ಪ್ರಮುಖ ಮುಖ್ಯಾಂಶಗಳು.ಶಿಕ್ಷಕರ ಅರ್ಹತಾ ಪರೀಕ್ಷೆಬಯೋಮೆಟ್ರಿಕ್ ವ್ಯವಸ್ಥೆಪೊಲೀಸ್ ಭದ್ರತೆ.ದಾವಣಗೆರೆ : ಜಿಲ್ಲೆಯ 29 ಪರೀಕ್ಷಾ ಕೇಂದ್ರಗಳಲ್ಲಿ ಶನಿವಾರ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ ಸುಸೂತ್ರವಾಗಿ ನಡೆಯಿತು..ಬೆಳಗಿನ ಪತ್ರಿಕೆ 8 ಕೇಂದ್ರಗಳಲ್ಲಿ ನಡೆಯಿತು. ಈ ಪರೀಕ್ಷೆಗೆ 3232 ಅಭ್ಯರ್ಥಿಗಳು ಹೆಸರು ನೋಂದಾಯಿಸಿದ್ದರು. 3029 ಅಭ್ಯರ್ಥಿಗಳು ಹಾಜರಾದರು. 203 ಮಂದಿ ಗೈರು ಹಾಜರಾಗಿದ್ದರು..ಮಧ್ಯಾಹ್ನದ ಪತ್ರಿಕೆಗೆ 9655 ಅಭ್ಯರ್ಥಿಗಳು ಹೆಸರು ನೋಂದಾಯಿಸಿದ್ದರು. 9173 ಮಂದಿ ಹಾಜರಾಗಿದ್ದರು. 482 ಜನ ಗೈರು ಹಾಜರಾಗಿದ್ದರು..ಪರೀಕ್ಷಾ ಕೇಂದ್ರಗಳಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಲೋಹಶೋಧಕಗಳ ಮೂಲಕ ಅಭ್ಯರ್ಥಿಗಳ ತಪಾಸಣೆ ಮಾಡಲಾಯಿತು. ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು.