ಮಕ್ಕಳನ್ನ ಉತ್ತಮ ನಾಗರಿಕರಾಗಿಸುವುದು ಶಿಕ್ಷಕರ ಆದ್ಯ ಕರ್ತವ್ಯ

ಹನುಮಂತಾಪುರ ಗೊಲ್ಲರಹಟ್ಟಿಯಲ್ಲಿ ಮಂಗಳವಾರ ಗುರುವಂದನಾ, ಬೀಳ್ಕೊಡುಗೆ ಸಮಾರಂಭ ಹಾಗೂ ಪರಿಸರ ದಿನಾಚರಣೆಯನ್ನು ನಿವೃತ್ತ ಶಿಕ್ಷಕ ಅಲ್ಲಾಭಕ್ಷಿ ಉದ್ಘಾಟಿಸಿದರು. ಅಸ್ಮಾ, ಎಚ್. ಹಳ್ಳೆಪ್ಪ, ಡಾ.ಟಿ. ಬಸವರಾಜ್, ಜ್ಞಾನೇಶ್ವರಿ, ಹನುಮಂತಪ್ಪ,  ಜಿ.ಆರ್. ಚಿತ್ರಲಿಂಗಪ್ಪ ಇತರರಿದ್ದರು. Guruvandan
ಹನುಮಂತಾಪುರ ಗೊಲ್ಲರಹಟ್ಟಿಯಲ್ಲಿ ಮಂಗಳವಾರ ಗುರುವಂದನಾ, ಬೀಳ್ಕೊಡುಗೆ ಸಮಾರಂಭ ಹಾಗೂ ಪರಿಸರ ದಿನಾಚರಣೆಯನ್ನು ನಿವೃತ್ತ ಶಿಕ್ಷಕ ಅಲ್ಲಾಭಕ್ಷಿ ಉದ್ಘಾಟಿಸಿದರು. ಅಸ್ಮಾ, ಎಚ್. ಹಳ್ಳೆಪ್ಪ, ಡಾ.ಟಿ. ಬಸವರಾಜ್, ಜ್ಞಾನೇಶ್ವರಿ, ಹನುಮಂತಪ್ಪ, ಜಿ.ಆರ್. ಚಿತ್ರಲಿಂಗಪ್ಪ ಇತರರಿದ್ದರು. Guruvandan
Published on

