ಹಿಂದೂ ಸ್ವರಾಜ್ಯ ಸ್ಥಾಪನೆಗೆ ಷಹಾಜಿ ಮಹಾರಾಜರೇ ಪ್ರೇರಣೆ

ಚನ್ನಗಿರಿ ತಾಲೂಕಿನ ಹೊದಿಗೆರೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಷಹಾಜಿ ರಾಜೆ ಬೊಂಸ್ಲೇ ಮಹಾರಾಜರ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಗೋಸಾಯಿ ಮಹಾಸಂಸ್ಥಾನ ಮಠದ ಶ್ರೀ ಭವಾನಿದತ್ತಪೀಠದ ಮಂಜುನಾಥ ಭಾರತಿ ಸ್ವಾಮೀಜಿ ಉದ್ಘಾಟಿಸಿದರು. ಎಂ.ಜಿ. ಮಾರುತಿರಾವ್ ಮೂಳೆ, ಜಿ.ಎಚ್. ಮರಿಯೋಜಿರಾವ್, ಮಾಡಾಳು ವಿರೂಪಾಕ್ಷಪ್ಪ ಇತರರಿದ್ದರು.Commemoration
ಚನ್ನಗಿರಿ ತಾಲೂಕಿನ ಹೊದಿಗೆರೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಷಹಾಜಿ ರಾಜೆ ಬೊಂಸ್ಲೇ ಮಹಾರಾಜರ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಗೋಸಾಯಿ ಮಹಾಸಂಸ್ಥಾನ ಮಠದ ಶ್ರೀ ಭವಾನಿದತ್ತಪೀಠದ ಮಂಜುನಾಥ ಭಾರತಿ ಸ್ವಾಮೀಜಿ ಉದ್ಘಾಟಿಸಿದರು. ಎಂ.ಜಿ. ಮಾರುತಿರಾವ್ ಮೂಳೆ, ಜಿ.ಎಚ್. ಮರಿಯೋಜಿರಾವ್, ಮಾಡಾಳು ವಿರೂಪಾಕ್ಷಪ್ಪ ಇತರರಿದ್ದರು.Commemoration
Published on

