ಚನ್ನಗಿರಿ ಸರ್ಕಾರಿ ಹಿರಿಯ ಪ್ರಾಥಮಿಕ ಆಂಗ್ಲ ಮತ್ತು ಕನ್ನಡ ವಾಧ್ಯಮ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಹಾಗೂ ಪಾಲಕರ ಸಭೆಯನ್ನು ಕ್ಷೇತ್ರ ಸಮನ್ವಯಾಧಿಕಾರಿ ಡಾ.ಎಸ್. ಶಂಕರಪ್ಪ ಉದ್ಘಾಟಿಸಿದರು. ಮುಖ್ಯಶಿಕ್ಷಕ ರಾಜಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಸ್ವಾಮಿ, ಸಂಪನ್ಮೂಲ ಶಿಕ್ಷಕ ನಾಗರಾಜ್, ಶಿಕ್ಷಕಿ ಆಶಾ, ಪುಷ್ಪಾ, ದೇವೇಂದ್ರಪ್ಪ, ಮಂಜಪ್ಪ, ಸವಿತಾ ಇತರರು ಇದ್ದರು. grant
ಚನ್ನಗಿರಿ: ಸರ್ಕಾರ ವಿದ್ಯಾರ್ಥಿಗಳಿಗಾಗಿ ಕೋಟ್ಯಂತರ ರೂ. ಅನುದಾನ ನೀಡಿ ಮೂಲ ಸೌಕರ್ಯ ಒದಗಿಸುತ್ತಿದೆ. ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಅದರ ಪ್ರಯೋಜನ ಪಡೆಯಬೇಕು ಎಂದು ಕ್ಷೇತ್ರ ಸವಾನ್ವಯಾಧಿಕಾರಿ ಡಾ.ಎಸ್. ಶಂಕರಪ್ಪ ಹೇಳಿದರು. grant
ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಆಂಗ್ಲ ಮತ್ತು ಕನ್ನಡ ವಾಧ್ಯಮ ಶಾಲೆಯಲ್ಲಿ ಸೋಮವಾರ ಶಾಲಾ ಪ್ರಾರಂಭೋತ್ಸವ ಹಾಗೂ ಪಾಲಕರ ಸಭೆ ಉದ್ಘಾಟಿಸಿ ವಾತನಾಡಿದರು.
ಮಕ್ಕಳು ಕಲಿಕೆಗೆ ಆಸಕ್ತಿ ತೋರಿಸಬೇಕು. ಶ್ರದ್ಧೆಯಿಂದ ಕಲಿತ ವಿದ್ಯೆ ನಿಮ್ಮ ಜೀವನದಲ್ಲಿ ತಲೆ ಎತ್ತಿ ಬದುಕುವಂತೆ ವಾಡಲಿದೆ. ಆದ್ದರಿಂದ ಉತ್ತಮ ಶಿಕ್ಷಣ ಪಡೆದು ಸವಾಜದ ಮುಖ್ಯವಾಹಿನಿಗೆ ಬನ್ನಿ. ಉದ್ಯೋಗಕ್ಕಾಗಿ ಅಲ್ಲ, ಜೀವನ ರೂಪಿಸಿಕೊಳ್ಳಲು ವಿದ್ಯಾಭ್ಯಾಸ ಮಾಡಿ ಎಂದರು.
ಮಕ್ಕಳಿಗೆ ಶಿಕ್ಷಣದಲ್ಲಿ ಆಸಕ್ತಿ ಹೆಚ್ಚಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕಿದೆ. ಜತೆಗೆ ಮಕ್ಕಳೊಂದಿಗೆ ಉತ್ತಮ ಬಾಂಧವ್ಯ ಹೊಂದಬೇಕು. ಗುಂಪು ಚಟುವಟಿಕೆ, ವಿಶೇಷ ತರಗತಿ, ಪಾಲಕರ ಸಭೆ ಇನ್ನಿತರ ಕ್ರಮ ಕೈಗೊಳ್ಳಬೇಕು. ಪಾಲಕರು ಸಹ ಮಕ್ಕಳ ಶೈಕ್ಷಣಿಕ ಪ್ರಗತಿಯ ಬಗ್ಗೆ ಶಿಕ್ಷಕರಿಂದ ಮಾಹಿತಿ ಪಡೆಯಬೇಕು ಎಂದು ತಿಳಿಸಿದರು.
ಶೈಕ್ಷಣಿಕ ವರ್ಷದ ಮೊದಲ ದಿನವಾದ್ದರಿಂದ ಬಿಸಿಯೂಟದ ಜತೆ ಹಾಲು, ಪಾಯಸ ಬಡಿಸಲಾಯಿತು. ವಿದ್ಯಾರ್ಥಿಗಳಿಗೆ ಸಮವಸ, ಪಠ್ಯಪುಸ್ತಕ ವಿತರಿಸಲಾಯಿತು.
ಮುಖ್ಯಶಿಕ್ಷಕ ರಾಜಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಸ್ವಾಮಿ, ಸಂಪನ್ಮೂಲ ಶಿಕ್ಷಕ ನಾಗರಾಜ್, ಶಿಕ್ಷಕಿ ಆಶಾ, ಪುಷ್ಪಾ, ದೇವೇಂದ್ರಪ್ಪ, ಮಂಜಪ್ಪ, ಸವಿತಾ ಇತರರು ಇದ್ದರು.