ಆರೋಗ್ಯ-ಸಂಸ್ಕಾರ-ಜ್ಞಾನವಂತರೇ ಶ್ರೀಮಂತರು Honor

ಜಗಳೂರಿನ ವಾಲ್ಮೀಕಿ ಭವನದಲ್ಲಿ ಬುಧವಾರ ಸಮಾನ ಮನಸ್ಕರ ಬಳಗದಿಂದ 3ನೇ ಬಾರಿಗೆ ಹಮ್ಮಿಕೊಂಡಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಲಾಯಿತು. ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಬಿ. ದೇವೇಂದ್ರಪ್ಪ, ಕೆ.ಪಿ. ಪಾಲಯ್ಯ, ಬಿಸ್ತುವಳ್ಳಿ ಬಾಬು ಇತರರಿದ್ದರು.Honor
ಜಗಳೂರಿನ ವಾಲ್ಮೀಕಿ ಭವನದಲ್ಲಿ ಬುಧವಾರ ಸಮಾನ ಮನಸ್ಕರ ಬಳಗದಿಂದ 3ನೇ ಬಾರಿಗೆ ಹಮ್ಮಿಕೊಂಡಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಲಾಯಿತು. ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಬಿ. ದೇವೇಂದ್ರಪ್ಪ, ಕೆ.ಪಿ. ಪಾಲಯ್ಯ, ಬಿಸ್ತುವಳ್ಳಿ ಬಾಬು ಇತರರಿದ್ದರು.Honor
Published on

ಪ್ರಮುಖ ಮುಖ್ಯಾಂಶಗಳು

  • ನಾಲ್ವಡಿ ಶಾಂತಲಿಂಗ ಶಿವಾಚಾರ್ಯರ ಅನಿಸಿಕೆ
  • ಸ್ವಯಂ ಪ್ರೇರಿತ ರಕ್ತ ದಾನ ಶಿಬಿರ
  • ಸಾಧಕರಿಗೆ ಸನ್ಮಾನ
ಜಗಳೂರು: ಆರೋಗ್ಯವಂತ, ಸಂಸ್ಕಾರವಂತ, ಜ್ಞಾನವಂತ ಯುವಕ- ಯುವತಿಯರೇ ರಾಷ್ಟ್ರದ ಸಂಪತ್ತು ಎಂದು ತಪೋಕ್ಷೇತ್ರ ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಜಗಳೂರಿನ ವಾಲ್ಮೀಕಿ ಭವನದಲ್ಲಿ ಬುಧವಾರ ಸಮಾನಮನಸ್ಕರ ಬಳಗ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದ, ನೇತಾಜಿ ಸುಭಾಷ್ ಚಂದ್ರಬೋಸ್ ಜಯಂತ್ಯುತ್ಸವ, ಸ್ವಯಂ ಪ್ರೇರಿತ ರಕ್ತದಾನ ಶಿಬಿರ, ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಯುವಕರು ದಾರಿ ತಪ್ಪಿ ಹೋಗುತ್ತಿದ್ದಾರೆ ಎನ್ನುವ ದಿನಮಾನಗಳಲ್ಲಿ ಸಮಾನ ಮನಸ್ಕರ ಬಳಗದ ಯುವಕರು ಒಂದಾಗಿ ಉತ್ತಮ ಸೇವೆ ಮಾಡುತ್ತಿದ್ದಾರೆ. ತಾಲೂಕಿನಲ್ಲಿ ಸಂಸ್ಕಾರ, ತ್ಯಾಗ ಸದ್ಗುಣಗಳಿಗೆ ಬರವಿಲ್ಲ ಎಂಬುವುದನ್ನು ಸಾಬೀತು ಪಡಿಸಿದ ಸಂಘಟನೆ ಇದಾಗಿದೆ ಎಂದು ಶ್ಲಾಘಿಸಿದರು.
ಜೀವಂತ, ಹೃದಯವಂತ, ಭಗವಂತ ಈ ಮೂರು ಸ್ಥಾನಗಳು ಬಹಳ ಮುಖ್ಯ. ತನ್ನ ನೋವು ಅರಿತವನು ಜೀವಂತ, ಇನ್ನೊಬ್ಬರ ನೋವು ಅರ್ಥೈಸಿಕೊಳ್ಳುವವನು ಹೃದಯವಂತ, ಬೇರೆಯವರ ಸಂಕಷ್ಟ ಪರಿಹರಿಸುವವನು ಭಗವಂತ ಎಂದು ವಿಶ್ಲೇಷಿಸಿದರು.
ಕಾನೂನು ಕೆಲವರಿಗೆ ಪುಸ್ತಕಕ್ಕೆ ಸೀಮಿತವಾಗಿದೆ. ಅಪಘಾತವಾಗಿ ತಲೆಗೆಪೆಟ್ಟು ಸಾವನ್ನಪ್ಪಿದರೆ ಯಾರು ಹೊಣೆ? ಅಪಘಾತದಲ್ಲಿ ಗಾಯಗೊಂಡವರ ಪ್ರಾಣ ರಕ್ಷಣೆಗಾಗಿಯೇ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದರು.
ಶಾಸಕ ಬಿ. ದೇವೇಂದ್ರಪ್ಪ ಅವರು ನೊಂದವರಿಗೆ ನೆರವು ಕಾರ್ಯಕ್ರಮ ಆರಂಭಿಸಿರುವುದು ಶ್ಲಾಘನೀಯ. ದಾನಿಗಳಿಂದ ದೇಣಿಗೆ ಸಂಗ್ರಹಿಸಿ ನೊಂದವರು, ಆರೋಗ್ಯ ಸಮಸ್ಯೆಯಿಂದ ಬಳಲುವವರಿಗೆ ಅವರ ಸಮಸ್ಯೆಗಳ ಪರಿಹಾರಾರ್ಥ ಹಣ ಕೊಡುತ್ತಿದ್ದಾರೆ. ಧರ್ಮ ಕಾರ್ಯ, ಸತ್ಕಾರ್ಯ ಮಾಡಿದಾಗ ಬದುಕು ಸಾರ್ಥಕ ಎನಿಸುತ್ತದೆ ಎಂದು ಶ್ರೀಗಳು ತಿಳಿಸಿದರು.
ಶಾಸಕ ಬಿ. ದೇವೇಂದ್ರಪ್ಪ ಮಾತನಾಡಿ, ಸ್ವಾತಂತ್ರೃಸುಭಾಷ್ ಚಂದ್ರ ಬೋಸ್, ಸ್ವಾಮಿ ವಿವೇಕಾನಂದರ ಜಯಂತ್ಯುತ್ಸವ ಅಂಗವಾಗಿ ರಕ್ತದಾನ ಶಿಬಿರ ಆಯೋಜಿಸಿರುವುದು ಶ್ಲಾಘನೀಯ ಎಂದರು.
ಕೆಪಿಸಿಸಿ ಎಸ್ಟಿ ಘಟಕದ ಮಾಜಿ ಅಧ್ಯಕ್ಷ ಕೆ.ಪಿ. ಪಾಲಯ್ಯ, ಸಮಾನ ಮನಸ್ಕರ ಬಳಗದ ಅಧ್ಯಕ್ಷ ಬಿಸ್ತುವಳ್ಳಿ ಬಾಬು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪಿಐ ಸಿದ್ರಾಮಯ್ಯ, ನಿವೃತ್ತ ಅಧಿಕಾರಿ ಬಿ. ಮಹೇಶ್ವರಪ್ಪ, ಡಾ. ಅಂಬೇಡ್ಕರ್ ಪುತ್ಥಳಿ ಸಮಿತಿ ಅಧ್ಯಕ್ಷ ಪೂಜಾರಿ ಸಿದ್ದಪ್ಪ, ಸಾಹಿತಿ ಎನ್.ಟಿ. ಎರ‌್ರಿಸ್ವಾಮಿ, ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಅಹಮದ್ ಅಲಿ, ಗುತ್ತಿಗೆದಾರ ದೀಪಕ್ ಪಟೇಲ್, ನಾಗೇಂದ್ರ ರೆಡ್ಡಿ, ಶೇಖರಪ್ಪ ಪಲ್ಲಾಗಟ್ಟೆ, ಮಹಮದ್ ಗೌಸ್, ಮಹಾಲಿಂಗಪ್ಪ, ಧನ್ಯಕುಮಾರ್, ಮಲೆಮಾಚಿಕೆರೆ ಸತೀಶ್, ಯು.ಸಿ. ರವಿ, ಮಂಜುನಾಥ್ ಗುರೂಜಿ ಮತ್ತಿತರರಿದ್ದರು.

