ತಂದೆ-ತಾಯಿ ಕಳೆದುಕೊಂಡ ಮಕ್ಕಳಿಗೆ 50 ಸಾವಿರ ರೂ.

ಜಗಳೂರು ಹಾಲೇಕಲ್ಲು ಗ್ರಾಮಕ್ಕೆ ಬುಧವಾರ ಭೇಟಿ ನೀಡಿದ ಶಾಸಕ ಬಿ. ದೇವೇಂದ್ರಪ್ಪ ಅನಾಥ ಮಕ್ಕಳ ವಿದ್ಯಾಭ್ಯಾಸಕ್ಕೆ  50 ಸಾವಿರ ರೂ. ನೆರವು ನೀಡಿದರು. ಓಮಣ್ಣ, ಲೋಹಿತ್, ಬಿ.ಮಹೇಶ್ವರಪ್ಪ, ಪಲ್ಲಾಗಟ್ಟೆ ಶೇಖರಪ್ಪ, ಮಹಮದ್ ಗೌಸ್, ಎನ್.ಟಿ. ಎರ‌್ರಿಸ್ವಾಮಿ, ಕಲ್ಲಮ್ಮ ನಾಗರಾಜಪ್ಪ ಇದ್ದರು.Aid
ಜಗಳೂರು ಹಾಲೇಕಲ್ಲು ಗ್ರಾಮಕ್ಕೆ ಬುಧವಾರ ಭೇಟಿ ನೀಡಿದ ಶಾಸಕ ಬಿ. ದೇವೇಂದ್ರಪ್ಪ ಅನಾಥ ಮಕ್ಕಳ ವಿದ್ಯಾಭ್ಯಾಸಕ್ಕೆ 50 ಸಾವಿರ ರೂ. ನೆರವು ನೀಡಿದರು. ಓಮಣ್ಣ, ಲೋಹಿತ್, ಬಿ.ಮಹೇಶ್ವರಪ್ಪ, ಪಲ್ಲಾಗಟ್ಟೆ ಶೇಖರಪ್ಪ, ಮಹಮದ್ ಗೌಸ್, ಎನ್.ಟಿ. ಎರ‌್ರಿಸ್ವಾಮಿ, ಕಲ್ಲಮ್ಮ ನಾಗರಾಜಪ್ಪ ಇದ್ದರು.Aid
Published on
ಜಗಳೂರು: ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳದಲ್ಲಿ ತಂದೆ-ತಾಯಿಯನ್ನು ಕಳೆದುಕೊಂಡು ಅನಾಥರಾದ ನಾಲ್ವರು ಹೆಣ್ಣು ಮಕ್ಕಳ ನೋವಿಗೆ ಜಗಳೂರು ಶಾಸಕ ಬಿ. ದೇವೇಂದ್ರಪ್ಪ ಸ್ಪಂದಿಸಿದ್ದಾರೆ. ನೊಂದವರಿಗೆ ನೆರವು ಕಾರ್ಯಕ್ರಮದಡಿ ಸಂತ್ರಸ್ತ ಕುಟುಂಬಕ್ಕೆ 50 ಸಾವಿರ ರೂ. ಆರ್ಥಿಕ ನೆರವು ನೀಡಿದ್ದಾರೆ.
ತಾಲೂಕಿನ ಹಾಲೇಕಲ್ಲು ಗ್ರಾಮದಲ್ಲಿ ಜ. 9 ರಂದು ನಡೆದ ದುರಂತ ಘಟನೆಯಲ್ಲಿ ಶಾರಮ್ಮ ಮತ್ತು ಪ್ರಸನ್ನಕುಮಾರ್ ದಂಪತಿ ಸಾವಿಗೀಡಾಗಿದ್ದರು. ಬುಧವಾರ ಗ್ರಾಮಕ್ಕೆ ಭೇಟಿ ನೀಡಿದ ಶಾಸಕರು, ಅನಾಥ ಮಕ್ಕಳನ್ನು ಕಂಡು ಮರುಗಿದರು.
ಘಟನೆಯ ವಿವರ: ಶಾರಮ್ಮ ಮತ್ತು ಪತಿ ಪ್ರಸನ್ನಕುಮಾರ್ ನಡುವಿನ ಜಗಳ ವಿಕೋಪಕ್ಕೆ ತಿರುಗಿ, ಶಾರಮ್ಮ ಹಲ್ಲೆಗೊಳಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಇದರಿಂದ ಭಯಗೊಂಡ ಪ್ರಸನ್ನಕುಮಾರ್ ನೇಣಿಗೆ ಶರಣಾಗಿದ್ದರು. ಇತ್ತ ಚಿಕಿತ್ಸೆ ಫಲಕಾರಿಯಾಗದೆ ಶಾರಮ್ಮ ಸಹ ಮೃತಪಟ್ಟಿದ್ದರು. ಇದರಿಂದಾಗಿ ಅವರ ನಾಲ್ವರು ಹೆಣ್ಣು ಮಕ್ಕಳು ಅನಾಥವಾಗಿದ್ದರು.
