

ಪ್ರಮುಖ ಮುಖ್ಯಾಂಶಗಳು
ದಾವಣಗೆರೆ: ‘ ಕಳೆದ್ಸಲ ಮೆಕ್ಕೆಜೋಳ ಬೆಳೆದಿದ್ವಿ, ಒಳ್ಳೇ ಫಸಲೂ ಬಂದಿತ್ತು, ಆದ್ರೆ ರೇಟು ಸಿಗ್ಲಿಲ್ಲ. ಬಂದಿದ್ದೆಲ್ಲ ಗೊಬ್ಬರ-ಔಷಧಿ ಖರ್ಚಿಗೆ ಸರಿಹೋಯ್ತು. ಈ ಸಲ ಸಾಂಬಾರ್ ಸೌತೆ ಬೆಳೆದ್ರೆ ಅದರ ಕತೆನೂ ಹಂಗೇ ಆಯ್ತು. ಕೆಜಿಗೆ 1 ರೂಪಾಯಿ ಕೂಡ ಸಿಗ್ತಾ ಇಲ್ಲ. ಸಾಂಬಾರ್ ಸೌತೇನ ಯಾರೂ ಕೇಳೋರಿಲ್ಲ ಸ್ವಾಮಿ..!’
ಮೂರು ಎಕರೆಯಲ್ಲಿ ಸಾಂಬಾರ್ ಸೌತೆ ಬೆಳೆದಿದ್ದು 60 ಟನ್‌ನಷ್ಟು ಕಾಯಿ ಬಿಟ್ಟಿವೆ. ತಲಾ ಎಕರೆಗೆ 20ರಿಂದ 25 ಸಾವಿರ ರೂ. ವೆಚ್ಚವಾಗಿದೆ. ದರ ಕುಸಿದಿದ್ದು ಹಾಕಿದ ಬಂಡವಾಳವೂ ಬರದಂತಾಗಿದೆ. ನಮ್ಮ ಕಷ್ಟಕ್ಕೆ ಅಧಿಕಾರಿಗಳೂ ಸ್ಪಂದಿಸುತ್ತಿಲ್ಲ.
— ಸಿದ್ದಪ್ಪ, ಸಿದ್ದನೂರು ರೈತ.
ಕಳೆದ ಬಾರಿ ಮೆಕ್ಕೆಜೋಳ, ರಾಗಿ ಬೆಳೆದಿದ್ದೆವು. ಈ ಬಾರಿ ಭೂಮಿಗೆ ಕಸುವು ಬರಲಿ ಎಂದು 2 ಎಕರೆಯಲ್ಲಿ ಸಾಂಬಾರ್ ಸೌತೆ ಹಾಕಿದ್ದೇನೆ. ತಲಾ ಕಾಯಿಗೆ 4ರಿಂದ 5 ರೂ. ಸಿಕ್ಕಿದ್ದರೂ ಅನುಕೂಲವಿತ್ತು. ಕಾಯಿ ಖರೀದಿಯಾಗದೆ ಹೊಲದ ಬಳಿಗೆ ಬರಲು ಬೇಸರವಾಗಿದೆ. ಮಳೆ ಬಂದಲ್ಲಿ ಇದೇ ಜಾಗದಲ್ಲಿ ರಾಗಿ ಬಿತ್ತುವ ಆಲೋಚನೆ ಇದೆ.
— ಎ.ಎಸ್. ರಾಜಕುಮಾರ್, ಸಿದ್ದನೂರು ರೈತ.
ಅಡಿಕೆ ಮಧ್ಯೆಯೇ 6 ಎಕರೆ ಸಾಂಬಾರ್ ಸೌತೆ ಬೆಳೆದಿದ್ದೇವೆ. ಸುಮಾರು 1.20 ಲಕ್ಷ ರೂ.ನಷ್ಟು ಖರ್ಚು ಮಾಡಿದ್ದೇವೆ. 15 ದಿನದಿಂದ ಕರೆದರೂ ಖರೀದುದಾರರು ಹೊಲದ ಬಳಿಗೆ ಬರುತ್ತಿಲ್ಲ. ಈಗಿರುವ ಪರಿಸ್ಥಿತಿಯಲ್ಲಿ ಬಂಡವಾಳ ವಾಪಾಸು ಸಿಗುವ ಲಕ್ಷಣವಿಲ್ಲ.
— ಎಸ್.ಎಂ. ಕರಿಬಸಪ್ಪ, ಸಿದ್ದನೂರು ರೈತ.