ದೇವಾಲಯಗಳು ಸಂಸ್ಕಾರ, ಭಕ್ತಿಯ ಕೇಂದ್ರ

  ಚನ್ನಗಿರಿ ತಾಲೂಕಿನ ಬೀಡುಗೊಂಡನಹಳ್ಳಿ ತಾಂಡದಲ್ಲಿ ಮಂಗಳವಾರ ಶ್ರೀ ಆದಿಶಕ್ತಿ ಕುಕ್ಕುವಾಡೇಶ್ವರಿ ದೇವಿ ದೇವಸ್ಥಾನದ ನೂತನ ಶಿಲಾ ವಿಗ್ರಹ ಪ್ರಾಣಪ್ರತಿಷ್ಠಾಪನೆಯನ್ನು ಹಿರೇಮಠದ ಡಾ. ಕೇದಾರಲಿಂಗ ಶಿವಶಾಂತವೀರ ಸ್ವಾಮೀಜಿ ನೆರವೇರಿಸಿದರು. ಎಚ್. ಲಕ್ಷ್ಮಣ್‌ನಾಯ್ಕ, ಬಿ.ಎನ್. ಗಿರೀಶ್, ಬಿ. ಸುರೇಶ್‌ನಾಯ್ಕ, ಜಗದೀಶ್ ಇತರರಿದ್ದರು. Temple
ಚನ್ನಗಿರಿ ತಾಲೂಕಿನ ಬೀಡುಗೊಂಡನಹಳ್ಳಿ ತಾಂಡದಲ್ಲಿ ಮಂಗಳವಾರ ಶ್ರೀ ಆದಿಶಕ್ತಿ ಕುಕ್ಕುವಾಡೇಶ್ವರಿ ದೇವಿ ದೇವಸ್ಥಾನದ ನೂತನ ಶಿಲಾ ವಿಗ್ರಹ ಪ್ರಾಣಪ್ರತಿಷ್ಠಾಪನೆಯನ್ನು ಹಿರೇಮಠದ ಡಾ. ಕೇದಾರಲಿಂಗ ಶಿವಶಾಂತವೀರ ಸ್ವಾಮೀಜಿ ನೆರವೇರಿಸಿದರು. ಎಚ್. ಲಕ್ಷ್ಮಣ್‌ನಾಯ್ಕ, ಬಿ.ಎನ್. ಗಿರೀಶ್, ಬಿ. ಸುರೇಶ್‌ನಾಯ್ಕ, ಜಗದೀಶ್ ಇತರರಿದ್ದರು. Temple
Published on

ಪ್ರಮುಖ ಮುಖ್ಯಾಂಶಗಳು

  • ಕೇದಾರಲಿಂಗ ಶಿವಶಾಂತವೀರ ಶ್ರೀ ಹೇಳಿಕೆ
  • ವಿಗ್ರಹ ಪ್ರಾಣಪ್ರತಿಷ್ಠಾಪನೆ
ಚನ್ನಗಿರಿ: ದೇವಾಲಯಗಳು ಕೇವಲ ಕಲ್ಲು ಮಣ್ಣಿನಿಂದ ನಿರ್ಮಿಸಿದ ಕಟ್ಟಡಗಳಲ್ಲ. ಅವು ಸಂಸ್ಕಾರದ ಬೀಡು ಮತ್ತು ಭಕ್ತಿಯ ಕೇಂದ್ರ ಹಾಗೂ ಒಗ್ಗಟ್ಟಿನ ಪ್ರತೀಕವಾಗಿವೆ ಎಂದು ಹಿರೇಮಠದ ಡಾ. ಕೇದಾರಲಿಂಗ ಶಿವಶಾಂತವೀರ ಸ್ವಾಮೀಜಿ ಹೇಳಿದರು.
ತಾಲೂಕಿನ ಬೀಡುಗೊಂಡನಹಳ್ಳಿ ತಾಂಡದಲ್ಲಿ ಮಂಗಳವಾರ ಶ್ರೀ ಆದಿಶಕ್ತಿ ಕುಕ್ಕುವಾಡೇಶ್ವರಿದೇವಿ ನೂತನ ಶಿಲಾವಿಗ್ರಹ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ವಾತನಾಡಿದರು.
ಮನಸ್ಸಿಗೆ ಶಾಂತಿ, ಆತ್ಮಕ್ಕೆ ನೆಮ್ಮದಿ ಬೇಕಾದಾಗ ದೇವಸ್ಥಾನಗಳಿಗೆ ಹೋಗುತ್ತೇವೆ. ಗಂಟೆಯ ನಾದ, ಮಂತ್ರ, ದೂಪದ ಸುವಾಸನೆಗೆ ಮನಸ್ಸಿನಲ್ಲಿರುವ ಕಲ್ಮಶ ತೊಡೆದು ಹಾಕುವ ಶಕ್ತಿ ಇರುತ್ತದೆ. ದೇಗುಲಗಳು ಅನ್ನದಾನ, ವಿದ್ಯಾದಾನ, ಸವಾಜ ಸೇವೆಯಲ್ಲಿ ತೊಡಗಿಸಿಕೊಂಡಿರುತ್ತವೆ. ಇದನ್ನು ಕಟ್ಟುವುದು ಸುಲಭ, ಆದರೆ ಉಳಿಸಿಕೊಂಡು ಹೋಗುವುದು ಕಷ್ಟ. ಪ್ರತಿದಿನ ದೇವಸ್ಥಾನಕ್ಕೆ ಹೋಗಿಬರುವ ಸಂಸ್ಕಾರ ಪ್ರತಿ ಮನೆಗಳಲ್ಲಿ ರೂಢಿಯಾಗಬೇಕು ಎಂದರು.
ದೇಗುಲಗಳ ಸ್ವಚ್ಛತೆ, ಪಾವಿತ್ರ್ಯತೆ ಕಾಪಾಡುವುದು ಎಲ್ಲರ ಕರ್ತವ್ಯವಾಗಬೇಕು. ಅವುಗಳು ಉಳಿದರೆ ವಾತ್ರ ಧರ್ಮ, ದೇಶ ಉಳಿಯಲು ಸಾಧ್ಯ. ದೇವರು ಕಾಣದ ಶಕ್ತಿ, ಅದಕ್ಕೆ ನಾನಾ ಹೆಸರುಗಳಿಂದ ಕರೆಯಲಾಗುತ್ತದೆ. ದೇವರನ್ನು ಒಲಿಸಿಕೊಳ್ಳಲು ದೊಡ್ಡ ಕಾಣಿಕೆ ಬೇಡ ಭಕ್ತಿ ಸಾಕು ಎಂದು ಹೇಳಿದರು.
ಎಚ್. ಲಕ್ಷ್ಮಣ್‌ನಾಯ್ಕ, ಬಿ.ಎನ್. ಗಿರೀಶ್, ಬಿ. ಸುರೇಶ್ ನಾಯ್ಕ, ದೈಹಿಕ ಶಿಕ್ಷಣ ಶಿಕ್ಷಕ ಜಗದೀಶ್, ಟಿ.ವಿ. ಶಿವು, ಮಂಜು, ಹರೀಶ್, ಪ್ರೀತಮ್, ತರುಣ್, ಗಾರೆ ಉಮೇಶ್, ರಾಕೇಶ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net