ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ 25ಕ್ಕೆ

ಚನ್ನಗಿರಿಯಲ್ಲಿ ಮಾದಿಗ ಸಮಾಜದಲ್ಲಿ ಗುರುವಾರ ಸುದ್ದಿಗೋಷ್ಠಿ ಹಮ್ಮಿಕೊಳ್ಳಲಾಗಿತ್ತು. ಎಚ್.ಪ್ರಕಾಶ್, ಸಿ.ಎಚ್.ದೀಪಕ್‌ಕುಮಾರ್, ಬಿ.ಮಂಜುನಾಥ್, ಡಿ.ಎಸ್.ರಮೇಶ್, ಶೇಖರಪ್ಪ ನಲ್ಲೂರು, ಪಿ.ರುದ್ರಪ್ಪ, ಸಿ.ಕೆ.ಮಹೇಶ್ ಇತರರಿದ್ದರು.
ಚನ್ನಗಿರಿಯಲ್ಲಿ ಮಾದಿಗ ಸಮಾಜದಲ್ಲಿ ಗುರುವಾರ ಸುದ್ದಿಗೋಷ್ಠಿ ಹಮ್ಮಿಕೊಳ್ಳಲಾಗಿತ್ತು. ಎಚ್.ಪ್ರಕಾಶ್, ಸಿ.ಎಚ್.ದೀಪಕ್‌ಕುಮಾರ್, ಬಿ.ಮಂಜುನಾಥ್, ಡಿ.ಎಸ್.ರಮೇಶ್, ಶೇಖರಪ್ಪ ನಲ್ಲೂರು, ಪಿ.ರುದ್ರಪ್ಪ, ಸಿ.ಕೆ.ಮಹೇಶ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ
  • ತಾಲೂಕು ಮಾದಿಗ ಸಮಾಜ
  • ಎಚ್.ಪ್ರಕಾಶ್ ಹೇಳಿಕೆ
ಚನ್ನಗಿರಿ: ದಾವಣಗೆರೆಯ ಶಿವಯೋಗಿ ಮಂದಿರದಲ್ಲಿ ಜಿಲ್ಲಾ ಮಾದಿಗ ಮಹಾಸಭಾದಿಂದ ಮೇ. 25ರ ಬೆಳಗ್ಗೆ 11 ಗಂಟೆಗೆ 2025-26ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕವನ್ನು ಪಡೆದ ಸಮಾಜದ ವಿದ್ಯಾರ್ಥಿಗಳಿಗೆ ಸನ್ಮಾನ ಏರ್ಪಡಿಸಲಾಗಿದೆ ಎಂದು ತಾಲೂಕು ಮಾದಿಗ ಸಮಾಜದ ಅಧ್ಯಕ್ಷ ಎಚ್.ಪ್ರಕಾಶ್ ಹೇಳಿದರು.
ಇಲ್ಲಿನ ಪತ್ರಿಕಾ ಕಾರ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ 20 ವರ್ಷಗಳಿಂದ ಮಾದಿಗ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುವ ಜತೆಯಲ್ಲಿ ಗೌರವಿಸುವಂತ ಕೆಲಸ ಮಾಡಲಾಗುತ್ತಿದೆ. ತಾಲೂಕಿನಲ್ಲಿ ಹೆಚ್ಚು ಅಂಕ ಪಡೆದ ಮಾದಿಗ ಸಮಾಜದ ವಿದ್ಯಾರ್ಥಿಗಳು ಭಾಗವಹಿಸಬೇಕು ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯದಂತೆ ಗ್ರಾಮ ಹಾಗೂ ಪಟ್ಟಣಗಳಲ್ಲಿ ದೇವಸ್ಥಾನದ ಗಂಟೆ ಬದಲಿಗೆ ಶಾಲೆಗಳ ಗಂಟೆ ಬಾರಿಸಬೇಕು ಎನ್ನುವಂತೆ ಮಾದಿಗ ಸಮಾಜದವರು ಕೂಲಿ ಕೆಲಸ ಮಾಡಿಕೊಂಡು ತಮ್ಮ ಮಕ್ಕಳಿಗೆ ಶಿಕ್ಷಣವನ್ನು ನೀಡುತ್ತಿದ್ದಾರೆ ಎಂದು ತಿಳಿಸಿದರು.
ಸರ್ಕಾರ ಶಿಕ್ಷಣಕ್ಕಾಗಿ ಎಲ್ಲ ರೀತಿಯ ಅನುಕೂಲತೆಯನ್ನು ನೀಡುತ್ತಿದೆ ಅದರ ಸದ್ಬಳಕೆಯನ್ನು ಮಾಡಿಕೊಂಡು ಉನ್ನತ ಶಿಕ್ಷಣ ಪಡೆಯುವ ಕಡೆಗೆ ಗಮನ ಹರಿಸಬೇಕು. ಓದುವ ಸಮಯದಲ್ಲಿ ಮನಸ್ಸನ್ನು ಬೇರೆಡೆಗೆ ತಿರುಗಿಸದೆ ಮೊಬೈಲ್, ಟಿವಿಗಳನ್ನು ಮರೆತು ಜೀವನವನ್ನು ರೂಪಿಸಿಕೊಳ್ಳುವ ಕಡೆಗೆ ಚಿಂತನೆ ಮಾಡಬೇಕಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾದಿಗ ಸಮಾಜದ ಪ್ರಧಾನ ಕಾರ್ಯದರ್ಶಿ ಸಿ.ಎಚ್.ದೀಪಕ್ ಕುಮಾರ್, ಗೌರವಾಧ್ಯಕ್ಷ ಬಿ.ಮಂಜುನಾಥ್, ಡಿ.ಎಸ್.ರಮೇಶ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net