ಮಕ್ಕಳ ಪೋಷಕರಾದ ಅಜ್ಜಿ ಸುವರ್ಣಮ್ಮ ಮತ್ತು ಅಜ್ಜ ಚಂದ್ರಪ್ಪ ಅವರಿಗೆ ಸಾಂತ್ವನ ಹೇಳಿದ ಶಾಸಕರು, ಮಕ್ಕಳ ಶಿಕ್ಷಣ ಮತ್ತು ಆರೋಗ್ಯಕ್ಕೆ ನಿಮ್ಮ ಸಹಕಾರ ಮುಖ್ಯ. ಎಷ್ಟೇ ಕಷ್ಟ ಬಂದರೂ ಮಕ್ಕಳನ್ನು ಶಾಲೆ ಬಿಡಿಸಬೇಡಿ. ನಿಮ್ಮೊಂದಿಗೆ ನಾನಿದ್ದೇನೆ ಎಂದು ಧೈರ್ಯ ತುಂಬಿದರು.
ತಕ್ಷಣವೇ ಸಿಡಿಪಿಒ ಬೀರೇಂದ್ರಕುಮಾರ್ ಅವರಿಗೆ ಕರೆ ಮಾಡಿದ ಶಾಸಕರು, ಇಲಾಖೆಯಿಂದ ಈ ಕುಟುಂಬಕ್ಕೆ ಏನೆಲ್ಲ ಸಹಾಯ ಮಾಡಲು ಸಾಧ್ಯವೋ ಅದನ್ನು ಮಾಡಬೇಕು. ಶನಿವಾರ ನನ್ನನ್ನು ಭೇಟಿ ಮಾಡಿ ಮಾಹಿತಿ ನೀಡಬೇಕು ಎಂದು ಸೂಚಿಸಿದರು.
ಇದೇ ವೇಳೆ ಹಾಲೇಕಲ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಪಿಡಿಒ ಅವರು ಕುಟುಂಬಕ್ಕೆ 10 ಸಾವಿರ ರೂ.ಗಳ ಚೆಕ್ ವಿತರಿಸಿದರು.
ಕುರುಬ ಸಮಾಜದ ಅಧ್ಯಕ್ಷ ಓಮಣ್ಣ, ಪಿಡಿಒ ಲೋಹಿತ್, ನಿವೃತ್ತ ಅಧಿಕಾರಿ ಬಿ. ಮಹೇಶ್ವರಪ್ಪ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಪಲ್ಲಾಗಟ್ಟೆ ಶೇಖರಪ್ಪ, ಮಹಮ್ಮದ್ ಗೌಸ್, ಸಾಹಿತಿ ಎನ್.ಟಿ. ಎಕ್ಯಸ್ವಾಮಿ, ಗ್ರಾಪಂ ಅಧ್ಯಕ್ಷೆ ಕಲ್ಲಮ್ಮ ನಾಗರಾಜಪ್ಪ, ರಘು ಆಚಾರ್, ಎ.ಕೆ. ಬಸವರಾಜ್, ಗೋಡಿಬಸಪ್ಪ, ರೇವಣ್ಣ, ಹರೀಶ್‌ಗೌಡ, ಬಸವರಾಜ್, ಲಿಂಗಣ್ಣನಹಳ್ಳಿ ಅಜ್ಜಯ್ಯ, ಪಪಂ
ಮಾಜಿ ಅಧ್ಯಕ್ಷ ಮಂಜುನಾಥ್, ಹಟ್ಟಿ ತಿಪ್ಪೇಸ್ವಾಮಿ ಮತ್ತಿತರರು ಹಾಜರಿದ್ದರು.

ದತ್ತು ಪಡೆಯಲು ನಿರ್ಧಾರ

ಪಾಲಕರನ್ನು ಕಳೆದುಕೊಂಡ ನಾಲ್ಕು ಮಕ್ಕಳಲ್ಲಿ ಒಂದು ಹೆಣ್ಣು ಮಗುವನ್ನು ದತ್ತು ಪಡೆಯಲಾಗುವುದು ಎಂದು ಕಾಂಗ್ರೆಸ್ ಮುಖಂಡ ಹಾಗೂ ವಿಜಯನಗರ ಜಿಲ್ಲೆಯ ಮಡಿವಾಳ ಸಮುದಾಯದ ಜಿಲ್ಲಾಧ್ಯಕ್ಷ ಯರಬಳ್ಳಿ ಉಮಾಪತಿ ಭರವಸೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net