ಚನ್ನಗಿರಿ ಎಂಇಎಸ್ ಪಬ್ಲಿಕ್ ಶಾಲೆಯ ಸಮೀರಾ ತಾಜ್, ಶ್ಯಾಗಲೆಯ ಕುವೆಂಪು ಪ್ರೌಢಶಾಲೆಯ ಸಿ. ಅಭಿಷೇಕ್, ಜಗಳೂರಿನ ಜೆಎಂ ಇಮಾಂ ಸ್ಮಾರಕ ಶಾಲೆಯ ಎ.ಆರ್.ಶ್ರಾವಂತಿ ತಲಾ 618 ಅಂಕ ಗಳಿಸಿದ್ದಾರೆ. ದಾವಣಗೆರೆಯ ಜೈನ್ ವಿದ್ಯಾಲಯದ ಎಂ.ಎಸ್.ಸುಜನ್, ಸೇಂಟ್‌ಪಾಲ್ಸ್ ಬಾಲಕಿಯರ ಶಾಲೆಯ ಎಸ್.ಪೂರ್ವಿಕಾ, ಮಾದನಬಾವಿಯ ಮೊರಾರ್ಜಿ ದೇಸಾಯಿ ಶಾಲೆಯ ಬಿ.ಟಿ. ಸಾಗರ್, ಸಿಂಗಟಗೆರೆಯ ಕಿತ್ತೂರು ರಾಣಿ ಚನ್ನಮ್ಮ ಶಾಲೆಯ ಪುಣ್ಯಶ್ರೀ ಚಂದ್ರು ಪರಂಗಿ, ನ್ಯಾಮತಿಯ ಕರ್ನಾಟಕ ಪಬ್ಲಿಕ್ ಶಾಲೆಯ ಸಿ.ಎಚ್.ಮಂಜುನಾಥ್, ಎಸ್.ಎನ್. ಚಿರಂಜೀವಿ, ಮೆದಗಿನಕೆರೆ ಮೊರಾರ್ಜಿ ಶಾಲೆಯ ಜಿ.ಎಚ್. ಯಶ್ವಂತ್‌ಕುಮಾರ್, ಎನ್‌ಎಂಕೆ ಇಂಗ್ಲಿಷ್ ಮಾಧ್ಯಮ ಶಾಲೆಯ ತಿತೀಕ್ಷಾ ತಕ್ ತಲಾ 617 ಅಂಕ ಪಡೆದು ಗಮನ ಸೆಳೆದಿದ್ದಾರೆ.