ಕೊಗ್ಗನೂರು ಗ್ರಾಮದಲ್ಲಿ ಆಂಜನೇಯ, ಬೀರಲಿಂಗೇಶ್ವರ, ದುರ್ಗಾಂಬಿಕಾ ದೇವಿಗೆ ಕರಗಲ್ಲು ಪೂಜೆ, ಜಲಾಭಿಷೇಕ ನಡೆಸಲಾಗಿದೆ. ಕೆಲ ಗ್ರಾಮಸ್ಥರು ಅಮ್ಮನಗುಡ್ಡದ ದೇವಿಗೆ ಪೂಜೆ ಸಲ್ಲಿಸಿದ್ದಾರೆ. ಜಿಲ್ಲಾ, ತಾಲೂಕು ಬಿತ್ತನೆ ಬೀಜ, ಕ್ರಿಮಿನಾಶಕ, ರಸಗೊಬ್ಬರ ಮಾರಾಟಗಾರರ ಸಂಘದಿಂದಲೂ ನಗರದೇವತೆ ದುಗಾಂಬೆ ದೇವಸ್ಥಾನದ ಬಳಿಯ ಕರಗಕಲ್ಲಿಗೆ ಪೂಜೆ ನಡೆದಿದೆ.