ಅಚಲ ದೃಢನಿಶ್ಚಯಕ್ಕೆ ಶ್ಯಾಮಾಪ್ರಸಾದ್ ಸ್ಫೂರ್ತಿ Sacrifice
ಭಾರತೀಯ ಜನಸಂಘದ ಸಂಸ್ಥಾಪಕ ಶ್ಯಾಮಾ ಪ್ರಸಾದ್ ಮುಖರ್ಜಿ ಅವರ ಭಾವಚಿತ್ರಕ್ಕೆ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹಾಗೂ ಬಿಜೆಪಿ ಪ್ರಮುಖರು ಗೌರವ ನಮನ ಸಲ್ಲಿಸಿದರು. ಅರಕೆರೆ ನಾಗರಾಜ್, ಸುರೇಶ್, ಕುಬೇರಪ್ಪ, ನೆಲಹೊನ್ನೆ, ಮಂಜುನಾಥ್, ಶಿವಾನಂದ್, ಎಸ್.ಎಸ್. ಬೀರಪ್ಪ ಇತರರಿದ್ದರು. Sacrifice
ಹೊನ್ನಾಳಿ: ಈಗ ರದ್ದುಗೊಂಡಿರುವ 370ನೇ ವಿಧಿಯನ್ನು ದೃಢವಾಗಿ ವಿರೋಧಿಸಿದ್ದ ಶ್ಯಾಮಾಪ್ರಸಾದ್ ಮುಖರ್ಜಿ ಜೂ.23ರಂದು ಶ್ರೀನಗರದಲ್ಲಿ ಬಂಧನದಲ್ಲಿದ್ದಾಗ ಅನುಮಾನಾಸ್ಪದವಾಗಿ ನಿಧನರಾದರು ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು. Sacrifice
ಪಟ್ಟಣದಲ್ಲಿ ಮಂಗಳವಾರ ಭಾರತೀಯ ಜನಸಂಘದ ಸಂಸ್ಥಾಪಕ ಶ್ಯಾಮಾಪ್ರಸಾದ್ ಮುಖರ್ಜಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾರ್ವಜನಿಕ ಜೀವನದಲ್ಲಿ ಅವರ ಅಚಲವಾದ ದೃಢನಿಶ್ಚಯ, ಧೈರ್ಯ ಮತ್ತು ರಾಷ್ಟ್ರೀಯ ಹಿತಾಸಕ್ತಿಗೆ ಬದ್ಧತೆಯ ಪೀಳಿಗೆಗೆ ಅವರು ಸ್ಫೂರ್ತಿ ನೀಡಿದ್ದರು. ಭಾರತದ ಅಭಿವೃದ್ಧಿಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಶ್ರೇಷ್ಠ ಮುತ್ಸದ್ಧಿ. ಜಮ್ಮುಕಾಶ್ಮೀರದಲ್ಲಿ ಹಿಂದೂಗಳಿಗೆ ಆಗುತ್ತಿದ್ದ ಅನ್ಯಾಯದ ವಿರುದ್ಧ ನಿರಂತರ ಹೋರಾಟ ಮಾಡಿ ಜಾಗೃತಿ ಮೂಡಿಸಿದ್ದರು. 370ನೇ ವಿಧಿಯನ್ನು ರದ್ದು ಮಾಡಲೇಬೇಕು ಎಂದು ಹೋರಾಟ ನಡೆಸಿದ ಅಪ್ರತಿಮ ದೇಶಭಕ್ತ ಎಂದು ಹೋರಾಟವನ್ನು ಸ್ಮರಿಸಿದರು.
ರಾಷ್ಟ್ರೀಯವಾದಿಯಾಗಿದ್ದ ಶ್ಯಾಮಾಪ್ರಸಾದ್ ಮುಖರ್ಜಿ ಅಖಂಡತೆ ಹಾಗೂ ಏಕತೆಗಾಗಿ ಹಾಗೂ ಒಂದೇ ದೇಶದಲ್ಲಿ ಎರಡು ಕಾನೂನು, ಇಬ್ಬರು ಪ್ರಧಾನಿಗಳು ಇರಲು ಸಾಧ್ಯವಿಲ್ಲ ಎಂದು ಘರ್ಜಿಸಿದರು. ಕಾಶ್ಮೀರದ ಸಂಪೂರ್ಣ ವಿಲೀನಕ್ಕಾಗಿ ತಮ್ಮ ಪ್ರಾಣವನ್ನೇ ಬಲಿಕೊಟ್ಟ ಧೀಮಂತ ವ್ಯಕ್ತಿತ್ವದ ದಾರ್ಶನಿಕ ಎಂದು ತಿಳಿಸಿದರು.