ಸಾಧಕರಿಗೆ ಸನ್ಮಾನ

ಸಾಮಾಜಿಕ ಕ್ಷೇತ್ರ: ಹನುಮಂತಾಪುರದ ಬರ್ಕತ್ ಅಲಿ, ಎಚ್.ಎಂ. ಹೊಳೆ ಮಹಾಲಿಂಗಪ್ಪ.
ಪತ್ರಿಕಾ ರಂಗ: ವಿಜಯವಾಣಿ ವರದಿಗಾರ ಲೋಕೇಶ್.ಎಂ. ಐಹೊಳೆ
ಹೆಚ್ಚುವರಿ ರಕ್ತದಾನಿ: ಶಿಕ್ಷಕ ಮಹಮ್ಮದ್ ಷರೀಪ್
ಕ್ರೀಡಾ ಕ್ಷೇತ್ರ: ದೈಹಿಕ ಶಿಕ್ಷಕ ಕರಿಬಸಪ್ಪ
ಸರ್ಕಾರಿ ಸೇವೆ: ಆರ್‌ಎಫ್‌ಒ ನಿತಿನ್ ಬಲ್ಲವರು
ಅಂಗವಿಕಲರ ಸೇವೆ: ಭರಮಸಮುದ್ರದ ರಂಗಸ್ವಾಮಿ
ದೇಶ ಸೇವೆ: ಮೆದಕೆರೆನಹಳ್ಳಿ ವಿಜಯ್ ಕುಮಾರ್
ಸಾಹಿತ್ಯ ಸೇವೆ : ಲಕ್ಕಂಪುರ ರಾಜು
ರೈತ ಪರ ಹೋರಾಟ: ಬೈರನಾಯಕನಹಳ್ಳಿ ರಾಜು, ಭರಮಸಮುದ್ರ ಕುಮಾರ್
ಸಮಾಜ ಸೇವೆ: ಜಗಳೂರು ಎಂ. ಮಾನಸ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net