ಶಿಕ್ಷಕರಿಗೆ ಬೇಕು ಕೃತಕ ಬುದ್ಧಿಮತ್ತೆ ಜ್ಞಾನ

ದಾವಣಗೆರೆಯ ಬಿಐಇಟಿ ಕಾಲೇಜಿನಲ್ಲಿ ಶುಕ್ರವಾರ, ಸ್ಮಾರ್ಟ್ ಎಲೆಕ್ಟ್ರಿಕಲ್ ಸಿಸ್ಟಮ್ಸ್, ಎಲೆಕ್ಟ್ರಾನಿಕ್ಸೃ್ ಮತ್ತು ಉದಯೋನ್ಮುಖ ಸುಸ್ಥಿರ ತಂತ್ರಜ್ಞಾನಗಳು ಕುರಿತು ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಡಾ. ರಾಮಚಂದ್ರ ವಿ. ಪುಜೇರಿ, ಪ್ರೊ. ವೈ. ವೃಷಭೇಂದ್ರಪ್ಪ, ಡಾ. ಎಚ್.ಬಿ. ಅರವಿಂದ್, ಡಾ.ಎಂ.ಎಸ್. ನಾಗರಾಜ ಇತರರು ಇದ್ದರು.
ದಾವಣಗೆರೆಯ ಬಿಐಇಟಿ ಕಾಲೇಜಿನಲ್ಲಿ ಶುಕ್ರವಾರ, ಸ್ಮಾರ್ಟ್ ಎಲೆಕ್ಟ್ರಿಕಲ್ ಸಿಸ್ಟಮ್ಸ್, ಎಲೆಕ್ಟ್ರಾನಿಕ್ಸೃ್ ಮತ್ತು ಉದಯೋನ್ಮುಖ ಸುಸ್ಥಿರ ತಂತ್ರಜ್ಞಾನಗಳು ಕುರಿತು ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಡಾ. ರಾಮಚಂದ್ರ ವಿ. ಪುಜೇರಿ, ಪ್ರೊ. ವೈ. ವೃಷಭೇಂದ್ರಪ್ಪ, ಡಾ. ಎಚ್.ಬಿ. ಅರವಿಂದ್, ಡಾ.ಎಂ.ಎಸ್. ನಾಗರಾಜ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಾ. ರಾಮಚಂದ್ರ ವಿ. ಪುಜೇರಿ ಹೇಳಿಕೆ
  • ಬಿಐಇಟಿಯಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನ
ದಾವಣಗೆರೆ : ಉದ್ಯೋಗ ಭದ್ರತೆಗೆ ಶಿಕ್ಷಕರು ಕೃತಕ ಬುದ್ಧಿಮತ್ತೆಯ (ಎ.ಐ.) ಬಗ್ಗೆ ತಿಳಿದುಕೊಂಡು ಜ್ಞಾನ ಸಂಪನ್ನರಾಗಬೇಕು ಎಂದು ಪುಣೆಯ ಎಂ.ಐ.ಟಿ ಎ.ಡಿ.ಟಿ. ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ರಾಮಚಂದ್ರ ವಿ. ಪುಜೇರಿ ಹೇಳಿದರು.
ನಗರದ ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದ ವಿದ್ಯುತ್ ಮತ್ತು ಎಲೆಕ್ಟ್ರಾನಿಕ್ಸೃ್ ಇಂಜಿನಿಯರಿಂಗ್ ವಿಭಾಗದಲ್ಲಿ ಶುಕ್ರವಾರ, ಸ್ಮಾರ್ಟ್ ಎಲೆಕ್ಟ್ರಿಕಲ್ ಸಿಸ್ಟಮ್ಸ್, ಎಲೆಕ್ಟ್ರಾನಿಕ್ಸೃ್ ಮತ್ತು ಉದಯೋನ್ಮುಖ ಸುಸ್ಥಿರ ತಂತ್ರಜ್ಞಾನಗಳು ಕುರಿತು ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬೌದ್ಧಿಕವಾಗಿ ಚುರುಕಾದ, ಮಾನಸಿಕವಾಗಿ ಜಾಗೃತ, ಆಧ್ಯಾತ್ಮಿಕವಾಗಿ ಉನ್ನತವಾದ ಮತ್ತು ದೈಹಿಕವಾಗಿ ಸದೃಢರಾದ ಮಕ್ಕಳೇ ಸಮಾಜದ ಅಮೂಲ್ಯ ಸಂಪತ್ತು ಎಂದರು. ಈಗಿನ ಕಾಲಘಟ್ಟದಲ್ಲಿ ಬಸವಣ್ಣ, ತಿರುವಳ್ಳವರ್, ಸಂತ ತುಕಾರಾಮರ ವಚನಗಳ ಪ್ರಸ್ತುತತೆಯನ್ನು ವಿವರಿಸಿದರು.
