ಉಕ್ಕಡಗಾತ್ರಿಯಲ್ಲಿ ವೈಭವದ ಅಜ್ಜಯ್ಯನ ಬೆಳ್ಳಿ ರಥೋತ್ಸವ

 ಮಲೇಬೆನ್ನೂರು ಸಮೀಪದ ಉಕ್ಕಡಗಾತ್ರಿಯಲ್ಲಿ ಕರಿಬಸವೇಶ್ವರ ಅಜ್ಜಯ್ಯನ ಬೆಳ್ಳಿ ರಥೋತ್ಸವ ವೈಭವದಿಂದ ನಡೆಯಿತು.
ಮಲೇಬೆನ್ನೂರು ಸಮೀಪದ ಉಕ್ಕಡಗಾತ್ರಿಯಲ್ಲಿ ಕರಿಬಸವೇಶ್ವರ ಅಜ್ಜಯ್ಯನ ಬೆಳ್ಳಿ ರಥೋತ್ಸವ ವೈಭವದಿಂದ ನಡೆಯಿತು.
Published on

ಪ್ರಮುಖ ಮುಖ್ಯಾಂಶಗಳು

  • ನಂದಿಗುಡಿ ಸಿದ್ದರಾಮೇಶ್ವರ ಸ್ವಾಮೀಜಿ ಪೂಜೆ
  • ಹರಿಹರ ತಾಲೂಕಿನ ಉಕ್ಕಡಗಾತ್ರಿ
  • ಭಕ್ತರ ನಡುವೆ ಕರಿಬಸವೇಶ್ವರ ಅಜ್ಜಯ್ಯನ ಬೆಳ್ಳಿ ರಥೋತ್ಸವ
ಮಲೇಬೆನ್ನೂರು: ಹರಿಹರ ತಾಲೂಕಿನ ಉಕ್ಕಡಗಾತ್ರಿಯಲ್ಲಿ ಇತ್ತೀಚೆಗೆ ನೂರಾರು ಭಕ್ತರ ನಡುವೆ ಕರಿಬಸವೇಶ್ವರ ಅಜ್ಜಯ್ಯನ ಬೆಳ್ಳಿ ರಥೋತ್ಸವ, ಕಾರ್ತಿಕೋತ್ಸವ, ಪಾಲಿಕೋತ್ಸವ ವೈಭವದಿಂದ ನಡೆಯಿತು.
ಬೆಳಗ್ಗೆ ಸ್ವಾಮಿಯ ಗದ್ದಿಗೆಗೆ ಮಹಾರುದ್ರಾಭಿಷೇಕ ನೆರವೇರಿಸಲಾಯಿತು. ಬಣ್ಣದ ಹೂಗಳಿಂದ ಅಜ್ಜಯ್ಯನ ಬೆಳ್ಳಿ ರಥವನ್ನು ಸಿಂಗರಿಸಲಾಗಿತ್ತು. ಉತ್ಸವ ಮೂರ್ತಿಯನ್ನು ರಥದಲ್ಲಿ ಗದ್ದಿಗೆಗೊಳಿಸಲಾಯಿತು. ನಂದಿಗುಡಿ ಬೃಹನ್ಮಠದ ಸಿದ್ದರಾಮೇಶ್ವರ ಸ್ವಾಮೀಜಿ ಬೆಳ್ಳಿ ರಥಕ್ಕೆ ಪೂಜೆ ಸಲ್ಲಿಸಿ, ಅಜ್ಜಯ್ಯನ ರಥೋತ್ಸವಕ್ಕೆ ಚಾಲನೆ ನೀಡಿದರು.

ರಾಜ್ಯ ಮಟ್ಟದ ಭಜನಾ ಸ್ಪರ್ಧೆ

ಕರಿಬಸವೇಶ್ವರ ಅಜ್ಜಯ್ಯನಿಗೆ ಜೈಕಾರ ಕೂಗುತ್ತಾ ಭಕ್ತರು ಬೆಳ್ಳಿ ರಥ ಎಳೆದರು. ವೀರಗಾಸೆ, ಜಾಂಜ್ ಮೇಳ, ಭಜನೆ, ಭಾಜಾ ಭಜಂತ್ರಿಗಳು ರಥೋತ್ಸವಕ್ಕೆ ಮೆರಗು ನೀಡಿದವು. ಬೆಳ್ಳಿ ರಥೋತ್ಸವದ ಪ್ರಯುಕ್ತ ದೇವಾಲಯದ ಆವರಣದಲ್ಲಿ ರಾಜ್ಯ ಮಟ್ಟದ ಭಜನಾ ಸ್ಪರ್ಧೆ ನಡೆಯಿತು. ರಾಜ್ಯದ ನಾನಾ ಭಾಗಗಳಿಂದ ಬಂದಿದ್ದ ಭಜನಾ ತಂಡಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು. ಕರಿಬಸವೇಶ್ವರ ಗದ್ದಿಗೆ ಟ್ರಸ್ಟ್ ಸದಸ್ಯರು ಇದ್ದರು.

ಅಜ್ಜಯ್ಯನಿಗೆ ದೀಪ

ರಾತ್ರಿ ಅಜ್ಜಯ್ಯನ ದೇಗುಲದ ಒಳಗೆ ಹಾಗೂ ಹೊರಗೆ ಭಕ್ತರು ನೂರಾರು ಹಣತೆಗಳಿಗೆ ಎಣ್ಣೆ ಹಾಕಿ ದೀಪ ಹಚ್ಚಿ ಕಾರ್ತಿಕೋತ್ಸವ ಆಚರಿಸಿದರು. ರಾತ್ರಿ ಗ್ರಾಮದ ಬೀದಿಗಳಲ್ಲಿ ಅಪಾರ ಭಕ್ತ ಸಮೂಹದೊಂದಿಗೆ ಅಜ್ಜಯ್ಯನ ಪಾಲಿಕೋತ್ಸವ ವೈಭವದಿಂದ ನಡೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net