ಜಗಳೂರು ತಾಲೂಕು ಕಚೇರಿ ಎದುರು ಸೋಮವಾರ ಅಡಿಕೆ ಬೆಳೆ ವಿಮೆ ಪಾವತಿಗೆ ಸರ್ವೆ ನಂಬರ್ ಸಮಸ್ಯೆ ಉಂಟಾಗಿದೆ ಎಂದು ಆರೋಪಿಸಿ ಬಿಳಿಚೋಡು ಗ್ರಾಮದ ರೈತರು ಪ್ರತಿಭಟನೆ ನಡೆಸಿದರು. ಹನುಮಂತಪ್ಪ, ನಾಗರಾಜ್, ಶಿವಾನಂದಪ್ಪ, ಹನುಮಂತಪ್ಪ, ಕರಿಬಸಪ್ಪ, ಕೆಂಚನಗೌಡ, ಕುಮಾರಸ್ವಾಮಿ ಇತರರಿದ್ದರು. protest
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಜಗಳೂರು ತಾಲೂಕು ಕಚೇರಿ ಎದುರು ಬೆಳೆಗಾರರ ಪ್ರತಿಭಟನೆ
ಜಗಳೂರು: ಅಡಿಕೆ ಬೆಳೆ ವಿಮೆ ಪಾವತಿಗೆ ಜಮೀನುಗಳ ಸರ್ವೇ ನಂಬರ್ ಬದಲಾಗಿದ್ದು ಪಹಣಿ ಹಾಗೂ ಆಧಾರ್ ಲಿಂಕ್ ಹೊಂದಾಣಿಕೆಯಾಗದೇ ಉಂಟಾಗಿರುವ ತಾಂತ್ರಿಕ ದೋಷ ಸರಿಪಡಿಸುವಂತೆ ಒತ್ತಾಯಿಸಿ ಸೋಮವಾರ ಬಿಳಿಚೋಡು ಸೇರಿ ವಿವಿಧ ಗ್ರಾಮಗಳ ರೈತರು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು. protest
ಬೆಂಚಿಕಟ್ಟೆ ಕಂದಾಯ ಗ್ರಾಮವಾದ ನಂತರ ಬಿಳಿಚೋಡು ವ್ಯಾಪ್ತಿಯ ಹಲವು ಜಮೀನುಗಳ ಸರ್ವೇ ನಂಬರ್ ಬದಲಾಗಿವೆ. ಜೂ.30ಕ್ಕೆ ಅಡಿಕೆ ಬೆಳೆಗೆ ವಿಮೆ ಪಾವತಿಗೆ ಕೊನೆ ದಿನವಾಗಿದೆ. ಹಣ ಪಾವತಿಸಲು ಹೋದರೆ ಪಹಣಿ ಹಾಗೂ ಆಧಾರ್ ಹೊಂದಾಣಿಕೆಯಾಗುತ್ತಿಲ್ಲ. ಜಿಪಿಎಸ್ ತೆಗೆದುಕೊಳ್ಳುತ್ತಿಲ್ಲ ಎಂದು ರೈತರು ದೂರಿದರು.
ಕಿಸಾನ್ ಸಂಘದ ಜಿಲ್ಲಾ ಉಪಾಧ್ಯಕ್ಷ ಹನುಮಂತಪ್ಪ ಮಾತನಾಡಿ, ಹಳೆ ಸರ್ವೇ ನಂಬರ್ ಹಾಕಿದಲ್ಲಿ ಬೇರೆಯವರ ಹೆಸರು ಬರುತ್ತದೆ. ಪಹಣಿಯಲ್ಲಿರುವ ಜಮೀನಿನ ವಿಸ್ತೀರ್ಣ ಮತ್ತು ಆಧಾರ್ ಕಾರ್ಡ್ ವಿವರದಲ್ಲಿ ವ್ಯತ್ಯಾಸವಿದೆ. ತಹಸೀಲ್ದಾರನ್ನು ಕೇಳಿದರೆ ತೋಟಗಾರಿಕೆ ಇಲಾಖೆಗೆ ಹೋಗಿ ಎನ್ನುತ್ತಾರೆ. ಅಲ್ಲಿಗೆ ಹೋದರೆ ಕಂದಾಯ ಇಲಾಖೆಗೆ ಹೋಗಿ ಎನ್ನುತ್ತಾರೆ. ದಿನವಿಡೀ ಕಚೇರಿಯಿಂದ ಕಚೇರಿಗೆ ಅಲೆದಾಡಿಸುತ್ತಿದ್ದಾರೆ ಎಂದು ಆರೋಪಿಸಿದರು.
ಅಡಿಕೆ ಬೆಳೆ ವಿಮೆ ಮಾಡಿಸಲು ಒಂದು ವಾರ ಬಾಕಿ ಇದೆ. ಬೆಳೆ ವಿಮೆಗೆ ಯಾವುದೇ ತೊಂದರೆಯಾದರೂ ಅದಕ್ಕೆ ಅಧಿಕಾರಿಗಳೇ ನೇರ ಹೊಣೆ. ರೈತರಿಗೆ ಅನ್ಯಾಯವಾದರೆ ತಾಲೂಕು ಕಚೇರಿ ಎದುರು ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು. ಬಿಳಿಚೋಡು ಗ್ರಾಮದ ರೈತರಾದ ನಾಗರಾಜ್, ಶಿವಾನಂದಪ್ಪ, ಹನುಮಂತಪ್ಪ, ಕರಿಬಸಪ್ಪ, ಕೆಂಚನಗೌಡ, ಕುಮಾರಸ್ವಾಮಿ ಇತರರಿದ್ದರು.