ಕೇರಳದ ಮಾಜಿ ಸಿಎಂ ನಿವಾಸದ ಮೇಲಿನ ಇಡಿ ದಾಳಿ ವಿರೋಧಿಸಿ ಸಿಪಿಐ(ಎಂ)ಪಕ್ಷದ ಜಿಲ್ಲಾ ಕಾರ್ಯಕರ್ತರು ದಾವಣಗೆರೆಯಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು. ಕೆ.ಎಚ್.ಆನಂದರಾಜ್, ಶ್ರೀನಿವಾಮೂರ್ತಿ, ಶ್ರೀನಿವಾಸ್, ನೇತ್ರಾವತಿ, ಅನುಷಾ, ಮಂಜುನಾಥ್ ಆಲೂರು, ಮಂಜುನಾಥ್ ನಿಟುವಳ್ಳಿ, ರೂಪಾ ಜರೀಕಟ್ಟೆ ಇತರರಿದ್ದರು.
ದಾವಣಗೆರೆ: ಕೇರಳದ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ನಿವಾಸದ ಮೇಲೆ ಇಡಿ ನಡೆಸಿದ ದಾಳಿ ಹಾಗೂ ನವದೆಹಲಿಯಲ್ಲಿ ಪ್ರತಿಭಟನಾನಿರತ ಸಿಪಿಐ (ಎಂ) ಮುಖಂಡರ ಬಂಧನ ವಿರೋಧಿಸಿ ಪಕ್ಷದ ಜಿಲ್ಲಾ ಕಾರ್ಯಕರ್ತರು ಜಯದೇವ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು ನವದೆಹಲಿಯಲ್ಲಿ ಪ್ರಧಾನಿ ಅವರನ್ನು ತಕ್ಷಣ ಇಂತಹ ಕ್ರಮವು ನಡೆಯುತ್ತಿರುವುದು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ. ರಾಜಕೀಯವಾಗಿ ರಚಿಸಿದ ನಾಟಕದಂತೆ ಕಾಣುತ್ತದೆ. ಪಿಣರಾಯಿ ವಿಜಯನ್ ಅವರನ್ನು ನಿರಂತರವಾಗಿ ಗುರಿಯಾಗಿಸುತ್ತಿರುವುದು ಹಿಂದಿನ ರಾಜಕೀಯ ಪ್ರತೀಕಾರವನ್ನು ಮತ್ತಷ್ಟು ಬಹಿರಂಗಪಡಿಸುತ್ತದೆ ಎಂದು ಪ್ರತಿಭಟನಾಕಾರರು ದೂರಿದರು.
ಯಾವುದೇ ತನಿಖಾ ಪ್ರಕ್ರಿಯೆಯನ್ನು ತಡೆಯುವ ಉದ್ದೇಶವನ್ನು ಪಕ್ಷವು ಹೊಂದಿಲ್ಲ. ಆದರೆ, ಕೇಂದ್ರ ಸರ್ಕಾರವು ರಾಜಕೀಯ ಗುರಿಯಿಂದ ಕೇಂದ್ರ ಸಂಸ್ಥೆಗಳ ದುರುಪಯೋಗ ಮಾಡಿಕೊಳ್ಳುವುದನ್ನು ಒಪ್ಪಿಕೊಳ್ಳಲಾಗದು.
ವಿರೋಧ ಪಕ್ಷದ ನಾಯಕರನ್ನು ಗುರಿಯಾಗಿಸಿ ರಾಜಕೀಯ ಪ್ರೇರಿತ ದಾಳಿ ನಿಲ್ಲಿಸಬೇಕು. ಇಂತಹ ದಾಳಿ ಮತ್ತು ಪ್ರಜಾಪ್ರಭುತ್ವ ಹಕ್ಕುಗಳ ಮೇಲಿನ ದಾಳಿಯ ವಿರುದ್ಧ ಪಕ್ಷವು ಜನರನ್ನು ಸಜ್ಜುಗೊಳಿಸಿ ದೇಶಾದ್ಯಂತ ಬಲವಾದ ಪ್ರತಿಭಟನೆಗಳನ್ನು ಸಂಘಟಿಸಲಾಗುವುದು ಎಂದು ಮುಖಂಡರು ಹೇಳಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೆ.ಎಚ್.ಆನಂದರಾಜ್, ಶ್ರೀನಿವಾಮೂರ್ತಿ, ಶ್ರೀನಿವಾಸ್, ನೇತ್ರಾವತಿ, ಅನುಷಾ, ಮಂಜುನಾಥ್ ಆಲೂರು, ಮಂಜುನಾಥ್ ನಿಟುವಳ್ಳಿ, ಮುದಿಮಲ್ಲನಗೌಡ, ರೂಪಾ ಜರೀಕಟ್ಟೆ, ಆಶಾ, ಹನುಮಂತಪ್ಪ ಬೇತೂರು, ಫಾರೂಕ್ ಇದ್ದರು.