ಟೀಚರಮ್ಮ, ನಿಮ್ಮೂರಿಗೆ ಬರುತ್ತಿದ್ದಾನೆ ಮ್ಯಾಗ್ನೆಟ್ ಗುಮ್ಮ!

ಕೆಪಿಎಸ್ ಮ್ಯಾಗ್ನೆಟ್ ಯೋಜನೆಗೆ ಆಯ್ಕೆಯಾಗಿರುವ ದಾವಣಗೆರೆಯ ಸರ್ಕಾರಿ ಶಾಲೆ.
ಕೆಪಿಎಸ್ ಮ್ಯಾಗ್ನೆಟ್ ಯೋಜನೆಗೆ ಆಯ್ಕೆಯಾಗಿರುವ ದಾವಣಗೆರೆಯ ಸರ್ಕಾರಿ ಶಾಲೆ.
Published on

ಪ್ರಮುಖ ಮುಖ್ಯಾಂಶಗಳು

  • ದಾವಣಗೆರೆ ಜಿಲ್ಲೆಯಲ್ಲಿ 20 ಶಾಲೆಗಳು ಆಯ್ಕೆ
  • ವಿಲೀನಕ್ಕೆ 900 ಸರ್ಕಾರಿ ಅಕ್ಷರಾಲಯಗಳ ಪಟ್ಟಿ ಸಿದ್ಧ
  • ಉಚಿತ ಬಸ್ ಸೌಕರ್ಯದ ಹೊಣೆ ಎಸ್‌ಡಿಎಂಸಿಗೆ
ಗುರುತಿಸಲಾದ ಮ್ಯಾಗ್ನೆಟ್ ಶಾಲೆಗಳು
ದಾವಣಗೆರೆ: ಕಕ್ಕರಗೊಳ್ಳ ಹಿ.ಪ್ರಾ. ಶಾಲೆ, ಹದಡಿಯ ಮಾಧ್ಯಮಿಕ ಶಾಲೆ, ಲೋಕಿಕೆರೆ ಹಿಪ್ರಾ ಶಾಲೆ, ಎಸ್‌ಎಸ್‌ಎಂ ನಗರ ಉರ್ದು ಹಿ. ಪ್ರಾ. ಶಾಲೆ, ಅಣಬೇರು ಹಿ.ಪ್ರಾ.ಶಾಲೆ, ಆನಗೋಡು ಹಿಪ್ರಾ ಶಾಲೆ, ಎಸ್‌ಎಸ್‌ಎಂ ನಗರದ (ಕನ್ನಡ) ಹಿ.ಪ್ರಾ. ಶಾಲೆ, ಹಳೇಕುಂದುವಾಡದ ಹಿಪ್ರಾ ಹಾಗೂ ಪ್ರೌಢಶಾಲೆ, ಎಸ್‌ಎಂ ಬಡಾವಣೆಯ ಹಿಪ್ರಾ ಶಾಲೆ.
ಹರಿಹರ: ಗುತ್ತೂರಿನ ಹಿಪ್ರಾ ಶಾಲೆ, ಹಳ್ಳದಕೆರೆ ಧರಾಮ ಜೂ. ಕಾಲೇಜು,
ಹೊನ್ನಾಳಿ: ಸವಳಂಗ ಸರ್ಕಾರಿ ಪಪೂ ಕಾಲೇಜು, ಆಗರಬನ್ನಿಹಟ್ಟಿಯ ಹಿಪ್ರಾ ಶಾಲೆ, ಯರಚಿಕ್ಕನಹಳ್ಳಿ ಹಿಪ್ರಾ ಶಾಲೆ,
ಜಗಳೂರು: ಗುರುಸಿದ್ದಾಪುರದ ಹಿ.ಪ್ರಾ. ಶಾಲೆ, ಜಗಳೂರು ಸರ್ಕಾರಿ ಪಪೂ ಕಾಲೇಜು, ಪಲ್ಲಾಗಟ್ಟೆ ಹಿಪ್ರಾ ಶಾಲೆ,
ಚನ್ನಗಿರಿ: ನಲ್ಲೂರು ಸರ್ಕಾರಿ ಜೂನಿಯರ್ ಕಾಲೇಜು. ತಾವರಕೆರೆಯ ಜೂ. ಕಾಲೇಜು, ಹಿರೇಕೋಗಲೂರು ಎಸ್‌ಟಿಜೆ ಸರ್ಕಾರಿ ಜೂ. ಕಾಲೇಜು.

