ಸರ್ ಎಂ.ವಿ. ಶಿಕ್ಷಣ ಸಂಸ್ಥೆಯ ಅಭೂತಪೂರ್ವ ಸಾಧನೆ

ಅಮೂಲ್ಯ ಎಸ್. (ಸರ್ ಎಂವಿ ಕಾಲೇಜ್)
ಅಮೂಲ್ಯ ಎಸ್. (ಸರ್ ಎಂವಿ ಕಾಲೇಜ್)
Published on

ಪ್ರಮುಖ ಮುಖ್ಯಾಂಶಗಳು

  • ಕೆಸಿಇಟಿ 2026 ಫಲಿತಾಂಶ
  • ಅಮೂಲ್ಯ ರಾಜ್ಯಕ್ಕೆ ದ್ವಿತೀಯ ರ‌್ಯಾಂಕ್
ದಾವಣಗೆರೆ : ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿರುವ ಕೆಸಿಇಟಿ 2026ರ ಫಲಿತಾಂಶದಲ್ಲಿ ನಗರದ ಸರ್ ಎಂ.ವಿ. ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಇಂಜಿನಿಯರಿಂಗ್, ಪಶು ವೈದ್ಯಕೀಯ, ನ್ಯಾಚುರೋಪಥಿ ಮತ್ತು ಯೋಗಿಕ್ ಸೈನ್ಸಸ್, ಬಿ. ಫಾರ್ಮಾ, ಫಾರ್ಮಾ-ಡಿ, ನರ್ಸಿಂಗ್ ಹಾಗೂ ಕೃಷಿ ವಿಭಾಗಗಳಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಸಂಸ್ಥೆಯ ಶೈಕ್ಷಣಿಕ ಶ್ರೇಷ್ಠತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಸಂಸ್ಥೆಯ ವಿದ್ಯಾರ್ಥಿನಿ ಅಮೂಲ್ಯ ಎಸ್. ಅವರು ಪಶು ವೈದ್ಯಕೀಯ, ಬಿ.ಫಾರ್ಮಾ, ಫಾರ್ಮಾ-ಡಿ, ನರ್ಸಿಂಗ್ ಹಾಗೂ ನ್ಯಾಚುರೋಪಥಿ ವಿಭಾಗಗಳಲ್ಲಿ ರಾಜ್ಯಕ್ಕೆ ದ್ವಿತೀಯ ರ‌್ಯಾಂಕ್ ಗಳಿಸುವ ಮೂಲಕ ಅಪರೂಪದ ದಾಖಲೆಯನ್ನು ನಿರ್ಮಿಸಿದ್ದಾರೆ. ಅವರು ಇಂಜಿನಿಯರಿಂಗ್ ವಿಭಾಗದಲ್ಲಿ 90ನೇ ರ‌್ಯಾಂಕ್ ಹಾಗೂ ಬಿ.ಎಸ್.ಸಿ. ಕೃಷಿ ವಿಭಾಗದಲ್ಲಿ 10ನೇ ರ‌್ಯಾಂಕ್ ಗಳಿಸಿ ಬಹುಮುಖ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ.
ಸಂಸ್ಥೆಯ 83 ವಿದ್ಯಾರ್ಥಿಗಳು ರಾಜ್ಯದ ಟಾಪ್ 100 ರ‌್ಯಾಂಕ್‌ಗಳಲ್ಲಿ, 329 ವಿದ್ಯಾರ್ಥಿಗಳು ಟಾಪ್ 500 ರ‌್ಯಾಂಕ್‌ಗಳಲ್ಲಿ, 696 ವಿದ್ಯಾರ್ಥಿಗಳು ಟಾಪ್ 1000 ರ‌್ಯಾಂಕ್‌ಗಳಲ್ಲಿ ಹಾಗೂ 2768 ವಿದ್ಯಾರ್ಥಿಗಳು ಟಾಪ್ 5000 ರ‌್ಯಾಂಕ್‌ಗಳಲ್ಲಿ ಸ್ಥಾನ ಪಡೆದಿದ್ದಾರೆ.
ಇಂಜಿನಿಯರಿಂಗ್ ವಿಭಾಗದಲ್ಲಿ ಅಮೂಲ್ಯ ಎಸ್. (90), ಪ್ರತೀಕ್ ಎಂ.ಎಸ್. (168), ಶೋಭಿತ್ ಬಿ.ಆರ್. (211), ಸಮೀರ ಎಸ್. (355), ಇಂಚರಾ ಆರ್. (369), ಕಾರ್ತಿಕ್ ಜೆ. (464), ತನುಷ್ ಜೆ. (469), ಯಶಸ್ವಿನಿ ಜೆ.ಎನ್. (478), ಮಹಾಂತೇಶ್ (525), ಆದಿತ್ಯ ಕೊರ (528), ಸ್ಫೂರ್ತಿ ಆರ್.ವಿ. (531), ನಿಖಿಲ್ ಜಿ.ಕೆ. (552).
