ದಾವಣಗೆರೆಯ ಜಿಎಂ ವಿಶ್ವವಿದ್ಯಾಲಯದಲ್ಲಿ ಗುರುವಾರ ನಡೆದ ‘ಹಸಿರು ಇಂಧನ ಮತ್ತು ಪರಿಸರಕ್ಕಾಗಿ ಸುಧಾರಿತ ವಸ್ತುಗಳು’ ಕುರಿತ ರಾಷ್ಟ್ರೀಯ ಸಮ್ಮೇಳನ ಉದ್ಘಾಟನಾ ಕಾರ್ಯಕ್ರಮದಲ್ಲಿ ಡಾ. ಎಸ್.ಟಿ. ಅರುಣಾ, ಡಾ. ಸುನೀಲ್ ಕುಮಾರ್ ಬಿ.ಎಸ್, ಡಾ. ಸಿ.ವಿ. ಯಲಮಗ್ಗದ್, ಡಾ. ಸಂತೋಷ್ ಬಿ.ಎಂ, ಡಾ. ಕೆ.ಎಸ್. ಓಂಕಾರಪ್ಪ, ಡಾ. ಗುರುಮೂರ್ತಿ ಎಚ್, ಸವಿತಾ ಪಿ.ಎಚ್. ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ವಿಜ್ಞಾನಿ ಡಾ. ಎಸ್.ಟಿ. ಅರುಣಾ ಅಭಿಮತ
ಜಿಎಂಯುನಲ್ಲಿ ರಾಷ್ಟ್ರೀಯ ಸಮ್ಮೇಳನ ಉದ್ಘಾಟನೆ
ದಾವಣಗೆರೆ :ಶಕ್ತಿ, ಪರಿಸರ ಮತ್ತು ಆರೋಗ್ಯ ಕ್ಷೇತ್ರಗಳು ಪ್ರಸ್ತುತ ಮಾನವ ಕುಲ ಎದುರಿಸುತ್ತಿರುವ ಅತಿದೊಡ್ಡ ಸವಾಲುಗಳಾಗಿವೆ. ಇವುಗಳ ಪರಿಹಾರಕ್ಕಾಗಿ ಹಸಿರು ಇಂಧನದ ಬಳಕೆಯತ್ತ ಗಮನ ಹರಿಸುವುದು ಅಗತ್ಯವಾಗಿದೆ ಎಂದು ಬೆಂಗಳೂರಿನ ಸಿಎಸ್‌ಐಆರ್-ಎನ್‌ಎಎಲ್ನ ಮುಖ್ಯ ವಿಜ್ಞಾನಿ ಡಾ. ಎಸ್.ಟಿ. ಅರುಣಾ ಅಭಿಪ್ರಾಯಪಟ್ಟರು.
ನಗರದ ಜಿಎಂ ವಿಶ್ವವಿದ್ಯಾಲಯದ ಫ್ಯಾಕಲ್ಟಿ ಆಫ್ ಬೇಸಿಕ್ ಆ್ಯಂಡ್ ಅಪ್ಲೈಡ್ ಸೈನ್ಸಸ್ ವತಿಯಿಂದ ಜಿಎಂ ಸೈಂಟಿಫಿಕ್ ಇನ್ನೋವೇಶನ್ ಆ್ಯಂಡ್ ರಿಸರ್ಚ್ ಎಲ್‌ಎಲ್‌ಪಿ ಸಹಯೋಗದೊಂದಿಗೆ ಆಯೋಜಿಸಲಾಗಿರುವ ‘ಹಸಿರು ಇಂಧನ ಮತ್ತು ಪರಿಸರಕ್ಕಾಗಿ ಸುಧಾರಿತ ವಸ್ತುಗಳು’ ಕುರಿತ ‘ಸೈನ್ ವಿಷನ್-2026’ ರಾಷ್ಟ್ರೀಯ ಸಮ್ಮೇಳನವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.
ನಮ್ಮ ಹಿರಿಯರು ಮಾಡಿದ ಕಠಿಣ ಪರಿಶ್ರಮದ ಫಲವನ್ನು ನಾವು ಅನುಭವಿಸುತ್ತಿದ್ದೇವೆ. ಅದೇ ರೀತಿ, ಭವಿಷ್ಯದ ಪೀಳಿಗೆಗಾಗಿ ಈ ಭೂಮಿಯನ್ನು ಸುರಕ್ಷಿತವಾಗಿ ಇಡಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಈ ಭೂಮಿಯು ಪ್ರತಿಯೊಬ್ಬರ ಅಗತ್ಯಗಳನ್ನು ಪೂರೈಸುತ್ತದೆಯೇ ಹೊರತು, ಯಾರೊಬ್ಬರ ದುರಾಸೆಯನ್ನಲ್ಲ ಎಂದು ಪ್ರಕೃತಿಯನ್ನು ಸಂರಕ್ಷಿಸುವ ಪ್ರಾಮುಖ್ಯತೆ ತಿಳಿಸಿದರು.
ಯುವಜನತೆ ಮತ್ತು ಸಂಶೋಧಕರು ಹೊಸ ತಂತ್ರಜ್ಞಾನಗಳನ್ನು ಕಲಿಯುವ ಮೂಲಕ ದೇಶದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆಯನ್ನು ನೀಡಬೇಕು. ಆ ಮೂಲಕ 2047ರ ಹೊತ್ತಿಗೆ ವಿಕಸಿತ ಭಾರತ ನಿರ್ಮಾಣದ ಕನಸನ್ನು ಸಾಕಾರಗೊಳಿಸಲು ಕೈಜೋಡಿಸಬೇಕು ಎಂದು ಹೇಳಿದರು.
