ಮೆಕ್ಕೆಜೋಳದಲ್ಲಿ ಬುಡಗುಂಟೆ ಹೊಡೆಯಲು ಪ್ರತಿ ಎಕರೆಗೆ 1200 ರೂ. ದರ ನಿಗದಿ ಮಾಡಿದ್ದಾರೆ. ಮೇವಿನ ಕೊರತೆ, ಎತ್ತುಗಳ ಸಾಕಣೆಯ ವೆಚ್ಚ ಹಾಗೂ ಎತ್ತುಗಳನ್ನು ಕೊಂಡು ತರಲು ವಿಪರೀತ ದುಬಾರಿ ಬೆಲೆ, ಹೀಗೆ ಹಲವು ಅನಾನುಕೂಲತೆ ಇರುವುದರಿಂದ ಬುಡಗುಂಟೆ ಹೊಡೆಯಲು ಬೇಸಾಯದ ದರವನ್ನು ಏರಿಕೆ ಮಾಡುವುದು ಅನಿವಾರ್ಯವಾಗಿದೆ ಎನ್ನುತ್ತಾರೆ ಬೇಸಾಯ ಹೊಂದಿರುವ ರೈತರು.