ನ್ಯಾಮತಿ ತಾಲೂಕಿನ ದಾನಿಹಳ್ಳಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶಿವಮೊಗ್ಗ ವಲಯ ಮಟ್ಟದ ಪ್ರಾಥಮಿಕ ಶಾಲಾ ವಿಭಾಗದ ತರಳಬಾಳು ಕ್ರೀಡಾಕೂಟ ಕಾರ್ಯಕ್ರಮವನ್ನು ಶಾಸಕ ಡಿ.ಜಿ. ಶಾಂತನಗೌಡ ಉದ್ಘಾಟಿಸಿದರು. ಡಿ. ತೀರ್ಥಲಿಂಗಪ್ಪ, ಜಿ. ಶಿವಪ್ಪ, ಪ್ರಾದೇಶಿಕ ಆಧಿಕಾರಿ ಪಿ.ಬಿ. ತಿಪ್ಪೇಸ್ವಾಮಿ ಇತರರಿದ್ದರು.
ನ್ಯಾಮತಿ:ವಿದ್ಯಾರ್ಥಿಗಳು ನಿತ್ಯ ಜೀವನದಲ್ಲಿ ಆಟ- ಪಾಠ ರೂಢಿಸಿಕೊಂಡರೆ ಭವಿಷ್ಯ ಉಜ್ವಲವಾಗಿರುತ್ತದೆ ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.
ತಾಲೂಕಿನ ದಾನಿಹಳ್ಳಿ ಹೊರವಲಯದ ಶ್ರೀ ತರಳಬಾಳು ಜಗದ್ಗುರು ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶಿವಮೊಗ್ಗ ವಲಯ ಮಟ್ಟದ ಪ್ರಾಥಮಿಕ ಶಾಲಾ ವಿಭಾಗದ ತರಳಬಾಳು ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಓದಿನ ಜತೆಗೆ ಕ್ರೀಡೆಗಳಲ್ಲೂ ಸಕ್ರಿಯವಾಗಿ ಭಾಗವಹಿಸಿ ರಾಜ್ಯ ಮತ್ತು ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿ ತಾಲೂಕಿಗೆ, ಪಾಲಕರಿಗೆ ಕೀರ್ತಿ ತರಬೇಕು ಎಂದರು.
ಶಿವಮೊಗ್ಗ ಪ್ರಾದೇಶಿಕ ಅಧಿಕಾರಿ ಪಿ.ಬಿ. ತಿಪ್ಪೇಸ್ವಾಮಿ ಮಾತನಾಡಿ, ಇದು ಭಾವೈಕ್ಯದಿಂದ ಕೂಡಿದ ಕ್ರೀಡಾಕೂಟವಾಗಿದೆ. ನೀವೆಲ್ಲ ಅತ್ಯುತ್ತಮವಾಗಿ ಆಟವಾಡಿ ತರಳಬಾಳು ಸಿರಿಗೆರೆ ಸಂಸ್ಥೆಗೆ ಹೆಸರು ತನ್ನಿರಿ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಆಡಳಿತ ಮಂಡಳಿಯ ಅಧ್ಯಕ್ಷ ಡಿ. ತೀರ್ಥಲಿಂಗಪ್ಪ ಮಾತನಾಡಿದರು. ತಾಲೂಕು ಸಾಧು ವೀರಶೈವ ಸಮಾಜದ ಅಧ್ಯಕ್ಷ ಜಿ. ಶಿವಪ್ಪ ಕ್ರೀಡೆಯ ಧ್ವಜಾರೋಹಣ ನೆರವೇರಿಸಿದರು. ಆಡಳಿತ ಮಂಡಳಿಯ ಉಪಾಧ್ಯಕ್ಷ ಪಿ.ಜಿ. ಈಶ್ವರಪ್ಪಗೌಡ್ರು ಕ್ರೀಡಾ ಜ್ಯೋತಿ ಸ್ವೀಕರಿಸಿದರು. ದೈಹಿಕ ಶಿಕ್ಷಣಾಧಿಕಾರಿ ಜಗದೀಶ್ ಅವರು ಗುಂಡು ಎಸೆಯುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ಕ್ರೀಡಾಕೂಟದಲ್ಲಿ ಬಸವಾಪಟ್ಟಣಡಡ, ಬೆನಕನಹಳ್ಳಿ, ಚನ್ನಗಿರಿ, ಹರಮಗಟ್ಟ, ನಲ್ಲೂರು, ಸೂಗೂರು, ತಾವರೆಚಟ್ನಹಳ್ಳಿ, ದಾನಿಹಳ್ಳಿ ತರಳಬಾಳು ಶಾಲೆಯ ಮಕ್ಕಳು ಭಾಗವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಟಿ. ನಿಂಗಪ್ಪ, ಚಂದ್ರಪ್ಪ, ಜಿ. ಮಲ್ಲೇಶಪ್ಪ, ಎಸ್.ಆರ್. ಬಸವರಾಜಪ್ಪ, ದಾನಿಹಳ್ಳಿ