ಕಾರ್ಗಿಲ್ ಯುದ್ಧದ ದಿಗ್ವಿಜಯ ಅವಿಸ್ಮರಣೀಯ

ದಾವಣಗೆರೆಯಲ್ಲಿ ಕರ್ನಲ್ ದಿ. ಎಂ.ಬಿ. ರವೀಂದ್ರನಾಥ್ ವಿರಚಿತ ‘ಕಾರ್ಗಿಲ್ ಯುದ್ಧ ನಿರ್ಣಾಯಕ ತಿರುವು..’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭೂಸೇನೆಯ ಮಾಜಿ ಉಪ ಮುಖ್ಯಸ್ಥ ನಿವೃತ್ತ ಲೆಫ್ಟಿನೆಂಟ್ ಜನರಲ್ ಬಿ.ಎಸ್. ರಾಜು, ನಿವೃತ್ತ ಯೋಧ ದಿಗೇಂದ್ರ ಕುಮಾರ್, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಕೆ.ಜಿ. ಬಸವನಗೌಡ, ಅನಿತಾ ಇತರರಿದ್ದರು.
ದಾವಣಗೆರೆಯಲ್ಲಿ ಕರ್ನಲ್ ದಿ. ಎಂ.ಬಿ. ರವೀಂದ್ರನಾಥ್ ವಿರಚಿತ ‘ಕಾರ್ಗಿಲ್ ಯುದ್ಧ ನಿರ್ಣಾಯಕ ತಿರುವು..’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭೂಸೇನೆಯ ಮಾಜಿ ಉಪ ಮುಖ್ಯಸ್ಥ ನಿವೃತ್ತ ಲೆಫ್ಟಿನೆಂಟ್ ಜನರಲ್ ಬಿ.ಎಸ್. ರಾಜು, ನಿವೃತ್ತ ಯೋಧ ದಿಗೇಂದ್ರ ಕುಮಾರ್, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಕೆ.ಜಿ. ಬಸವನಗೌಡ, ಅನಿತಾ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ದುರ್ಗಮ ತಾಪಮಾನದಲ್ಲೂ ಅಪ್ರತಿಮ ಸಾಧನೆ
  • ನಿವೃತ್ತ ಲೆಫ್ಟಿನೆಂಟ್ ಜನರಲ್ ಬಿ.ಎಸ್. ರಾಜು ಹೇಳಿಕೆ
  • ದಿ.ಎಂ.ಬಿ. ರವೀಂದ್ರನಾಥ್ ವಿರಚಿತ ಪುಸ್ತಕ ಬಿಡುಗಡೆ
ದಾವಣಗೆರೆ: ಭಾರತೀಯ ಯೋಧರಿಗೆ ಕಠಿಣ ಸವಾಲಾಗಿದ್ದ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನವನ್ನು ಮಣಿಸಿ ವಿಜಯದ ಪತಾಕೆ ಹಾರಿಸಿದ್ದು ಅವಿಸ್ಮರಣೀಯ ಎಂದು ಭೂಸೇನೆಯ ಮಾಜಿ ಉಪ ಮುಖ್ಯಸ್ಥ ನಿವೃತ್ತ ಲೆಫ್ಟಿನೆಂಟ್ ಜನರಲ್ ಬಿ.ಎಸ್. ರಾಜು ತಿಳಿಸಿದರು.
ನಗರದ ಶ್ರೀಗುರು ಬಕ್ಕೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ, ಕರ್ನಲ್ ದಿ. ಎಂ.ಬಿ. ರವೀಂದ್ರನಾಥ್ ವಿರಚಿತ ‘ಕಾರ್ಗಿಲ್ ಯುದ್ಧ ನಿರ್ಣಾಯಕ ತಿರುವು..’ ಕನ್ನಡ ಅನುವಾದಿತ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ಅತಿ ಎತ್ತರ ಪ್ರದೇಶವಾದ ಕಾರ್ಗಿಲ್‌ನಲ್ಲಿ ಸದಾ ಕಡಿಮೆ ಆಮ್ಲಜನಕ ಇರುತ್ತದೆ. ಅಲ್ಲಿ ಯುದ್ಧ ಮಾಡುವುದು ಸವಾಲಿನದಾಗಿತ್ತು. ಪ್ರತಿಕೂಲ ವಾತಾವರಣ ಇನ್ನೊಂದು ರೀತಿ ಸವಾಲು ಒಡ್ಡುತ್ತಿತ್ತು. ಅಂತಹ ದುರ್ಗಮ ವಾತಾವರಣದಲ್ಲೂ ಕರ್ನಲ್ ರವೀಂದ್ರನಾಥ್ ತಂಡ ಅಪ್ರತಿಮ ಕೆಲಸ ಮಾಡಿ, ಗೆಲುವು ಸಾಧಿಸಿತು ಎಂದರು.