ಎಫ್‌ಬಿಎಎಸ್ ಡೀನ್ ಡಾ. ಸಂತೋಷ್ ಬಿ.ಎಂ (ಸಂಚಾಲಕರು), ಸ್ಕೂಲ್ ಆಫ್ ಮ್ಯಾಥಮೆಟಿಕಲ್ ಆ್ಯಂಡ್ ಫಿಸಿಕಲ್ ಸೈನ್ಸ್ನ ನಿರ್ದೇಶಕ ಡಾ. ಕೆ.ಎಸ್. ಓಂಕಾರಪ್ಪ, ಸ್ಕೂಲ್ ಆಫ್ ಅಪ್ಲೈಡ್ ಸೈನ್ಸ್ ನಿರ್ದೇಶಕ ಡಾ. ಗುರುಮೂರ್ತಿ ಎಚ್, ಸ್ಕೂಲ್ ಆಫ್ ಕೆಮಿಕಲ್ ಆ್ಯಂಡ್ ಬಯೋಲಾಜಿಕಲ್ ಸೈನ್ಸ್ ನಿರ್ದೇಶಕಿ ಸವಿತಾ ಪಿ.ಎಚ್. ಇದ್ದರು.
ಸಂಶೋಧನೆ ಸಲಹೆಗಾರ ಡಾ. ಸಿ.ಎಸ್. ರಮೇಶ್, ಸಂಶೋಧನೆ ಮತ್ತು ನಾವಿನ್ಯತೆಯ ಡೀನ್ ಡಾ. ಸ್ವರೂಪ್ ಕೆ, ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಪ್ರಸನ್ನ ಬಿಎಂಆರ್, ಎಫ್‌ಬಿಎಎಸ್‌ನ ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಸಂಶೋಧನಾ ವಿದ್ವಾಂಸರು, ಕೈಗಾರಿಕಾ ವಲಯದ ಪ್ರತಿನಿಧಿಗಳು ಇದ್ದರು.
ವಿಜ್ಞಾನದಿಂದ ಪರಿಸರ ಬಿಕ್ಕಟ್ಟಿಗೆ ಪರಿಹಾರ
ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಗಣಿತಶಾಸ್ತ್ರ, ಎಲೆಕ್ಟ್ರಾನಿಕ್ಸೃ್ಗೆ ಭೌತಶಾಸ್ತ್ರ ಮಾತೃ ವಿಭಾಗ ಆಗಿರುವಂತೆ ಯಾವುದೇ ತಂತ್ರಜ್ಞಾನವಾದರೂ ಮೂಲತಃ ವಿಜ್ಞಾನದ ಸುತ್ತಲೇ ಸುತ್ತುತ್ತದೆ ಎಂದು ಜಿಎಂ ವಿಶ್ವವಿದ್ಯಾಲಯದ ಕುಲಸಚಿವ ಡಾ. ಸುನೀಲ್ ಕುಮಾರ್ ಬಿ.ಎಸ್. ಹೇಳಿದರು.
ಪ್ರಸ್ತುತ ಜಗತ್ತು ಎದುರಿಸುತ್ತಿರುವ ಯುದ್ಧದಂತಹ ಪರಿಸ್ಥಿತಿಗಳು, ಕಸ ನಿರ್ವಹಣೆ ಮತ್ತು ಮಾನವ-ನಿರ್ಮಿತ ಮಾಲಿನ್ಯದಂತಹ ಗಂಭೀರ ಸವಾಲುಗಳನ್ನು ಎದುರಿಸಲು ವಿಜ್ಞಾನವೇ ಪ್ರಮುಖ ಅಸ್ತ್ರವಾಗಿದೆ. ಮಾನವ-ಸ್ನೇಹಿ ಪರಿಸರವನ್ನು ನಿರ್ಮಿಸುವ ಬಹುದೊಡ್ಡ ಜವಾಬ್ದಾರಿ ತಂತ್ರಜ್ಞಾನ ಮತ್ತು ವಿಜ್ಞಾನ ಕ್ಷೇತ್ರದ ಮೇಲಿದೆ ಎಂದು ಎಚ್ಚರಿಸಿದರು.
ಹಸಿರು ಪರಿಸರವು ಸಂಪೂರ್ಣವಾಗಿ ಹೊಸ ತಂತ್ರಜ್ಞಾನಗಳ ಮೇಲೆ ಅವಲಂಬಿತವಾಗಿದೆ. ಭವಿಷ್ಯದ ಪೀಳಿಗೆಯನ್ನು ಮಾಲಿನ್ಯ ಮತ್ತು ಯುದ್ಧದಂತಹ ವಿಪತ್ತುಗಳಿಂದ ರಕ್ಷಿಸಲು ಹಸಿರು ಶಕ್ತಿಯ ಅಭಿವೃದ್ಧಿ ಮಹತ್ವದ್ದಾಗಿದೆ ಎಂದು ಹೇಳಿದರು.
ನ್ಯಾನೊ ಮತ್ತು ಸಾಫ್ಟ್ೃ ಮ್ಯಾಟರ್ ಸೈನ್ಸಸ್ ಕೇಂದ್ರದ ವಿಜ್ಞಾನಿ ಡಾ. ಸಿ.ವಿ. ಯಲಮಗ್ಗದ್ ಪ್ರಮುಖ ಭಾಷಣ ಮಾಡಿದರು.