ವಿದ್ಯಾರ್ಥಿಗಳಲ್ಲಿ ಮನೋವಿಕಾಸ ಬೆಳೆಸಲು ಕ್ರೀಡೆ ಸಹಕಾರಿ

ಚನ್ನಗಿರಿ ಸರ್ಕಾರಿ ಕ್ರೀಡಾಂಗಣದಲ್ಲಿ ಗುರುವಾರ ಅಂತರ ಕಾಲೇಜು ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಪ್ರಾಚಾರ್ಯ ಡಾ.ಬಿ.ಜಿ. ಅಮೃತೇಶ್ವರ ಉದ್ಘಾಟಿಸಿದರು. ಜಿ.ಎಸ್. ಸುರೇಶ್, ಡಾ. ಚಂದ್ರಶೇಖರ್, ಎಸ್.ಎಸ್. ಮಧುಕುಮಾರ್, ಜೆ.ಜ್ಯೋತಿಪ್ರಸಾದ್, ಎಂ.ಆರ್.ಶಿವರಾಜ್, ಜ್ಯೋತಿಕೋರಿ ಇದ್ದರು.
ಚನ್ನಗಿರಿ ಸರ್ಕಾರಿ ಕ್ರೀಡಾಂಗಣದಲ್ಲಿ ಗುರುವಾರ ಅಂತರ ಕಾಲೇಜು ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಪ್ರಾಚಾರ್ಯ ಡಾ.ಬಿ.ಜಿ. ಅಮೃತೇಶ್ವರ ಉದ್ಘಾಟಿಸಿದರು. ಜಿ.ಎಸ್. ಸುರೇಶ್, ಡಾ. ಚಂದ್ರಶೇಖರ್, ಎಸ್.ಎಸ್. ಮಧುಕುಮಾರ್, ಜೆ.ಜ್ಯೋತಿಪ್ರಸಾದ್, ಎಂ.ಆರ್.ಶಿವರಾಜ್, ಜ್ಯೋತಿಕೋರಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪ್ರಾಚಾರ್ಯ ಡಾ.ಬಿ.ಜಿ. ಅಮೃತೇಶ್ವರ ಹೇಳಿಕೆ
  • ಪುರುಷರ ಅಂತರ ಕಾಲೇಜು ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿ
  • ಇಂದಿನ ಸೋಲು ಭವಿಷ್ಯದ ಗೆಲುವಿಗೆ ಕಾರಣ
ಚನ್ನಗಿರಿ: ಆರೋಗ್ಯ ಕಾಪಾಡಲು ಕ್ರೀಡೆ ಅತ್ಯಗತ್ಯ ಎಂದು ಪ್ರಾಚಾರ್ಯ ಡಾ.ಬಿ.ಜಿ. ಅಮೃತೇಶ್ವರ ಹೇಳಿದರು.
ಇಲ್ಲಿನ ಸರ್ಕಾರಿ ಕ್ರೀಡಾಂಗಣದಲ್ಲಿ ಗುರುವಾರ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ದಾವಣಗೆರೆ ವಿಶ್ವ ವಿದ್ಯಾಲಯ, ಶ್ರೀ ಶಿವಲಿಂಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪುರುಷರ ಅಂತರ ಕಾಲೇಜು ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿ, ಪುರುಷ ಮತ್ತು ಮಹಿಳಾ ತಂಡಗಳ ಆಯ್ಕೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಕ್ರೀಡೆ ಮಕ್ಕಳಲ್ಲಿ ಸ್ನೇಹ, ಸೌಹಾರ್ದ, ಸ್ಪರ್ಧೆ ಮನೋಭಾವ ಬೆಳೆಸುವ ಮೂಲಕ ಅವರ ಮನೋವಿಕಾಸಕ್ಕೆ ಸಹಕಾರಿಯಾಗಲಿದೆ. ಜತೆಗೆ ಮಿದುಳು ಮತ್ತು ದೇಹದ ಸಂಬಂಧವನ್ನು ಉತ್ತಮ ಪಡಿಸುತ್ತದೆ ಎಂದರು.
ಯುವಜನತೆ ಕ್ರೀಡೆಗಳಲ್ಲಿ ಉತ್ಸಾಹ ದಿಂದ ತೊಡಗಿಕೊಂಡು ದೇಶಕ್ಕೆ ಕೀರ್ತಿ ತರಬೇಕು. ಪ್ರತಿಯೊಬ್ಬರಲ್ಲೂ ಒಂದೊಂದು ವಿಶೇಷ ಪ್ರತಿಭೆ ಇರುತ್ತದೆ. ಕ್ರೀಡೆಯಲ್ಲಿ ಸೋಲು-ಗೆಲುವಿಗಿಂತ ಭಾಗವಹಿಸುವಿಕೆ ಮುಖ್ಯ. ಇಂದಿನ ಸೋಲು ಭವಿಷ್ಯದ ಗೆಲುವಿಗೆ ಕಾರಣವಾಗಿರುತ್ತದೆ ಎಂದು ತಿಳಿಸಿದರು.
ಐಕ್ಯೂಎಸಿ ಸಂಚಾಲಕ ಜಿ.ಎಸ್. ಸುರೇಶ್, ದೈಹಿಕ ಶಿಕ್ಷಣ ನಿರ್ದೇಶಕ ಡಾ. ಚಂದ್ರಶೇಖರ್, ಕಾಲೇಜು ಅಭಿವೃದ್ಧಿ ಸದಸ್ಯರಾದ ಎಸ್.ಎಸ್. ಮಧುಕುಮಾರ್, ಜೆ. ಜ್ಯೋತಿಪ್ರಸಾದ್, ಎಂ.ಆರ್. ಶಿವರಾಜ್, ಜ್ಯೋತಿ ಕೋರಿ, ಎಚ್.ಜೆ. ಸುರೇಶ್. ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ಎಸ್.ಜಿ. ಕಲ್ಲೇಶಪ್ಪ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net