ಜಗಳೂರಲ್ಲಿ ಉದ್ಘಾಟನೆಗೆ ಮುನ್ನವೇ ಸೋರುತ್ತಿದೆ ಟ್ಯಾಂಕ್!

ಕೋಟ್ಯಂತರ ರೂ. ಅನುದಾನ ನೀರುಪಾಲು
TANK
ಸೋರುತ್ತಿರುವ ಓವರ್‌ಹೆಡ್ ಟ್ಯಾಂಕ್.TANK
Published on: 

ಜಗಳೂರು: ತಾಲೂಕಿನ ಬೆಣ್ಣೆಹಳ್ಳಿ ಗ್ರಾಮದಲ್ಲಿ ಜೆಜೆಎಂ ಯೋಜನೆಯಡಿ ನಿರ್ಮಿಸಿರುವ ಓವರ್‌ಹೆಡ್ ಇನ್ನೂ ಉದ್ಘಾಟನೆಯಾಗಿಲ್ಲ. ಆಗಲೇ ಟ್ಯಾಂಕ್‌ನಿಂದ ನೀರು ಸೋರಿಕೆಯಾತ್ತಿದೆ.

ಬೆಣ್ಣೆಹಳ್ಳಿ ಗ್ರಾಮ ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಎರಡು ವರ್ಷಗಳ ಹಿಂದೆ ಜಲಜೀವನ್ ಮಿಷನ್ ಯೋಜನೆಯಡಿ ಗ್ರಾಮದ ಮನೆ-ಮನೆಗೂ ಕುಡಿಯುವ ನೀರು ಪೂರೈಕೆ ಮಾಡಲು ಹಳೆ ಓವರ್ ಹೆಡ್ ಟ್ಯಾಂಕ್ ಪಕ್ಕದಲ್ಲಿ ಮತ್ತೊಂದು ಓವರ್ ಹೆಡ್ ಟ್ಯಾಂಕ್ ನಿರ್ಮಿಸಲಾಗಿದೆ. ಟ್ಯಾಂಕ್ ನಿರ್ಮಿಸಿ ಎರಡು ವರ್ಷ ಕಳೆದರೂ ಇನ್ನೂ ಬಳಕೆಯಾಗುತ್ತಿಲ್ಲ. ಟ್ಯಾಂಕ್ ಮಾತ್ರ ಉದ್ಘಾಟನೆಯಾಗುವ ಮುನ್ನವೇ ಸೋರಿಕೆಯಾಗುತ್ತಿದೆ.

ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು ರೂಪಿಸಿರುವ ಜೆಜೆಎಂ ಯೋಜನೆಯ ಉದ್ದೇಶ ಹುಸಿಯಾಗಿದೆ. ಟ್ಯಾಂಕ್‌ನಲ್ಲಿ ನೀರು ತುಂಬಿದಾಕ್ಷಣ ಹನಿಹನಿಯಾಗಿ ನೀರು ತೊಟ್ಟಿಕ್ಕಲಿದ್ದು, ಈ ಸೋರಿಕೆಯಾದ ನೀರೇ ಒಂದು ತೊಟ್ಟಿಯಂತೆ ಗೋಚರವಾಗುತ್ತಿದೆ. 20ರಿಂದ 30 ವರ್ಷಗಳ ಹಿಂದೆ ನಿರ್ಮಿಸಿದ ಓವರ್ ಹೆಡ್ ಟ್ಯಾಂಕ್‌ನಲ್ಲಿ ಒಂದು ಹನಿ ನೀರು ಸೋರಿಕೆಯಾಗಲ್ಲ. ಆದರೆ ಜೆಜೆಎಂ ಗುತ್ತಿಗೆದಾರನ ನಿರ್ಲಕ್ಷೃ ಮತ್ತು ಕಳಪೆ ಕಾಮಗಾರಿಯಿಂದ ಲೋಕಾರ್ಪಣೆಗೊಳ್ಳುವ ಮುನ್ನವೇ ಸೋರಿಕೆಯಾಗುತ್ತಿದೆ.

ಮನೆ ಮನೆಗೂ ನೀರು ಕೊಡುವ ಜಲಜೀವನ್ ಮಿಷನ್ ಯೋಜನೆ ಉದ್ದೇಶ ಚೆನ್ನಾಗಿದೆ. ಆದರೆ ಅದನ್ನು ಗುತ್ತಿಗೆ ಪಡೆದ ಗುತ್ತಿಗೆದಾರ ಸಂಬಂಧಿಸಿದ ಅಧಿಕಾರಿ, ಇಂಜಿನಿಯರ್‌ಗಳ ಬೇಜವಾಬ್ದಾರಿ, ನಿರ್ಲಕ್ಷೃಕ್ಕೆ ಕೋಟ್ಯಂತರ ರೂ. ಅನುದಾನ ಸರಿಯಾಗಿ ಬಳಕೆಯಾಗದೆ ಬೇಕಾಬಿಟ್ಟಿ ಓವರ್‌ಹೆಡ್ ಟ್ಯಾಂಕ್ ನಿರ್ಮಾಣ ಮಾಡಲಾಗಿದೆ.
ಬೆಣ್ಣೆಹಳ್ಳಿ ಗ್ರಾಮಸ್ಥರು.