ಪ್ರತಿ ಮನೆಗೂ ಯೋಗ ತಲುಪಿಸುವ ಉದ್ದೇಶ Yoga

ಹೊನ್ನಾಳಿಯ ಬಿವಿಎಸ್ ಆವರಣದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ವೈದ್ಯ ರಾಜಕುಮಾರ್ ಉದ್ಘಾಟಿಸಿದರು. ಪ್ರಕಾಶ್ ಹೆಬ್ಬಾರ್, ಶ್ರೀಕಾಂತ್ ಕುರುಡೇಕರ್, ವಿನಾಯಕ ಶೆಟ್ರು, ರಾಘವೇಂದ್ರ ವೈಶ್ಯರ್, ಸುಜಾತ ಬೆನ್ನೂರುಮಠ ಇತರರಿದ್ದರು.Yoga
ಹೊನ್ನಾಳಿಯ ಬಿವಿಎಸ್ ಆವರಣದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ವೈದ್ಯ ರಾಜಕುಮಾರ್ ಉದ್ಘಾಟಿಸಿದರು. ಪ್ರಕಾಶ್ ಹೆಬ್ಬಾರ್, ಶ್ರೀಕಾಂತ್ ಕುರುಡೇಕರ್, ವಿನಾಯಕ ಶೆಟ್ರು, ರಾಘವೇಂದ್ರ ವೈಶ್ಯರ್, ಸುಜಾತ ಬೆನ್ನೂರುಮಠ ಇತರರಿದ್ದರು.Yoga
Published on

