ಕೃಷಿಯಲ್ಲಿ ಏಕ ಬೆಳೆ ಪದ್ಧತಿ ಬಿಟ್ಟು ಬಹು ಬೆಳೆ ಪದ್ಧತಿ ಅನುಸರಿಸಿದರೆ ಭೂಮಿ ಫಲವತ್ತತೆ ಹೆಚ್ಚುವುದರೊಂದಿಗೆ ಕಡಿಮೆ ಖರ್ಚಿನಲ್ಲಿ ಅಧಿಕ ಆದಾಯ ಗಳಿಸಬಹುದು ಎಂದು ಸಲಹೆ ನೀಡಿದರು. ಮೆಕ್ಕೆಜೋಳ ಕಟಾವು ಆದ ಜಮೀನಿನಲ್ಲಿ ರಾಗಿ, ಅಲಸಂದೆ ಬಿತ್ತಲು ಕಾಲಾವಕಾಶವಿದೆ. ತಾಲೂಕಿನ ಮಾಯಕೊಂಡ, ಆನಗೋಡು ರೈತ ಸಂಪರ್ಕ ಕೇಂದ್ರಗಳಲ್ಲಿ ರಾಗಿ ಮತ್ತು ಅಲಸಂದೆ ಬಿತ್ತನೆ ಬೀಜಗಳು ದಾಸ್ತಾನಿದ್ದು ಖರೀದಿಸಿ ಬಿತ್ತನೆ ಮಾಡಬಹುದು ಎಂದು ತಿಳಿಸಿದರು.