ಭಾರತದಲ್ಲಿ ಆಡಳಿತ ನಡೆಸಿದ ಮುಸ್ಲಿಂ ದೊರೆಗಳಿಂದ ಉರ್ದು ದೇಶಕ್ಕೆ ಪರಿಚಯವಾಯಿತು ಎಂಬ ಕಲ್ಪನೆ ಇದೆ. ಭಾರತದಲ್ಲಿ, ಅದರಲ್ಲೂ ಕಲಬುರಗಿ, ವಿಜಯಪುರ, ಮಹಾರಾಷ್ಟ್ರದ ಔರಂಗಾಬಾದ್ ಪ್ರದೇಶದಲ್ಲಿ ಈ ಭಾಷೆ ಉದಯವಾಗಿ ದೇಶ ಹಾಗೂ ಉಪ ಖಂಡದಲ್ಲಿಯೂ ಪಸರಿಸಿದೆ ಎಂದರು. ಉತ್ತರ ಭಾರತದಲ್ಲಿ ಅನ್ಯ ಸಮುದಾಯದ ಜನರು ಸಹ ಉರ್ದು ಭಾಷೆಯ ಕೃಷಿ ಮಾಡಿದ್ದಾರೆ. ದೆಹಲಿಯ ರಘುಪತಿ ಫಿರಾಖ್ ಗೋರಖ್‌ಪುರಿ, ಭಗವಾನ್ ದಾಸ್ ಏಜಾಜ್, ನರೇಶ್ ಶಾದ್, ಗ್ಯಾನ ಚಂದ್ ಜೈನ್, ಪ್ರೊ. ಜಗನ್ನಾಥ ಆಜಾದ್, ಪ್ರೊ. ಗೋಪಿಚಂದ್ ನಾರಂಗ್ ಇವರು ಉರ್ದು ಭಾಷಾ ಸಾಹಿತ್ಯದಲ್ಲಿ ಹೆಸರು ಮಾಡಿದ್ದಾರೆ. ಬೆಂಗಳೂರು ವಿವಿಯಲ್ಲಿ ಉರ್ದು ವಿಭಾಗದಲ್ಲಿ ಪ್ರಾಧ್ಯಾಪಕಿಯಾಗಿ ಪ್ರೊ. ಅನುಪಮ ಪೋಲ್ ಸೇವೆ ಸಲ್ಲಿಸುತ್ತಿದ್ದಾರೆ ಎಂದರು. ಹಲವಾರು ದಶಕಗಳಿಂದ ಬಾಲಿವುಡ್ ಚಲನಚಿತ್ರಗಳ ಸಂಭಾಷಣೆಯಲ್ಲಿ, ಗೀತೆಗಳಲ್ಲಿ ಉರ್ದು ಪದಪುಂಜಗಳನ್ನು ಧಾರಾಳವಾಗಿ ಬಳಕೆ ಮಾಡಲಾಗುತ್ತಿದೆ. ಭಾಷೆಗಳು ಯಾವುದೇ ಒಂದು ಜಾತಿ, ಧರ್ಮಕ್ಕೆ ಸೀಮಿತವಲ್ಲ ಎಂದು ಹೇಳಿದರು.