ಪೂರ್ಣಚಂದ್ರ ಪಿ.ಎಸ್. (585), ಸಮರ್ಥ ಮಹಾಂತೇಶ್ ಪಟ್ಟಣ (586), ಕಿಶೋರ್ ವೈ. (625), ಪ್ರಿಯಾಂಕಾ ಜಿ.ಎಂ. (677), ಅಭಿನವ್ ಜಿ. (703), ಖುಷಿ ವಿ. (775), ಕಿಶನ್ ಪಿ.ಕೆ. (778), ಚಿರಂತನ್ ಎಸ್. (928), ನಿಶ್ಚಲಾ ಎಸ್. (964), ಚೇತನ್ ಎಸ್.ವಿ. (973) ಹಾಗೂ ಅಭಯ್ ಸಿ.ಐ. (979) ಅತ್ಯುತ್ತಮ ರ‌್ಯಾಂಕ್ ಗಳಿಸಿದ್ದಾರೆ.
ಪಶು ವೈದ್ಯಕೀಯ ವಿಭಾಗದಲ್ಲಿ ಅಮೂಲ್ಯ ಎಸ್. ರಾಜ್ಯಕ್ಕೆ 2ನೇ ರ‌್ಯಾಂಕ್ ಗಳಿಸಿದ್ದು, ಖುಷಿ ವಿ. (25), ಅಭಿನವ್ ಜಿ. (29), ಪ್ರಿಯಾಂಕಾ ಜಿ.ಎಂ. (45), ಚಿರಂತನ್ ಎಸ್. (49), ಯಶಸ್ವಿನಿ ಜೆ.ಎನ್. (56), ಸ್ಫೂರ್ತಿ ಆರ್.ವಿ. (71), ಕಾರ್ತಿಕ್ ಜೆ. (89) ಹಾಗೂ ವನ್ಯಾ ಎಸ್.ವಿ. (97) ರಾಜ್ಯದ ಟಾಪ್ 100 ರ‌್ಯಾಂಕ್‌ಗಳಲ್ಲಿ ಸ್ಥಾನ ಪಡೆದಿದ್ದಾರೆ.
ನ್ಯಾಚುರೋಪಥಿ ವಿಭಾಗದಲ್ಲಿ ಅಮೂಲ್ಯ ಎಸ್. ರಾಜ್ಯಕ್ಕೆ 2ನೇ ರ‌್ಯಾಂಕ್ ಗಳಿಸಿದ್ದು, ಖುಷಿ ವಿ. (11), ಅಭಿನವ್ ಜಿ. (18), ಚಿರಂತನ್ ಎಸ್. (22), ಯಶಸ್ವಿನಿ ಜೆ.ಎನ್. (23), ಪ್ರಿಯಾಂಕಾ ಜಿ.ಎಂ. (27), ವನ್ಯಾ ಎಸ್.ವಿ. (29), ಸ್ಫೂರ್ತಿ ಆರ್.ವಿ. (40), ನಿಶ್ಚಲಾ ಎಸ್. (54), ಕಾರ್ತಿಕ್ ಜೆ. (58) ಹಾಗೂ ಅಭಯ್ ಸಿ.ಐ. (83) ರಾಜ್ಯದ ಅಗ್ರ ಸಾಧಕರಾಗಿ ಹೊರಹೊಮ್ಮಿದ್ದಾರೆ.
ಅಗ್ರಿಕಲ್ಚರಲ್ ಬಿಎಸ್ಸಿ ವಿಭಾಗದಲ್ಲಿ ಅಮೂಲ್ಯ ಎಸ್. ರಾಜ್ಯಕ್ಕೆ 10ನೇ ರ‌್ಯಾಂಕ್ ಗಳಿಸಿದ್ದು, ಕಾರ್ತಿಕ್ ಜೆ. (61), ಯಶಸ್ವಿನಿ ಜೆ.ಎನ್. (67), ಸ್ಫೂರ್ತಿ ಆರ್.ವಿ. (80), ಅಭಿನವ್ ಜಿ. (82) ಹಾಗೂ ಖುಷಿ ವಿ. (91) ರಾಜ್ಯದ ಟಾಪ್ 100 ರ‌್ಯಾಂಕ್‌ಗಳಲ್ಲಿ ಸ್ಥಾನ ಪಡೆದಿದ್ದಾರೆ.
ವಿದ್ಯಾರ್ಥಿಗಳ ಸಾಧನೆಯ ಬಗ್ಗೆ ಸಂಸ್ಥೆಯ ಅಧ್ಯಕ್ಷ ವಿ. ಸುರೇಶ್ ಕುಮಾರ್, ಕಾರ್ಯದರ್ಶಿ ಶ್ರೀಧರ್ ಎಸ್.ಜೆ., ಶೈಕ್ಷಣಿಕ ನಿರ್ದೇಶಕ ಸೈಯದ್ ಶಂಶೀರ್ ಹಾಗೂ ಆಡಳಿತ ಮಂಡಳಿಯ ಸದಸ್ಯರು, ಪ್ರಾಚಾರ್ಯರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net