ಪ್ರಮುಖ ಮುಖ್ಯಾಂಶಗಳು

  • ತಾಲೂಕು ಪತಂಜಲಿ ಯೋಗ ಸಮಿತಿ ಅಧ್ಯಕ್ಷ ಪ್ರಕಾಶ್ ಹೆಬ್ಬಾರ್ ಆಶಯ
  • ಉಚಿತ ಆರೋಗ್ಯ ತಪಾಸಣಾ ಶಿಬಿರ
ಹೊನ್ನಾಳಿ: ಪ್ರತಿ ಮನೆಗೂ ಯೋಗ ಪ್ರವೇಶ ಮಾಡಬೇಕು ಹಾಗೂ ಆ ಮೂಲಕ ದೇಶದ ಪ್ರತಿಯೊಬ್ಬ ನಾಗರಿಕನೂ ಆರೋಗ್ಯ ವಂತನಾಗಬೇಕು ಎನ್ನುವುದೇ ಪತಂಜಲಿ ಯೋಗ ಸಮಿತಿಯ ಮುಖ್ಯ ಉದ್ದೇಶ ಎಂದು ತಾಲೂಕು ಪತಂಜಲಿ ಯೋಗ ಸಮಿತಿ ಅಧ್ಯಕ್ಷ ಪ್ರಕಾಶ್ ಹೆಬ್ಬಾರ್ ಹೇಳಿದರು. Yoga
ಪಟ್ಟಣದ ಭಾರತೀಯ ವಿದ್ಯಾಸಂಸ್ಥೆಯ ಆವರಣದಲ್ಲಿ ಮಂಗಳವಾರ ಶಿವಮೊಗ್ಗದ ಸುಬ್ಬಯ್ಯ ವೈದ್ಯಕೀಯ ಮಹಾ ವಿದ್ಯಾಲಯ, ಸ್ವರಾಜ್ ವಾಸವಾಂಬ ಟ್ರ್ಯಾಕ್ಟರ್ಸ್, ತಾಲೂಕು ಪತಂಜಲಿ ಯೋಗ ಸಮಿತಿ ಹಾಗೂ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರತಿನಿತ್ಯ ಕೇವಲ ಒಂದು ಗಂಟೆ ಸಮಯವನ್ನು ಯೋಗಕ್ಕಾಗಿ ಮೀಸಲಿಟ್ಟರೆ, ಯೋಗವು ನಿಮ್ಮ ಆರೋಗ್ಯವನ್ನು ಕಾಪಾಡುತ್ತದೆ. ಈ ನಂಬಿಕೆಯೊಂದಿಗೆ ಪತಂಜಲಿ ಸಂಸ್ಥೆಯು ದೇಶಾದ್ಯಂತ ಲಕ್ಷಾಂತರ ಜನರಿಗೆ ಯೋಗ ಕಲಿಸಿಕೊಡುತ್ತಿದೆ. ಕೇವಲ ಭಾರತ ಮಾತ್ರವಲ್ಲದೆ, ವಿದೇಶಗಳಲ್ಲೂ ಜನರು ಯೋಗ ಕಲಿತು ಸದೃಢರಾಗುತ್ತಿದ್ದಾರೆ. ನಮ್ಮ ಸಂಸ್ಥೆಯು ಆರೋಗ್ಯವೇ ಭಾಗ್ಯ ಎಂಬ ಧ್ಯೇಯದೊಂದಿಗೆ ನಿರಂತರವಾಗಿ ಇಂತಹ ಶಿಬಿರಗಳನ್ನು ಆಯೋಜಿಸುತ್ತಿದೆ ಎಂದರು.
ವೈದ್ಯ ರಾಜಕುಮಾರ್ ಮಾತನಾಡಿ, ಆರ್ಥಿಕ ಸಮಸ್ಯೆಯಿಂದಾಗಿ ಸಣ್ಣಪುಟ್ಟ ತಪಾಸಣೆಗಳಿಗೂ ವೈದ್ಯರ ಬಳಿ ಹೋಗಲಾಗದ ಎಷ್ಟೋ ಜನರಿಗೆ ಇಂತಹ ಉಚಿತ ಆರೋಗ್ಯ ಶಿಬಿರಗಳು ಪ್ರಯೋಜನಕಾರಿಯಾಗಿವೆ ಎಂದು ಹೇಳಿದರು.
ಸಮಿತಿಯ ಖಜಾಂಚಿ ಶ್ರೀಕಾಂತ್ ಕುರುಡೇಕರ್ ಪ್ರಾಸ್ತಾವಿಕ ನುಡಿದರು. ಸಮಾರಂಭದಲ್ಲಿ ಮೂಳೆ ತಜ್ಞ ಡಾ. ಸುರೇಶ್, ಮಕ್ಕಳ ತಜ್ಞ ಡಾ. ವೇಣು ಗೋಪಾಲ್, ಸ್ವರಾಜ್ ವಾಸವಾಂಬ ಟ್ರ್ಯಾಕ್ಟರ್ಸ್ ಡೀಲರ್ರ್ಸ್‌ ಮಾಲೀಕ ವಿನಾಯಕ ಶೆಟ್ರು, ಪತಂಜಲಿ ಯೋಗ ಸಮಿತಿ ಉಪಾಧ್ಯಕ್ಷರಾದ ರಾಘವೇಂದ್ರ ವೈಶ್ಯರ್, ಸುಜಾತ ಬೆನ್ನೂರುಮಠ, ಕಾರ್ಯದರ್ಶಿ ಎಂ.ಬಿ. ರುದ್ರೇಶ್, ಜಗದೀಶ್ ಆಚಾರ್, ಸುರೇಶ್ ಕುಂಬಾರ್, ಜಕ್ಕಾಳಿ ಚನ್ನೇಶ್, ಬಿವಿಎಸ್ ನಿರ್ದೇಶಕರಾದ ಎಚ್.ಎಂ. ಅರುಣ್‌ಕುಮಾರ್, ಕುಂಕೋವ ಹಾಲೇಶ್, ಅಂಬಿಕಾ ಹೆಬ್ಬಾರ್ ಇತರರಿದ್ದರು.

45ಕ್ಕೂ ಹೆಚ್ಚು ವೈದ್ಯರಿಂದ ತಪಾಸಣೆ

ಶಿವಮೊಗ್ಗದ ಸುಬ್ಬಯ್ಯ ವೈದ್ಯಕೀಯ ಕಾಲೇಜಿನ 45ಕ್ಕೂ ಹೆಚ್ಚು ನುರಿತ ವೈದ್ಯರು ಹಾಗೂ ಸಿಬ್ಬಂದಿ ತಂಡ ಶಿಬಿರದಲ್ಲಿ ಪಾಲ್ಗೊಂಡು ಸಾರ್ವಜನಿಕರಿಗೆ ಮಧುಮೇಹ, ಹೃದಯ, ಮೂಳೆ, ಕಿವಿ, ಮೂಗು, ಗಂಟಲು, ಕಣ್ಣು, ಚರ್ಮ, ದಂತ ಹಾಗೂ ಮಕ್ಕಳ ಆರೋಗ್ಯ ತಪಾಸಣೆ ನಡೆಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net