ಪ್ರಮುಖ ಮುಖ್ಯಾಂಶಗಳು

  • ಮಂಜುನಾಥ ಭಾರತಿ ಸ್ವಾಮೀಜಿ ಅಭಿಮತ
  • 362ನೇ ಪುಣ್ಯಸ್ಮರಣೆ ಕಾರ್ಯಕ್ರಮ
ಚನ್ನಗಿರಿ: ಮರಾಠ ಸಾಮ್ರಾಜ್ಯ ಸಂಸ್ಥಾಪಕ ಷಹಾಜಿ ರಾಜೇ ಬೊಂಸ್ಲೇ ಮಹಾರಾಜರು ಜನಿಸದೆ ಹೋಗಿದ್ದರೆ ಶಿವಾಜಿ ಮಹಾರಾಜರಂತಹ ವೀರ ಪುತ್ರ ಹಾಗೂ ಹಿಂದೂ ಸ್ವರಾಜ್ಯದ ಸ್ಥಾಪನೆ ಸಾಧ್ಯವಾಗುತ್ತಿರಲಿಲ್ಲ ಎಂದು ಗೋಸಾಯಿ ಮಹಾಸಂಸ್ಥಾನ ಮಠದ ಶ್ರೀ ಭವಾನಿ ದತ್ತಪೀಠದ ಮಂಜುನಾಥ ಭಾರತಿ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಹೊದಿಗೆರೆ ಗ್ರಾಮದಲ್ಲಿ ಶುಕ್ರವಾರ ಷಹಾಜಿ ರಾಜೇ ಬೊಂಸ್ಲೆ ಸ್ಮಾರಕ ಅಭಿವೃದ್ಧಿ ಮತ್ತು ಸೇವಾ ಟ್ರಸ್ಟ್ ಹಮ್ಮಿಕೊಂಡಿದ್ದ ಷಹಾಜಿರಾಜೇ ಬೊಂಸ್ಲೆ ಮಹಾರಾಜರ 362ನೇ ಪುಣ್ಯಸ್ಮರಣೆ ಉದ್ಘಾಟಿಸಿ ಮಾತನಾಡಿದರು.
ಮೊಘಲರ ಹಾವಳಿಯಿಂದ ನಲುಗಿದ್ದ ಹಿಂದೂಸ್ಥಾನವನ್ನು ಒಗ್ಗೂಡಿಸಿ, ಹಿಂದೂ ಸಾಮ್ರಾಜ್ಯ ಕಟ್ಟುವ ಉದ್ದೇಶದಿಂದ ಜೀವದ ಹಂಗು ತೊರೆದು ಹೋರಾಡಿದ ಮೊದಲ ರಾಜ ಷಹಾಜಿ ರಾಜೇ. ಅಂದು ಅವರು ಬುನಾದಿ ಹಾಕಿಕೊಟ್ಟಿದ್ದರಿಂದಲೇ ಶಿವಾಜಿ ಮಹಾರಾಜರಿಗೆ ರಾಜ್ಯ ಕಟ್ಟಲು ಸಾಧ್ಯವಾಯಿತು ಎಂದರು.
ಇಂತಹ ಮಹಾನ್ ಚೇತನರ ಸಮಾಧಿ ಇರುವ ಹೊದಿಗೆರೆ ಪುಣ್ಯಭೂಮಿ. ಈ ಸ್ಥಳದ ಅಭಿವೃದ್ಧಿಗೆ ಸಚಿವ ಸತೀಶ್ ಜಾರಕಿಹೊಳಿ ಈಗಾಗಲೇ 5 ಕೋಟಿ ರೂ. ನೀಡಿದ್ದಾರೆ. ಈ ಸಮಾಧಿಯನ್ನು ಶೀಘ್ರವೇ ಇದನ್ನು ವಿಶ್ವಕ್ಕೆ ಪರಿಚಯಿಸುವ ಕೆಲಸ ಮಾಡಲಾಗುವುದು ಎಂದರು.
ವಿಧಾನ ಪರಿಷತ್ ಸದಸ್ಯ ಎಂ.ಜಿ. ಮಾರುತಿರಾವ್ ಮೂಳೆ ಮಾತನಾಡಿ, ಯಾವ ಸಮಾಜ ಇತಿಹಾಸವನ್ನು ಮರೆಯುತ್ತದೆಯೋ ಅದು ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ ಎಂದು ಅಂಬೇಡ್ಕರ್ ಹೇಳಿದ್ದಾರೆ. ನಮ್ಮ ಸಮಾಜ ಸಂಘಟಿತವಾಗಬೇಕಿದೆ. ಷಹಾಜಿ ಮಹಾರಾಜರ ಸಮಾಧಿ ಸ್ಥಳದ ಶಾಶ್ವತ ಅಭಿವೃದ್ಧಿಗೆ ಷಹಾಜಿರಾಜೇ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಬೇಕು. ಈ ಬಗ್ಗೆ ಬಜೆಟ್ ನಂತರ ಮುಖ್ಯಮಂತ್ರಿ ಬಳಿ ನಿಯೋಗ ಕೊಂಡೊಯ್ಯಲಾಗುವುದು ಎಂದು ತಿಳಿಸಿದರು.
ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಚ್. ಮರಿಯೋಜಿರಾವ್ ಮಾತನಾಡಿ, ಈ ಸ್ಥಳದಲ್ಲಿ ಷಹಾಜಿ ಅವರ ಹೆಸರಿನಲ್ಲಿ ಸೈನಿಕ ಶಾಲೆ ಮತ್ತು ಕೌಶಲ ತರಬೇತಿ ಕೇಂದ್ರ ಪ್ರಾರಂಭವಾಗಬೇಕು. ಮರಾಠರು ಈ ನೆಲದ ಮೂಲನಿವಾಸಿಗಳು. ಶೈಕ್ಷಣಿಕವಾಗಿ ಮುಂದೆ ಬಂದಾಗ ಮಾತ್ರ ಸಮಾಜಕ್ಕೆ ಶಕ್ತಿ ಬರಲಿದೆ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹೊದಿಗೆರೆ ರಮೇಶ್, ದಾವಣಗೆರೆ ಕ್ಷತ್ರಿಯ ಮರಾಠ ವಿದ್ಯಾವರ್ಧಕ ಸಂಘ ಗೌರವಾಧ್ಯಕ್ಷ ಯಶವಂತರಾವ್ ಜಾಧವ್, ಅಧ್ಯಕ್ಷ ಮಾಲತೇಶ್‌ರಾವ್ ಜಾಧವ್, ಕಣಿವೆಬಿಳಚಿ ಅಣ್ಣೋಜಿ ರಾವ್, ಕುಬೇಂದ್ರೋಜಿರಾವ್, ವೈ.ಎಂ. ರಾಮಚಂದ್ರರಾವ್, ಎಂ.ಎಂ. ಮಂಜುನಾಥ್ ಜಾಧವ್, ತಾಲೂಕು ಮರಾಠ ಸಮಾಜದ ಅಧ್ಯಕ್ಷ ಎಂ.ಬಿ. ಶಿವಾಜಿರಾವ್, ಲತಾಕಾಳೆ ಇದ್ದರು.

ನಾನು ಶಾಸಕನಾಗಿದ್ದಾಗ ಸ್ಮಾರಕ ಅಭಿವೃದ್ಧಿಗೆ ಲಕ್ಷಾಂತರ ರೂ. ಅನುದಾನ ಮಂಜೂರು ಮಾಡಿಸಿದ್ದೆ. ಸಮಾಜದ ಸಂಘಟನೆಯ ಕೊರತೆಯಿಂದ ಆ ಹಣ ಬಳಕೆಯಾಗದೆ ಸರ್ಕಾರದಲ್ಲೇ ಉಳಿಯುವಂತಾಯಿತು. ಅಭಿವೃದ್ಧಿಗಾಗಿ ಒಗ್ಗಟ್ಟು ಪ್ರದರ್ಶಿಸುವುದು ಅನಿವಾರ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net