ಜೂ.28ಕ್ಕೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಹೊನ್ನಾಳಿ ಪಟ್ಟಣದಲ್ಲಿ ಶುಕ್ರವಾರ ಪ್ರತಿಭಾ ಪ್ರೇರಣೋತ್ಸವದ ಆಹ್ವಾನ ಪತ್ರಿಕೆಯನ್ನು ಬಿಡುಗಡೆಗೊಳಿಸ ಲಾಯಿತು. ಜಿ.ಬಿ. ವಿನಯಕುಮಾರ್, ರಾಜು ಕಣಗಣ್ಣಾರ್, ಪಂಕಜ, ಅರುಣ್‌ಕುಮಾರ್ ಇದ್ದರು.Talent Award
ಹೊನ್ನಾಳಿ ಪಟ್ಟಣದಲ್ಲಿ ಶುಕ್ರವಾರ ಪ್ರತಿಭಾ ಪ್ರೇರಣೋತ್ಸವದ ಆಹ್ವಾನ ಪತ್ರಿಕೆಯನ್ನು ಬಿಡುಗಡೆಗೊಳಿಸ ಲಾಯಿತು. ಜಿ.ಬಿ. ವಿನಯಕುಮಾರ್, ರಾಜು ಕಣಗಣ್ಣಾರ್, ಪಂಕಜ, ಅರುಣ್‌ಕುಮಾರ್ ಇದ್ದರು.Talent Award
Published on

ಪ್ರಮುಖ ಮುಖ್ಯಾಂಶಗಳು

  • ಜಿ.ಬಿ. ವಿನಯಕುಮಾರ್ ಮಾಹಿತಿ
  • ಆಹ್ವಾನ ಪತ್ರಿಕೆ ಬಿಡುಗಡೆ
ಹೊನ್ನಾಳಿ: ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆ ಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ ಗಳಿಗೆ ಜೂ.28ರಂದು ಹಿರೇಕಲ್ಮಠ ಸಮುದಾಯ ಭವನದಲ್ಲಿ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ ಎಂದು ಸ್ವಾಭಿಮಾನಿ ಬಳಗ ಹಾಗೂ ಇನ್‌ಸೈಟ್ ಐಎಎಸ್ ಸಂಸ್ಥೆಯ ಸಂಸ್ಥಾಪಕ ಜಿ.ಬಿ. ವಿನಯಕುಮಾರ್ ಹೇಳಿದರು. Talent Award
ಶುಕ್ರವಾರ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿ, ಕಳೆದ ವರ್ಷ ಸುಮಾರು 400 ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಗಿತ್ತು. ಈ ಬಾರಿ ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕಿನಿಂದ 600 ಕ್ಕೂ ಹೆಚ್ಚು ಜನರ ನಿರೀಕ್ಷೆ ಇದೆ. ಪ್ರತಿಯೊಬ್ಬರಿಗೆ ತಲಾ 1,000 ರೂ. ನಗದು ಹಾಗೂ ನೆನಪಿನ ಕಾಣಿಕೆ (ಮೊಮೆಂಟೋ) ನೀಡಿ ಗೌರವಿಸಲಾಗುವುದು ಎಂದರು.
ಎಸ್‌ಎಸ್‌ಎಲ್‌ಸಿ, ಪಿಯುಸಿ ನಂತರ ಮುಂದೇನು?: ಗ್ರಾಮೀಣ ಭಾಗದ ಪ್ರತಿಭಾವಂತ ಮಕ್ಕಳಿಗೆ ಪರೀಕ್ಷೆಯ ನಂತರ ಸೂಕ್ತ ಮಾಹಿತಿ ಹಾಗೂ ವೃತ್ತಿ ಮಾರ್ಗದರ್ಶನ ಸಿಗುತ್ತಿಲ್ಲ. ಬಹುತೇಕರು ಕೇವಲ ಸಿಇಟಿ ಹಾಗೂ ನೀಟ್ ಪರೀಕ್ಷೆಗಳಿಗಷ್ಟೇ ಸೀಮಿತವಾಗುತ್ತಿದ್ದಾರೆ. ಆದರೆ, ದೇಶದ ಪ್ರತಿಷ್ಠಿತ ಸಂಸ್ಥೆಗಳಾದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್, ಇಸ್ರೋದ ಕೇರಳದಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೇಸ್ ಟೆಕ್ನಾಲಜಿ ಮುಂತಾದ ಕಡೆ ಪ್ರವೇಶ ಪಡೆದು ಗಗನಯಾನಿ ಅಥವಾ ಬಾಹ್ಯಾಕಾಶ ವಿಜ್ಞಾನಿಯಾಗುವ ಅವಕಾಶಗಳೂ ಇವೆ. ಇಂತಹ ಸಂಸ್ಥೆಗಳ ಪ್ರವೇಶ ಪರೀಕ್ಷೆ ಎದುರಿಸುವುದು ಹೇಗೆ ಎಂಬ ಬಗ್ಗೆ ನಾವು ಉಚಿತವಾಗಿ ಮಾಹಿತಿ ನೀಡಲಿದ್ದೇವೆ ಎಂದು ತಿಳಿಸಿದರು.