ಮ್ಯಾಗ್ನೆಟ್ ಶಾಲೆ ಯೋಜನೆ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ. ಸರ್ಕಾರದ ಆದೇಶದಂತೆ ನಾವು ಅನುಪಾಲನೆಗೆ ಕ್ರಮ ವಹಿಸಲಿದ್ದೇವೆ.

ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸುವ ಮ್ಯಾಗ್ನೆಟ್ ಯೋಜನೆಗೆ ನಮ್ಮ ವಿರೋಧವಿದೆ. ಕಿ.ಪ್ರಾ. ಶಾಲಾ ಮಕ್ಕಳನ್ನು ಬಸ್‌ಗಳಲ್ಲಿ ಕರೆದೊಯ್ಯುವುದೇ ಅವೈಜ್ಞಾನಿಕವಾಗಿದೆ. ಗುಣಮಟ್ಟದ ನೆಪದಲ್ಲಿ ಶಾಲೆಗಳನ್ನು ಮುಚ್ಚುವ ಪ್ರಯತ್ನ ನಡೆದಿದೆ. ಜಿಲ್ಲೆಯ 919 ಶಾಲೆಗಳನ್ನು ಪಟ್ಟಿ ಮಾಡಲಾಗಿದ್ದು, 140 ಶಾಲೆಗಳಿಗೆ ಮೊದಲ ಹಂತದ ಕುತ್ತು ಕಾದಿದೆ.

ಏನಿದು ಕೆಪಿಎಸ್ ಮ್ಯಾಗ್ನೆಟ್ ಯೋಜನೆ?
  • ಎಲ್‌ಕೆಜಿಯಿಂದ ಪಿಯುಸಿವರೆಗೆ ಗುಣಮಟ್ಟದ ಶಿಕ್ಷಣವನ್ನು ಒಂದೇ ಸೂರಿನಡಿ ನೀಡುವ ಗುರಿ.
  • ಸೌಲಭ್ಯ ಮತ್ತು ಬೋಧನೆಯ ವಿಷಯದಲ್ಲಿ ಸುಧಾರಣೆ, ಉನ್ನತ ಗುಣಮಟ್ಟದ ಶಿಕ್ಷಣ ದೊರೆಯುವ ಸಾಧ್ಯತೆ.
  • ಕಡಿಮೆ ವಿದ್ಯಾರ್ಥಿಗಳಿರುವ ಸಾವಿರಾರು ಸಣ್ಣ ಸರ್ಕಾರಿ ಶಾಲೆಗಳನ್ನು ಸಮೀಪದ ಕೆಪಿಎಸ್ ಶಾಲೆಗಳೊಂದಿಗೆ ವಿಲೀನಗೊಳಿಸುವ ಅಪಾಯವಿದೆ.
  • ದಾವಣಗೆರೆ ಜಿಲ್ಲೆಯೊಂದರಲ್ಲೇ 900 ಶಾಲೆಗಳನ್ನು ಮುಚ್ಚಲು ಪಟ್ಟಿ ಸಿದ್ಧಪಡಿಸಲಾಗಿದೆ ಎಂಬ ಆತಂಕವನ್ನು ಸಂಘಟನೆಗಳು ವ್ಯಕ್ತಪಡಿಸಿವೆ.
  • ಸಣ್ಣ ಶಾಲೆಗಳು ಮುಚ್ಚಿದರೆ, ಗ್ರಾಮೀಣ ಮತ್ತು ಬಡ ಮಕ್ಕಳು ಗುಣಮಟ್ಟದ ಶಿಕ್ಷಣಕ್ಕಾಗಿ ದೂರದ ಸ್ಥಳಗಳಿಗೆ ಪ್ರಯಾಣಿಸಬೇಕಾಗಬಹುದು, ಇದು ಅವರ ಶಿಕ್ಷಣದ ಹಕ್ಕನ್ನು ಕಸಿದಂತಾಗಲಿದೆ ಎಂಬ ಟೀಕೆ ಇದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net