ದಾವಣಗೆರೆ: ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ. ಶೆಟ್ಟಿ ಮೂವರೂ ನಾಯಕನಟರಾಗಿ ಅಭಿನಯಿಸಿದ ‘45’ ಸಿನಿಮಾದ ಟೀಸರ್ ಡಿ. 15ರಂದು ಬಿಡುಗಡೆಯಾಗಲಿದೆ. ಈ ಸಂದರ್ಭದಲ್ಲಿ ನೇರ ಪ್ರಸಾರ ಆಗಲಿರುವ ಹುಬ್ಬಳ್ಳಿ, ಮಂಗಳೂರು, ಉಡುಪಿ, ತುಮಕೂರು, ಹೊಸಪೇಟೆ, ಶಿವಮೊಗ್ಗ, ದಾವಣಗೆರೆ ಏಳೂ ಜಿಲ್ಲೆಗಳ ಅಭಿಮಾನಿಗಳು, ಪ್ರೇಕ್ಷಕರೊಂದಿಗೆ ಶಿವರಾಜ್‌ಕುಮಾರ್, ಉಪೇಂದ್ರ ಅವರು ಸಂವಾದ ನಡೆಸುವರು.