

ಪ್ರಮುಖ ಮುಖ್ಯಾಂಶಗಳು
ಬಿಸಿಲು ಏರುತ್ತಿದ್ದಂತೆ ಎಲೆಚುಕ್ಕಿ ಮತ್ತು ನುಸಿ ರೋಗ ಕಾಣಿಸಿಕೊಳ್ಳುವುದು ಸಹಜ. ರೈತರು ಆತಂಕಕ್ಕೆ ಒಳಗಾಗದೆ ಗಿಡಗಳಲ್ಲಿ ನೀರಿನ ತೇವಾಂಶ ಕಡಿಮೆಯಾಗದಂತೆ ನೋಡಿಕೊಳ್ಳಬೇಕು. ರೋಗ ಕಂಡುಬಂದ ತಕ್ಷಣ ಸೂಕ್ತ ಕೀಟನಾಶಕ ಸಿಂಪಡಿಸಿದರೆ ಹತೋಟಿಗೆ ತರಬಹುದು.
ನಮ್ಮ 2 ಎಕರೆ ಜಮೀನಿನಲ್ಲಿದ್ದ 1,100 ಗಿಡಗಳ ಪೈಕಿ ಸುಮಾರು 200 ಗಿಡಗಳಿಗೆ ನುಸಿ ರೋಗ ತಗುಲಿ ಗರಿಗಳು ಸುಟ್ಟಂತಾಗಿವೆ. ತಕ್ಷಣ ಕೀಟನಾಶಕ ಸಿಂಪಡಿಸಿದ್ದರಿಂದ ಈಗ ರೋಗ ಸ್ವಲ್ಪ ಹತೋಟಿಗೆ ಬಂದಿದೆ.
ಬೇಸಿಗೆಯಲ್ಲಿ ತಾಪಮಾನ ಹೆಚ್ಚಾದಂತೆ ರೋಗಗಳು ಹರಡುತ್ತವೆ. ರೈತರು ಕೀಟನಾಶಕ ಸಿಂಪಡಣೆಯ ಜತೆಗೆ ಅಡಕೆ ತೋಟದಲ್ಲಿ ಅಂತರ ಬೆಳೆಯಾಗಿ ಸೆಣಬು, ಹಲಸಂದೆ ಅಥವಾ ಅವರೆಯನ್ನು ಬೆಳೆದರೆ ರೋಗ ಹರಡುವುದನ್ನು ಬೇಗನೆ ತಡೆಗಟ್ಟಬಹುದು.