ಒಬ್ಬ ಮುತ್ಸದ್ಧಿ ಹಾಗೂ ಅನುಭವಿ ರಾಜಕಾರಣಿ ಯಾಗಿದ್ದ ಅವರನ್ನು, ಅವರ ಜ್ಞಾನ ಮತ್ತು ನೇರ ನಡೆನುಡಿಗಾಗಿ ಎಲ್ಲರೂ ಗೌರವದಿಂದ ಕಾಣುತ್ತಿದ್ದರು. ಕೇಂದ್ರದಲ್ಲಿ ಕೈಗಾರಿಕ ಸಚಿವರಾಗಿದ್ದಾಗ ಸದನದಲ್ಲಿ ನಿಂತು ಮಾತನಾಡುತ್ತಿದ್ದರೆ ವಿಪಕ್ಷದವರೂ ಕೂತು ಅವರ ಮಾತನ್ನು ಆಲಿಸುತ್ತಿದ್ದರು. ಪಶ್ಚಿಮ ಬಂಗಾಳವನ್ನು ಭಾರತದ ಅವಿಭಾಜ್ಯ ಅಂಗವಾಗಿ ಉಳಿಯುವಂತೆ ಮಾಡುವಲ್ಲಿ ಅವರ ಪಾತ್ರ ಅತ್ಯಮೂಲ್ಯ ಎಂದರು.
ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಬೇಕೆಂಬ ಅಭಿಪ್ರಾಯಕ್ಕೆ ಪಕ್ಷದಲ್ಲೇ ಭಿನ್ನಾಭಿಪ್ರಾಯ ಇದೆಯಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅವರ ಅನಿಸಿಕೆ ಹಂಚಿಕೊಂಡಿದ್ದಾರೆಯೇ ಹೊರತು ಪಕ್ಷದ ಅಧ್ಯಕ್ಷ ಹೇಳಿಕೆಗೆ ವಿರೋಧ ಅಲ್ಲ ಎಂದು ಸ್ಪಷ್ಟಪಡಿಸಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಿಎಂ ಆಗುವ ವೇಳೆ ಜೆಡಿಎಸ್ ಹಾಗೂ ಕಾಂಗ್ರೆಸ್‌ನ 17 ಶಾಸಕರು ಬಂದಿದ್ದರಿಂದ ಬಿಜೆಪಿ ಅಧಿಕಾರ ನಡೆಸಿತ್ತು. ಆದರೆ ಅವರ‌್ಯಾರೂ ಹಣಕ್ಕಾಗಿ ತಮ್ಮ ಪಕ್ಷ ಬಿಟ್ಟು ಬರಲಿಲ್ಲ, ಆ ಪಕ್ಷದ ಮೇಲಿನ ಬೇಸರದಿಂದ ಬಿಜೆಪಿಗೆ ಬಂದರು. ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಮಾತನ್ನು ಒಪ್ಪಲಿಕ್ಕೆ ಸಾಧ್ಯವಿಲ್ಲ ಎಂದರು.
ಶಾಸಕರ ವಿರುದ್ಧ ಕ್ರಮಕ್ಕೆ ಒತ್ತಾಯ: ವಿಧಾನ ಪರಿಷತ್ತು ಚುನಾವಣೆಯಲ್ಲಿ ಕೆಲ ಬಿಜೆಪಿ ಶಾಸಕರು ದುರಾಸೆಯಿಂದ ಅಡ್ಡ ಮತದಾನ ಮಾಡಿ ಪಕ್ಷಕ್ಕೆ ಮುಜುಗರ ತಂದಿದ್ದಾರೆ. ಅಂತಹ ಶಾಸಕರು ಕ್ಷಮೆ ಕೋರಬೇಕು, ಇಲ್ಲದಿದ್ದರೆ ಅವರ ವಿರುದ್ಧ ರಾಜ್ಯಾಧ್ಯಕ್ಷ ವಿಜಯೇಂದ್ರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.