ಫ್ಯಾಷನ್ ಟೆಕ್ನಾಲಜಿ ಎಂಬುದು ಬಹಳ ಬೇಡಿಕೆಯ ಕ್ಷೇತ್ರ. ಇಲ್ಲಿ ಕೋರ್ಸ್ ಮಾಡಿದರೆ ಜಾಬ್ ಗ್ಯಾರಂಟಿ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆ್ ಸೈನ್ಸ್ ಎಜುಕೇಶನ್ ಅಂಡ್ ರಿಸರ್ಚ್ ಇಂತಹ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ಬೇಕಾಗುವ ಮಾಹಿತಿಯನ್ನು ನಾವು ಕೊಡುತ್ತಿದ್ದೇವೆ. ಕೆಲ ಮಕ್ಕಳಿಗೆ ನಮ್ಮ ಸಂಸ್ಥೆಯಲ್ಲಿ ಅವಕಾಶವನ್ನೂ ನೀಡಿದ್ದೇವೆ ಎಂದು ತಿಳಿಸಿದರು.
ಅತಿ ಹೆಚ್ಚು ಅಂಕ ಪಡೆದರೂ ದೊಡ್ಡ ಕೋರ್ಸ್‌ಗಳಿಗೆ ಸೇರಿಸಲು ಹಣದ ತೊಂದರೆಯಾಗಬಹುದು ಎಂದು ಪಾಲಕರು, ಮಕ್ಕಳನ್ನು ತಮಗೆ ತಿಳಿದ ಸಾಮಾನ್ಯ ಕೋರ್ಸ್‌ಗಳಿಗೆ ಸೇರಿಸುತ್ತಾರೆ. ಆದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಉನ್ನತ ಶಿಕ್ಷಣಕ್ಕಾಗಿ ನೀಡುವ ವಿದ್ಯಾರ್ಥಿವೇತನಗಳ ನೀಡುವ ಬಗ್ಗೆ ಅರಿಯಬೇಕು ಎಂದರು.
ಶೇ.85ಕ್ಕಿಂತ ಹೆಚ್ಚು ಅಂಕ ಪಡೆದ ಅವಳಿ ತಾಲೂಕಿನ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಯ ವಿವರಗಳನ್ನು ಸ್ವಾಭಿಮಾನಿ ಬಳಗದ ತಾಲೂಕು ಸಂಚಾಲಕ ರಾಜು ಕಣಗಣ್ಣಾರ್, ಪಂಕಜ ಅರುಣಕುಮಾರ್, ಮಂಜು, ಹರೀಶ್ ನ್ಯಾಮತಿ, ಶರತ್ ಹಾಗೂ ವಸಂತಕುಮಾರ್ ಅವರಿಗೆ ಕಳುಹಿಸಬೇಕೆಂದು ಮನವಿ ಮಾಡಿದರು. ಸ್ವಾಭಿಮಾನಿ ಬಳಗದ ತಾಲೂಕು ಸಂಚಾಲಕ ರಾಜು ಕಣಗಣ್ಣಾರ್, ಪಂಕಜ ಅರುಣ್‌ಕುಮಾರ್, ದೇವರಾಜ್, ಹಳದಪ್ಪ, ಸುದೀಪ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net