ಪ್ರಮುಖ ಮುಖ್ಯಾಂಶಗಳು

  • ನಿವೃತ್ತ ಶಿಕ್ಷಕ ಅಲ್ಲಾಭಕ್ಷಿ ಅಭಿಪ್ರಾಯ
  • ಹನುಮಂತಾಪುರ ಗೊಲ್ಲರಹಟ್ಟಿಯಲ್ಲಿ ಗುರುವಂದನೆ, ಬೀಳ್ಕೊಡುಗೆ ಸಮಾರಂಭ
ಜಗಳೂರು: ನಾವು ಗಳಿಸಿದ ಆಸ್ತಿ, ಅಂತಸ್ತು, ಸಂಪತ್ತು ಯಾವುದೂ ಶಾಶ್ವತವಲ್ಲ, ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ಜತೆಗಿರುತ್ತದೆ ಎಂದು ನಿವೃತ್ತ ಶಿಕ್ಷಕ ಅಲ್ಲಾಭಕ್ಷಿ ಅಭಿಪ್ರಾಯಪಟ್ಟರು. Guruvandan
ತಾಲೂಕಿನ ಹನುಮಂತಾಪುರ ಗೊಲ್ಲರಹಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಗುರುವಂದನಾ, ಬೀಳ್ಕೊಡುಗೆ ಸಮಾರಂಭ ಹಾಗೂ ಪರಿಸರ ದಿನಾಚರಣೆಯಲ್ಲಿ ಮಾತನಾಡಿದರು.
ಶಿಕ್ಷಕರಾದವರು ಮಕ್ಕಳಿಗೆ ಉತ್ತಮ ಮಾರ್ಗದರ್ಶನ ಮಾಡಿ ನಾಗರಿಕರನ್ನಾಗಿಸುವ ಕೆಲಸ ಮಾಡಬೇಕು. ಸಾರ್ವಜನಿಕರು ಪಾವತಿಸಿದ ತೆರಿಗೆ ಹಣದಲ್ಲಿ ಸಂಬಳ ನೀಡಲಾಗುತ್ತದೆ. ಅದಕ್ಕೆ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದರು.
ಮುಖ್ಯಶಿಕ್ಷಕಿ ಅಸ್ಮಾ ಮಾತನಾಡಿ, ನಾವು ಸಮಾಜದಿಂದ ಸಾಕಷ್ಟು ಪಡೆದಿದ್ದೇವೆ. ಅದರಲ್ಲಿ ಒಂದಿಷ್ಟನ್ನು ಸಮಾಜ ಸೇವೆಗೆ ಬಳಸಬೇಕು. ಆಗ ಮಾತ್ರ ಗುರುಗಳಿಗೆ, ಹೆತ್ತವರಿಗೆ ಗೌರವ ಸಲ್ಲಿಸಲು ಭೂಮಿಯ ಋಣ ತೀರಿಸಲು ಸಾಧ್ಯ ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ಎಚ್. ಹಳ್ಳೆಪ್ಪ ಮಾತನಾಡಿ, ಶಿಕ್ಷಕರ ಸೇವೆ ಮತ್ತು ಗ್ರಾಮಸ್ಥರ ಸಹಕಾರದಿಂದ ಮಕ್ಕಳು ಉತ್ತಮ ಶಿಕ್ಷಣ ಕಲಿಯುತ್ತಿದ್ದಾರೆ. ಮಕ್ಕಳು ಶಿಕ್ಷಕರ ಮಾರ್ಗದರ್ಶ ನವನ್ನು ಪಾಲಿಸಿ ಉನ್ನತ ಸ್ಥಾನಮಾನ ಹೊಂದಿ ತಂದೆ ತಾಯಿಗಳಿಗೆ ಕೀರ್ತಿ ತರಬೇಕು ಎಂದು ಹೇಳಿದರು. ಉಪನ್ಯಾಸಕ ಡಾ.ಟಿ ಬಸವರಾಜ್ ನಿರೂಪಣೆ ಮಾಡಿದರು.
ಹಬ್ಬದ ಸಂಭ್ರಮ: ಗುರುವಂದನಾ ಕಾರ್ಯಕ್ರಮದ ಹಿನ್ನೆಲೆ ಗ್ರಾಮದ ಮುಖ್ಯ ಬೀದಿಗಳನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಮನೆ ಎದುರು ರಂಗೋಲಿ ಬಿಡಿಸಲಾಗಿತ್ತು. ಗ್ರಾಮದ ಪ್ರಮುಖ ಸ್ಥಳಗಳಲ್ಲಿ ನೂರಾರು ಸಸಿಗಳನ್ನು ನೆಡಲಾಗಿತ್ತು. ಗ್ರಾಮಕ್ಕೆ ಆಗಮಿಸಿದ ಶಿಕ್ಷಕ ವೃಂದವನ್ನು ಗ್ರಾಮಸ್ಥರು ಆರತಿ ಬೆಳಗಿ ಅದ್ದೂರಿಯಾಗಿ ಸ್ವಾಗತಿಸಿದರು. ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಪ್ರತಿಯೊಬ್ಬರಿಗೂ ಸಿಹಿ ಊಟ ನೀಡಲಾಯಿತು.
ಶಿಕ್ಷಕರಾದ ಜ್ಞಾನೇಶ್ವರಿ, ಹನುಮಂತಪ್ಪ, ಜಿ.ಆರ್. ಚಿತ್ರಲಿಂಗಪ್ಪ, ಲಿಂಗರಾಜ್, ಭಾರತೀಯ ಸೈನಿಕ ಡಿ. ಚಂದ್ರಪ್ಪ, ಯಜಮಾನ ಚಿತ್ತಪ್ಪ, ಸಣ್ಣೀರಪ್ಪ, ಪಾಲಮ್ಮ, ಪೂಜಾರಿ ಸೀನಪ್ಪ, ಎಚ್. ಶಿವಕುಮಾರ್, ಗ್ರಾಪಂ ಮಾಜಿ ಸದಸ್ಯ ಲ್ಯಾಬ್ ಶಿವು, ಭಾಗ್ಯಮ್ಮ, ಶ್ರೀನಿವಾಸ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net