ಬಿ.ಐ.ಇ.ಟಿ ನಿರ್ದೇಶಕ ಪ್ರೊ. ವೈ. ವೃಷಭೇಂದ್ರಪ್ಪ ಮಾತನಾಡಿ, ಡೇಟಾ ಸೆಂಟರ್‌ಗಳು ಭಾರಿ ಪ್ರಮಾಣದಲ್ಲಿ ವಿದ್ಯುತ್ ಬಳಕೆ ಮಾಡುತ್ತಿದ್ದು ವಿದ್ಯುತ್ ಉತ್ಪಾದನೆಗೆ ಹೊಸ ಅವಿಷ್ಕಾರಗಳನ್ನು ಮಾಡುವಂತೆ ಸಲಹೆ ನೀಡಿದರು. ನೈಸರ್ಗಿಕ ಅನಿಲ ಮತ್ತು ಹೈಡ್ರೋಜನ್ ಮಿಶ್ರಣದಿಂದ ವಿದ್ಯುತ್ ಉತ್ಪಾದನೆ, ಚಂದ್ರನ ಮೇಲೆ ಸೌರ ಲಕಗಳನ್ನು ಅಳವಡಿಸಿ ವಿದ್ಯುತ್ ಉತ್ಪಾದಿಸುವುದು ಮುಂತಾದ ಆವಿಷ್ಕಾರಗಳ ಕುರಿತು ತಿಳಿಸಿದರು.
ವಿಭಾಗದ ಮುಖ್ಯಸ್ಥ ಡಾ.ಎಂ.ಎಸ್. ನಾಗರಾಜ ಮಾತನಾಡಿ, ಭಾರತ ಮತ್ತು ವಿದೇಶಗಳ ಸಂಶೋಧಕರಿಂದ ಸಮ್ಮೇಳನಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಟ್ಟು 480 ಸಂಶೋಧನಾ ಪ್ರಬಂಧಗಳು ಸಲ್ಲಿಕೆಯಾಗಿದ್ದು ಇವುಗಳಲ್ಲಿ 80 ಸಂಶೋಧನಾ ಪ್ರಬಂಧಗಳನ್ನು ಆಯ್ಕೆ ಮಾಡಲಾಗಿದೆ. ಈ ಸಮ್ಮೇಳನಕ್ಕೆ ನಾಸಿಕ್, ಮುಂಬೈನ ಎಂ.ಜಿ. ಅರಿಸೆಂಟ್ ಎಜುಕೇಷನಲ್ ೌಂಡೇಶನ್ ತಾಂತ್ರಿಕ ಪ್ರಾಯೋಜಕತ್ವ ನೀಡಿದೆ ಎಂದರು.
ಸ್ಮಾರ್ಟ್ ಎಲೆಕ್ಟ್ರಿಕಲ್ ಸಿಸ್ಟಮ್ಸ್, ವಿದ್ಯುತ್ ಮತ್ತು ಇಂಧನ ತಂತ್ರಜ್ಞಾನಗಳು, ಎಲೆಕ್ಟ್ರಾನಿಕ್ಸೃ್, ಕೃತಕ ಬುದ್ಧಿಮತ್ತೆ ಅನ್ವಯಗಳು, ಎಲೆಕ್ಟ್ರಿಕ್ ವಾಹನಗಳು, ಐ.ಒ.ಟಿ. ಆಟೋಮೇಷನ್ ಮತ್ತು ಉದಯೋನ್ಮುಖ ಎಂಜಿನಿಯರಿಂಗ್ ತಂತ್ರಜ್ಞಾನಗಳಲ್ಲಿನ ಇತ್ತೀಚಿನ ಪ್ರಗತಿಗಳನ್ನು ಪ್ರದರ್ಶಿಸುವುದು ಈ ಸಮ್ಮೇಳನದ ಉದ್ದೇಶವಾಗಿದೆ ಎಂದು ವಿವರಿಸಿದರು.
ಪ್ರಾಚಾರ್ಯ ಡಾ. ಎಚ್.ಬಿ. ಅರವಿಂದ್ ಮಾತನಾಡಿದರು. ಡಾ. ಮಂಜುನಾಥ ಎಚ್.ಎನ್ ಸ್ವಾಗತಿಸಿದರು. ಡಾ. ಕರಿಬಸವರಾಜು ವಂದಿಸಿದರು. 300 ಜನ ಸಂಶೋಧಕರು, ವಿದ್ಯಾರ್ಥಿಗಳು, ಉಪನ್ಯಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net