ಗಹನ ವಿಷಯ ಸರಳಗೊಳಿಸುವ ಚುಟುಕು ಸಾಹಿತ್ಯ

ಚನ್ನಗಿರಿ ವಾಲ್ಮೀಕಿ ಸಮುದಾಯ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ನೂತನ ಕಾರ್ಯಕಾರಿ ಸಮಿತಿ ಸದಸ್ಯರ ಪದಗ್ರಹಣ, ರಾಜ್ಯ ಮಟ್ಟದ ಕವಿಗೋಷ್ಠಿ ಹಾಗೂ ಹಿರಿಯರಿಗೆ ಅಭಿನಂದನಾ ಸಮಾರಂಭವನ್ನು ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಉದ್ಘಾಟಿಸಿದರು. ಡಾ. ಬಸವಜಯಚಂದ್ರ ಸ್ವಾಮೀಜಿ, ಮಾಹಿಮಾ ಜೆ. ಪಟೇಲ್, ಹ.ರು. ಗಂಗಾಧರಯ್ಯ ಇತರರಿದ್ದರು.poetry gathering
ಚನ್ನಗಿರಿ ವಾಲ್ಮೀಕಿ ಸಮುದಾಯ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ನೂತನ ಕಾರ್ಯಕಾರಿ ಸಮಿತಿ ಸದಸ್ಯರ ಪದಗ್ರಹಣ, ರಾಜ್ಯ ಮಟ್ಟದ ಕವಿಗೋಷ್ಠಿ ಹಾಗೂ ಹಿರಿಯರಿಗೆ ಅಭಿನಂದನಾ ಸಮಾರಂಭವನ್ನು ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಉದ್ಘಾಟಿಸಿದರು. ಡಾ. ಬಸವಜಯಚಂದ್ರ ಸ್ವಾಮೀಜಿ, ಮಾಹಿಮಾ ಜೆ. ಪಟೇಲ್, ಹ.ರು. ಗಂಗಾಧರಯ್ಯ ಇತರರಿದ್ದರು.poetry gathering
Published on