ಕಾರ್ಗಿಲ್ ಯುದ್ಧದಲ್ಲಿ ಸಾಹಸ ತೋರಿದ ಕರ್ನಲ್ ಎಂ.ಬಿ. ರವೀಂದ್ರನಾಥ್ ನನಗಿಂತಲೂ 5 ವರ್ಷ ಹಿರಿಯರು. ಕಾರ್ಗಿಲ್ ಯುದ್ಧದಲ್ಲಿ ಅವರೊಂದಿಗೆ ಇದ್ದಂತಹ ನೆನಪು ಈಗಲೂ ಹಚ್ಚ ಹಸಿರಾಗಿದೆ. ಯುದ್ಧ್ದದ ಸಂದರ್ಭದಲ್ಲಿ ನಮಗೆ ಎಲ್ಲ ಮಾಹಿತಿ ದೊರೆಯುತ್ತಿತ್ತು. ಟೋಲೋಲಿಂಗ್ ವಶಪಡಿಸಿಕೊಂಡಿದ್ದು ಮರೆಯಲಾಗದ ಕ್ಷಣ ಎಂದು ತಿಳಿಸಿದರು.
ಸಿಯಾಚಿನ್‌ನಲ್ಲಿ ಮೈನಸ್ 50 ಡಿಗ್ರಿ ಸೆಲ್ಸಿಯಸ್ ತಾಪಮಾನ ಇದ್ದರೂ ಯುದ್ಧ್ದ ಮಾಡಿದ್ದೇವೆ. ಕದನ ವಿರಾಮ ಎಂಬುದೇ ಇರಲಿಲ್ಲ. ಪಾಕಿಸ್ತಾನದಿಂದ ನಿರಂತರವಾಗಿಯೇ ಗುಂಡಿನ ದಾಳಿ ನಡೆಯುತ್ತಿತ್ತು. 25 ಜನ ಸೈನಿಕರು, ಅಧಿಕಾರಿಗಳನ್ನ ಕಳೆದುಕೊಂಡೆವು. 82 ಯೋಧರು ತೀವ್ರವಾಗಿ ಗಾಯಗೊಂಡರು. ಆದರೂ, ಎದೆಗುಂದದೆ ಯುದ್ಧ ಗೆದ್ದೆವು ಎಂದು ಗರ್ವದಿಂದ ಹೇಳಿಕೊಂಡರು.
ರವೀಂದ್ರನಾಥ್ ಅವರು ಕಾರ್ಗಿಲ್ ಯುದ್ಧದ ಅನುಭವಕ್ಕೆ ಅಕ್ಷರ ರೂಪ ನೀಡಿದ್ದಾರೆ. ಅವರ ಪುಸ್ತಕ ಎಲ್ಲ ಸೇನೆಯ ಅಧಿಕಾರಿಗಳು, ಸೈನಿಕರಿಗೆ ಸದಾ ಸ್ಫೂರ್ತಿ, ಪ್ರೇರಣೆ ನೀಡಲಿದೆ. ಕೆಲವಾರು ಕಹಿ ಘಟನೆಗಳನ್ನೂ ಪುಸ್ತಕದಲ್ಲಿ ಮೆಲುಕು ಹಾಕಿದ್ದಾರೆ ಎಂದು ತಿಳಿಸಿದರು.
ನಿವೃತ್ತ ಯೋಧ ದಿಗೇಂದ್ರ ಕುಮಾರ್ ಮಾತನಾಡಿ, ಟು ರಾಜ್ರಿಫ್ ಬೆಟಾಲಿಯನ್ ಸೇನಾ ತುಕಡಿಯಲ್ಲೇ ಅತಿ ಹೆಚ್ಚಿನ ಪದಕ ಪಡೆದ ಧೈರ್ಯಶಾಲಿ ಪಡೆ. ಕಾರ್ಗಿಲ್ ಯುದ್ದದಲ್ಲಿ ಮೂರು ತಲೆಮಾರಿನವರೂ ಭಾಗವಹಿಸಿರುವ ಉದಾಹರಣೆ ಇವೆ. ಕಾರ್ಗಿಲ್ ಯುದ್ಧಕ್ಕೆ ಮೊದಲ ಗೆಲುವು ತಂದುಕೊಟ್ಟವರ ದೇಶಪ್ರೇಮ, ದೇಶಸೇವೆಯನ್ನು ದೇಶ ಸದಾ ನೆನೆಪಿನಲ್ಲಿಡಲಿದೆ ಎಂದು ತಿಳಿಸಿದರು.
ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಜಿ. ಬಸವನಗೌಡ, ಕರ್ನಲ್ ದಿ. ರವೀಂದ್ರನಾಥ್ ಅವರ ಪತ್ನಿ ಅನಿತಾ, ಎಂ.ಬಿ. ಹಾಲಸ್ವಾಮಿ, ಸರೋಜಮ್ಮ, ಶರ್ಮಿಳಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net