ದೂರದೃಷ್ಟಿಯ ಸಂತ ಡಾ.ವೀರೇಂದ್ರ ಹೆಗ್ಗಡೆ

ಬಸವಾಪಟ್ಟಣ ಗ್ರಾಮದ ಸಿದ್ದಾರೂಢ ವೃದ್ಧಾಶ್ರಮದಲ್ಲಿ ಮಂಗಳವಾರ ಡಾ. ವೀರೇಂದ್ರ ಹೆಗ್ಗಡೆ ಅವರ ಜನ್ಮದಿನದ ಕಾರ್ಯಕ್ರಮದಲ್ಲಿ ಆಶ್ರಮವಾಸಿಗಳಿಗೆ ಹಣ್ಣು ವಿತರಿಸಲಾಯಿತು. ಎಲ್.ಜಿ. ಮಧುಕುಮಾರ್, ಗಣಪತಿ, ಕೃಷ್ಣಾನಂದ ಸ್ವಾಮೀಜಿ, ಕುಸುಮಾ ಬಸವರಾಜಪ್ಪ ಇತರರಿದ್ದರು.
ಬಸವಾಪಟ್ಟಣ ಗ್ರಾಮದ ಸಿದ್ದಾರೂಢ ವೃದ್ಧಾಶ್ರಮದಲ್ಲಿ ಮಂಗಳವಾರ ಡಾ. ವೀರೇಂದ್ರ ಹೆಗ್ಗಡೆ ಅವರ ಜನ್ಮದಿನದ ಕಾರ್ಯಕ್ರಮದಲ್ಲಿ ಆಶ್ರಮವಾಸಿಗಳಿಗೆ ಹಣ್ಣು ವಿತರಿಸಲಾಯಿತು. ಎಲ್.ಜಿ. ಮಧುಕುಮಾರ್, ಗಣಪತಿ, ಕೃಷ್ಣಾನಂದ ಸ್ವಾಮೀಜಿ, ಕುಸುಮಾ ಬಸವರಾಜಪ್ಪ ಇತರರಿದ್ದರು.
Published on
ಬಸವಾಪಟ್ಟಣ: ಸಮಾಜದ ವಿಕಾಸಕ್ಕೆ ಹಗಲಿರುಳು ಚಿಂತಿಸಿ, ನೂರಾರು ಯೋಜನೆಗಳನ್ನು ಕಾರ್ಯಗತಗೊಳಿಸಿ, ಪ್ರತಿಯೊಬ್ಬರನ್ನೂ ಸಮಾಜದ ಮುಖ್ಯವಾಹಿನಿ ತರಲು ಪ್ರಯತ್ನಿಸುತ್ತಿರುವ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ದೂರದೃಷ್ಟಿಯ ಸಂತ ಎಂದು ಧರ್ಮಸ್ಥಳ ಸಂಘದ ಜನ ಜಾಗೃತಿ ವೇದಿಕೆ ಜಿಲ್ಲಾ ಸದಸ್ಯ ಎಲ್.ಜಿ. ಮಧುಕುಮಾರ್ ಹೇಳಿದರು.
ಗ್ರಾಮದ ಸಿದ್ದಾರೂಢ ವೃದ್ಧಾಶ್ರಮದಲ್ಲಿ ಮಂಗಳವಾರ ಧರ್ಮಸ್ಥಳ ಗ್ರಾಮೀಣ ಒಕ್ಕೂಟದ ಬಸವಾಪಟ್ಟಣ ಯೋಜನಾ ವಲಯದ ವತಿಯಿಂದ ಹಮ್ಮಿಕೊಂಡಿದ್ದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ 78 ವರ್ಷದ ಜನ್ಮದಿನದ ಕಾರ್ಯಕ್ರಮದಲ್ಲಿ ಆಶ್ರಮವಾಸಿಗಳಿಗೆ ಹಣ್ಣು ವಿತರಿಸಿ ಮಾತನಾಡಿದರು.
8 ಶತಮಾನಗಳ ಇತಿಹಾಸವಿರುವ ಧರ್ಮಸ್ಥಳ ಕ್ಷೇತ್ರಕ್ಕೆ ಇಪ್ಪತ್ತನೇ ವರ್ಷದಲ್ಲೇ ಧರ್ಮಾಧಿಕಾರಿಯಾಗಿ ನಿಯೋಜನೆಗೊಂಡ ಡಾ. ವೀರೇಂದ್ರ ಹೆಗ್ಗಡೆ ಅವರು ಗಂಧದ ಕೊರಡಿನಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಸಹಪಂಕ್ತಿ ಭೋಜನ, ಕೆರೆಗಳ ಅಭಿವೃದ್ಧಿ, ಶಿಥಿಲಗೊಂಡ ದೇವಾಲಯಗಳ ಜೀರ್ಣೋದ್ಧಾರ, ಮಹಿಳೆಯರ ಸಬಲೀಕರಣ, ಮದ್ಯವರ್ಜನ ಶಿಬಿರ, ಜ್ಞಾನವಿಕಾಸ ಯೋಜನೆ, ಸ್ವಾಸ್ಥ್ಯ ಸಂಕಲ್ಪ, ವಾತ್ಸಲ್ಯ ಕಾರ್ಯಕ್ರಮ, ಸ್ವ ಸಹಾಯ ಸಂಘಗಳು ಹೀಗೆ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಕಾರ್ಯಯೋಜನೆಗಳ ಮೂಲಕ ಗ್ರಾಮ ಭಾರತದ ಪ್ರಗತಿಗೆ ಹೊಸ ಭಾಷ್ಯ ಬರೆಯುತ್ತಿದ್ದಾರೆ ಎಂದು ವರ್ಣಿಸಿದರು.
ಜಿಲ್ಲಾ ಯೋಜನಾಧಿಕಾರಿ ಗಣಪತಿ ಮಾತನಾಡಿ, ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ವತಿಯಿಂದ ನೂರಾರು ಕಾರ್ಯಕ್ರಮಗಳು ಅನುಷ್ಠಾನಗೊಂಡು ಸಾರ್ಥಕ ಎನಿಸಿಕೊಂಡಿವೆ ಎಂದರು.
ಸಿದ್ದಾರೂಢ ಆಶ್ರಮದ ಕೃಷ್ಣಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗ್ರಾಪಂ ಉಪಾಧ್ಯಕ್ಷೆ ಕುಸುಮಾ ಬಸವರಾಜಪ್ಪ, ಪತ್ರಕರ್ತರ ಸಂಘದ ತಾಲೂಕಾಧ್ಯಕ್ಷ ವಿ. ಲಿಂಗರಾಜ್, ಆರಕ್ಷಕ ಅಧಿಕಾರಿ ದೊಡ್ಡ ಬಸಪ್ಪನವರ್, ಒಕ್ಕೂಟದ ಸದಸ್ಯ ಕೋಟೆಹಾಳ್ ವಿಶ್ವನಾಥ್, ಸಂಘದ ಮೇಲ್ವಿಚಾರಕರಾದ ಶಂಭುಲಿಂಗಯ್ಯ, ದುರ್ಗಾದೇವಿ, ಲೀಲಾವತಿ ಗಂಗಾಧರ್, ನಾಗರತ್ನ, ಆಶ್ರಮದ ಕಾರ್ಯದರ್ಶಿ ಎಚ್.ಜಿ. ಗುರುಮೂರ್ತಿ, ಗ್ರಾಪಂ ಸದಸ್ಯೆ ಬೆನಕಮ್ಮ, ಪತ್ರಕರ್ತ ಎಂ.ಬಿ. ರಾಜಪ್ಪ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net