ಪ್ರಮುಖ ಮುಖ್ಯಾಂಶಗಳು

  • ಡಾ. ಬಸವಜಯಚಂದ್ರ ಸ್ವಾಮೀಜಿ ಹೇಳಿಕೆ
  • ರಾಜ್ಯ ಮಟ್ಟದ ಕವಿಗೋಷ್ಠಿ
  • ನೂತನ ಕಾರ್ಯಕಾರಿ ಸಮಿತಿ ಸದಸ್ಯರ ಪದಗ್ರಹಣ
ಚನ್ನಗಿರಿ: ಪ್ರೇಮ, ರಾಜಕೀಯ ಹಾಗೂ ಅಧ್ಯಾತ್ಮದಂತಹ ಗಹನ ವಿಷಯಗಳನ್ನು ಅತ್ಯಂತ ಕಡಿಮೆ ಪದಗಳಲ್ಲಿ ಮನಮುಟ್ಟುವಂತೆ ಹೇಳುವ ಶಕ್ತಿ ಚುಟುಕು ಸಾಹಿತ್ಯಕ್ಕಿದೆ ಎಂದು ಹಾಲಸ್ವಾಮಿ ವಿರಕ್ತಮಠದ ಡಾ. ಬಸವಜಯಚಂದ್ರ ಸ್ವಾಮೀಜಿ ಹೇಳಿದರು.
ಇಲ್ಲಿನ ವಾಲ್ಮೀಕಿ ಸಮುದಾಯ ಭವನದಲ್ಲಿ ಶುಕ್ರವಾರ ಚುಟುಕು ಸಾಹಿತ್ಯ ಪರಿಷತ್ ತಾಲೂಕು ಘಟಕದಿಂದ ಹಮ್ಮಿಕೊಂಡಿದ್ದ ನೂತನ ಕಾರ್ಯಕಾರಿ ಸಮಿತಿ ಸದಸ್ಯರ ಪದಗ್ರಹಣ, ರಾಜ್ಯ ಮಟ್ಟದ ಕವಿಗೋಷ್ಠಿ ಹಾಗೂ ಹಿರಿಯರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಕವಿತೆಯ ಗಾತ್ರಕ್ಕಿಂತ ಅದು ನೀಡುವ ಅನುಭವ ಮುಖ್ಯ. ಚುಟುಕು ಕವನಗಳು ಕೇವಲ ಹಾಸ್ಯಕ್ಕೆ ಸೀಮಿತವಾಗದೆ, ಸಮಕಾಲೀನ ಸಮಾಜದ ವಾಸ್ತವಕ್ಕೆ ಕನ್ನಡಿ ಹಿಡಿಯಬೇಕು. ಸರಳತೆಯ ಮೂಲಕ ಸಾಹಿತ್ಯೇತರ ಜನರನ್ನು ಆಕರ್ಷಿಸುವ ಗುಣ ಈ ಪ್ರಕಾರಕ್ಕಿದೆ. ಹೊಸಬರು ಚುಟುಕುಗಳ ಮೂಲಕ ಬರವಣಿಗೆ ಆರಂಭಿಸಿ, ಕ್ರಮೇಣ ಸಾಹಿತ್ಯದ ಇತರ ಪ್ರಕಾರಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮಾತನಾಡಿ, ಚುಟುಕು ಸಾಹಿತ್ಯ ಪರಿಷತ್ತು ಸ್ಥಳೀಯ ಪ್ರತಿಭೆಗಳನ್ನು ಗುರುತಿಸುವಲ್ಲಿ ನಿರಂತರವಾಗಿ ಶ್ರಮಿಸುತ್ತಿದೆ. ಇಂತಹ ಗೋಷ್ಠಿಗಳು ಕನ್ನಡ ನಾಡು-ನುಡಿ, ಪರಿಸರ, ವರದಕ್ಷಿಣೆಯಂತಹ ಸಾಮಾಜಿಕ ಪಿಡುಗುಗಳ ಬಗ್ಗೆ ಜಾಗೃತಿ ಮೂಡಿಸುತ್ತವೆ. ಹೊಸ ಪ್ರತಿಭೆಗಳಿಗೆ ರಾಜ್ಯ ಮಟ್ಟದ ವೇದಿಕೆ ಕಲ್ಪಿಸಿಕೊಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಜೀವ ವೈವಿಧ್ಯ ನಿಗಮದ ಅಧ್ಯಕ್ಷ ವಡ್ನಾಳ್ ಜಗದೀಶ್ ಮಾತನಾಡಿ, ನಮ್ಮ ಸುತ್ತಲಿನ ಪರಿಸರ ಮತ್ತು ಮಾನವ ಸಂಬಂಧಗಳು ಸಾಹಿತ್ಯಕ್ಕೆ ಮೂಲವಸ್ತುಗಳು. ಹೊಸ ಸಾಹಿತಿಗಳಿಗೆ ಅತಿ ಸುಲಭವಾಗಿ ವೇದಿಕೆ ಒದಗಿಸುವುದು ಚುಟುಕು ಸಾಹಿತ್ಯ ಮಾತ್ರ ಎಂದು ತಿಳಿಸಿದರು.
ಮಾಜಿ ಶಾಸಕ ಮಹಿಮಾ ಜೆ ಪಟೇಲ್, ತ್ಯಾವಣಿಗೆ ಹ.ರು. ಗಂಗಾಧರಯ್ಯ, ಮಾನವ ಹಕ್ಕುಗಳ ಪ್ರತಿಷ್ಠಾನದ ತಾಲೂಕಾಧ್ಯಕ್ಷ ಸಿ.ಆರ್. ನಾಗೇಂದ್ರಪ್ಪ, ಕಾಂಗ್ರೆಸ್ ಮುಖಂಡರಾದ ಜ್ಯೋತಿ ಕೋರಿ, ಕರವೇ ಅಧ್ಯಕ್ಷ ಮ್ಲಾನಾಯ್ಕ, ಕೋಗಲೂರು ಸಾಹಿತಿ ಶರಣಪ್ಪ, ಪುರಸಭೆ ಮಾಜಿ ಸದಸ್ಯರಾದ ಕಮಲ ಹರೀಶ್, ಪಟ್ಲಿ ನಾಗರಾಜ್, ಪತ್ರಕರ್ತ ಸತೀಶ್ ಪವಾರ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net