಟಲು ಸಾಧ್ಯವಿದೆ. ಗ್ರಾಮೀಣ ಪ್ರದೇಶ, ಶಾಲೆ, ಕಾಲೇಜುಗಳಲ್ಲಿ ನೇತ್ರ ತಪಾಸಣೆ ನಡೆಸುವ ಮೂಲಕ ಆರಂಭಿಕ ದೃಷ್ಟಿ ಸಮಸ್ಯೆಯನ್ನು ಪತ್ತೆ ಮಾಡುವ ಅವಶ್ಯಕತೆ ಇದೆ ಎಂದು ಹೇಳಿದರು.
ಕಣ್ಣಿನ ಆರೈಕೆಗೆ ಸಂಬಂಧಿಸಿದಂತೆ ನಗರಗಳಲ್ಲಿ ಸುಸಜ್ಜಿತ ಆಸ್ಪತ್ರೆಗಳಿವೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಅಗತ್ಯ ವೈದ್ಯಕೀಯ ಸೌಲಭ್ಯ, ಪರಿಣಿತ ವೈದ್ಯರ ಕೊರತೆ ಇದೆ. ಹಳ್ಳಿಗಳಲ್ಲಿ ಕಣ್ಣಿನ ತಪಾಸಣಾ ಕೇಂದ್ರಗಳನ್ನು ಬಲಪಡಿಸಬೇಕಿದೆ. ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಲು ಉತ್ಸುಕತೆ ತೋರುವ ನೇತ್ರ ತಜ್ಞರನ್ನು ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ಸಲಹೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net